Monday, February 24, 2025
Homeರಾಜ್ಯ"ಕನ್ನಡ ಭಾಷೆಗೆ ಗೌರವ ಕೊಡದವರು ಬೆಳಗಾವಿ ಬಿಟ್ಟು ತೊಲಗಿ"

“ಕನ್ನಡ ಭಾಷೆಗೆ ಗೌರವ ಕೊಡದವರು ಬೆಳಗಾವಿ ಬಿಟ್ಟು ತೊಲಗಿ”

"Those who do not respect the Kannada language should leave Belgaum"

ಬೆಂಗಳೂರು,ಫೆ.24-ಕನ್ನಡ ಭಾಷೆಗೆ ಗೌರವ ಕೊಡದವರು ಬೆಳಗಾವಿ ಬಿಟ್ಟು ತೊಲಗಿ ಎಂದು ಕರ್ನಾಟಕ ಗಡಿ ಹೋರಾಟ ಸಮಿತಿ ಅಧ್ಯಕ್ಷ ರಾವ್‌ ಬೈಂದೂರ್ ಆಕ್ರೋಶ ಹೊರಹಾಕಿದ್ದಾರೆ.

ಕನ್ನಡ ಮಾತನಾಡಿ ಎಂದಿದ್ದಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಹಾಗು ಚಾಲಕನ ಮೇಲೆ ಹಲ್ಲೆ ನಡೆಸಿ ಸುಳ್ಳು ನೀಡಿರುವುದು ಸರಿಯಲ್ಲ ಕೂಡಲೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಮಧ್ಯೆ ಪ್ರವೇಶಿಸಿ ಈ ಸುಳ್ಳು ದೂರನ್ನು ಹಿಂದಕೆ ಪಡೆದು ಕನ್ನಡಿಗರ ಮೇಲೆ ಆದರಲ್ಲೂ ಕರ್ತವ್ಯನಿರತ ಬಸ್ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆಸಿರುವ ಎಲ್ಲಾ ಆರೋಪಿಗಳನ್ನು ತಕ್ಷಣ ಬಂದಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ಗಡಿ ಹೋರಾಟ ಸಮಿತಿಯೇ ಇಂತ ಭಾಷಾ ವಿದ್ರೋಹಿ ಮರಾಠಿಗಳನ್ನು ರಾಜ್ಯದಿಂದ ಹೆಡೆಮುರಿ ಕಟ್ಟಿನಾಡಿನ ಗಡಿಯಿಂದಾಚೆಗೆ ಹಬ್ಬುವ ಮೂಲಕ : ಕನ್ನಡಿಗರು ಭಾಷೆ. ಮಾನ ಪ್ರಾಣ ರಕ್ಷಿಸಿ ಕೊಳ್ಳಬೇಕಾದೀತು ಎಂದು ಎಚ್ಚರಿಸಿದ್ದಾರೆ.

ಇಂತಹ ಘಟನೆಯ ಕಾರಣಕರ್ತರನ್ನು ಹೆಡೆಮುರಿ ಕಟ್ಟಿ ಗಡಿಪಾರು ಮಾಡುವ ಆದೇಶ ಮೂಲಕ ನಾಡಿನ ಕಾನೂನು ಸುವ್ಯವಸ್ಥೆ ಯೊಂದಿಗೆ ನಾಡಿನ ಶಾಂತಿ ಕಾಪಾಡಲಿ. ಇಂತಹ ಘಟನೆಗೆ ಇಂಬುಕೊಡುವ ಇಂತಹ ಮರಾಠಿ ಪುಂಡರ ಪರ ರುವ ಪೊಲೀಸರನ್ನು ತಕ್ಷಣ ವರ್ಗಾವಣೆ ಮಾಡಿ ಅವರ ಜಾಗಕ್ಕೆ ಐ.ಪಿ.ಎಸ್.ಕನ್ನಡಿಗ ಖಡಕ್ ಅಧಿಕಾರಿಯನ್ನು ನೇಮಿಸುವ ಮೂಲಕ ಗಡಿನಾಡ ಬೆಳಗಾವಿಯ ಸೂಕ್ತ ಪ್ರದೇಶದಲ್ಲಿ ಇಂತಹ ಘಟನೆ ನಡೆಯದಂತೆ, ಜಾಗೃತಿ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತೀಚಿಗೆ ಮರಾಠಿ ಪ್ರಾಬಲ್ಯ ಹೆಚ್ಚಲು ಜಿಲ್ಲಾಡಳಿತವೇ ಕಾರಣ ಎಂಬ ಕೂಗು ಕೇಳಿಬರುತ್ತಿದ್ದು, ಈ ಎಲ್ಲಾ ರಾದ್ದಾಂತಕ್ಕೆ ಜಿಲ್ಲಾಧಿಕಾರಿ ಮಹಮರ್ ರೋಷ ಇತ್ತೀಚಿಗೆ ಕೇಂದ್ರ ಭಾಷಾ ಅಲ್ಪಸಂಖ್ಯಾತ ಆಯೋಗದ ಉಪ ಆಯುಕ್ತ ಶಿವಕುಮಾರ್ ಬೆಳಗಾವಿಗೆ ಭೇಟಿ ನೀಡಿದಾಗ ಮರಾಠಿ ಭಾಷೆಯಲ್ಲಿ ಸರ್ಕಾರಿ ದಾಖಲೆ ನೀಡುವುದಾಗಿ ಭರವಸೆ ನೀಡಿದ್ದರೆಂದು ಆರೋಪಿಸಿದರು.

ಕನ್ನಡ ಭಾಷಾ ಪ್ರಾಬಲ್ಯ ಕುಗ್ಗಲು ಆಡಳಿತ ಭಾಷೆ ಮರೆತು ಮರಾಠಿಯನ್ನು ಬೆಳಗಾವಿಯಲ್ಲಿ ಬೆಳೆಸಲು ಹೊರಟಿರುವುದು ಅತ್ಯಂತ ಖಂಡನೀಯ ನಾಡಿನ ಸುತ್ತಲಿನ ಗಡಿ ಪ್ರದೇಶಗಳಿಗೆ ಕನ್ನಡಿಗ ಅಧಿಕಾರಿಗಳನ್ನೇ ನೇಮಿಸಬೇಕೆಂದುಜಿಲ್ಲೆಯ ಉಸ್ತುವಾರಿ ಸಚಿವರು ಈ ಘಟನೆಯನ್ನು ಖಂಡಿಸದೇ ಮೌನಪ್ರೇಕ್ಷಕರಾಗಿರುವುದು ಅತ್ಯಂತ ಖಂಡನೀಯ ವಿಷಯವಾಗಿದೆ ಎಂದಿದ್ದಾರೆ.

RELATED ARTICLES

Latest News