Monday, November 25, 2024
Homeರಾಜ್ಯರಾಮನಗರ ಹೆಸರು ಬದಲಿಸಿದವರು ಸರ್ವನಾಶ ಆಗುತ್ತಾರೆ : ಹೆಚ್ಡಿಕೆ ಕಿಡಿ

ರಾಮನಗರ ಹೆಸರು ಬದಲಿಸಿದವರು ಸರ್ವನಾಶ ಆಗುತ್ತಾರೆ : ಹೆಚ್ಡಿಕೆ ಕಿಡಿ

ನವದೆಹಲಿ, ಜು. 27- ರಾಮನಗರ ಜಿಲ್ಲೆಗೆ ರಾಮನ ಹೆಸರು ತೆಗೆಯಲು ಆಗಲ್ಲ. ಈ ಭೂಮಿ ಇರುವ ತನಕ ರಾಮನಗರ ಹೆಸರನ್ನು ತೆಗೆಯಲು ಸಾಧ್ಯವಿಲ್ಲ. ಒಂದು ವೇಳೆ ತಮ್ಮ ಸ್ವಾರ್ಥಕ್ಕಾಗಿ ಹೆಸರು ಬದಲಾವಣೆ ಮಾಡಿದರೆ, ಆ ಕೃತ್ಯ ಎಸಗಿದವರು ಸರ್ವನಾಶ ಆಗುತ್ತಾರೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಹೆಸರನ್ನು ತೆಗೆದು ಬೆಂಗಳೂರು ದಕ್ಷಿಣ ಎಂದು ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ.

ಜಿಲ್ಲೆ ರಚನೆ ಮಾಡಿ ರಾಮನಗರ ಎಂದು ಹೆಸರಿಡುವಾಗ, ವಿಧಾನಸಭೆ ಕ್ಷೇತ್ರಕ್ಕೆ ರಾಮನಗರ ಎಂದು ಹೆಸರು ಇಡುವಾಗ ಯಾವುದೇ ಮಾತು ಆಡಲೇ ಇಲ್ಲ. ತಕರಾರು ಮಾಡಲಿಲ್ಲ. ಈಗ ಸ್ವಾರ್ಥಕ್ಕಾಗಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಮೊದಲು ಕಾನೂನು ವ್ಯವಸ್ಥೆ ಸರಿ ಮಾಡಲಿ. ರಾಮನಗರ ಎಷ್ಟು ಅಭಿವೃದ್ಧಿ ಆಗಿದೆ ಅನ್ನುವುದನ್ನು ನೋಡಲಿ. ಹೆಸರು ಬದಲಾವಣೆಯಿಂದ ಭೂಮಿಗೆ ಬೆಲೆ ಬರಲ್ಲ. ಹೆಸರು ಬದಲಾಯಿಸಿದರೆ ಅವರ ಪತನ ಶುರುವಾಯಿತು ಎಂದೇ ಲೆಕ್ಕ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

2028 ಅಥವಾ ಅದರೊಳಗೆಯೇ ಆ ಜಿಲ್ಲೆಗೆ ರಾಮನಗರ ಹೆಸರು ಮತ್ತೆ ಬರುತ್ತದೆ. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ರಾಜ್ಯದ ಮುಂದಿನ ರಾಜಕೀಯ ಭವಿಷ್ಯವನ್ನು ಸೂಚ್ಯವಾಗಿ ನುಡಿದ್ದಾರೆ.

RELATED ARTICLES

Latest News