ಬೆಂಗಳೂರು,ಆ.19- ಸ್ವಾತಂತ್ರ್ಯ ದಿನಾಚರಣೆ, ವರಮಹಾಲಕ್ಷೀ, ಹಾಗೂ ಶನಿವಾರ, ಭಾನುವಾರ ಹೀಗೆ ಸಾಲು ಸಾಲು ರಜೆ ಹಿನ್ನೆಯಲ್ಲಿ ಊರು ಹಾಗೂ ಪ್ರವಾಸಿ ತಾಣಗಳಿಗೆ ತೆರಳಿ ರಿಲ್ಯಾಕ್‌್ಸ ಮೂಡ್‌ನಲ್ಲಿ ರಾಜಧಾನಿಗೆ ವಾಪಾಸ್ಸಾಗುತ್ತಿದ್ದ ಜನರಿಗೆ ಟ್ರಾಫಿಕ್‌ಜಾಮ್ ಕಿರಿ ಕಿರಿ ಉಂಟು ಮಾಡಿತ್ತು.
ರಜೆ ಹಿನ್ನಲೆಯಲ್ಲಿ ನಗರ ವಾಸಿಗಳು ತಮ ಊರು ಹಾಗೂ ಪ್ರವಾಸಿತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಿ ಇದೀಗ ಕೆಲಸದ ನಿಮಿತ್ತ ರಾತ್ರಿ ಹಾಗೂ ಇಂದು ಬೆಳಗ್ಗೆ ಬೆಂಗಳೂರಿನತ್ತ ಬರುತ್ತಿದ್ದಾರೆ,
ಈ ಸಂದರ್ಭದಲ್ಲಿ ಬೆಂಗಳೂರು, ತುಮಕೂರು ರಸ್ತೆ , ಬೆಂಗಳೂರು ಮೈಸೂರು ಎಕ್‌್ಸಪ್ರೆಸ್‌ವೇ, ಏರ್‌ಪೋರ್ಟ್ ರಸ್ತೆ ಸೇರಿದಂತೆ ನಗರ ಪ್ರವೇಶಿಸುವ ಪ್ರಮುಖ ರಸ್ತೆ ಹಾಗೂ ಟೋಲ್‌ಗಳಲ್ಲಿ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್‌ಜಾಮ್ ಉಂಟಾಗಿದ್ದು ನಗರ ಪ್ರವೇಶಿಸಲು ಹರಸಾಹಸ ಪಡುವಂತಾಗಿತ್ತು.
ದೂರ ತೆರಳಿದ್ದ ಜನರು ರಾತ್ರಿಯೇ ಹಿಂದಿರಿಗಿದ್ದು ಇನ್ನು ಕೆಲವರು ಇಂದು ಬೆಳಗ್ಗೆ ಬಂದ್ದಿದ್ದರಿಂದ ಸಂಚಾರ ದಟ್ಟಣೆ ಅನುಭವಿಸುವಂತಾಗಿತ್ತು. ಅದರಲ್ಲೂ ಸುಮಾರು 15 ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆಯ ನೆಲಮಂಗಲ ಟೋಲ್, ಮಾದಾವರ, ಗೊರಗುಂಟೆಪಾಳ್ಯ, ಎಂಟನೇ ಮೈಲಿ, ನೈಸ್ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಹಾಗೂ ಪ್ರಯಾಣಿಕರು ಗಂಟೆಗಟ್ಟಲೆ ಪರದಾಡುವಂತಾಗಿತ್ತು.
ಕೆಲವರು ಸ್ವಂತ ವಾಹನಗಳಲ್ಲಿ ತೆರಳಿದ್ದರೆ ಬಹಳಷ್ಟು ಮಂದಿ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳಲ್ಲಿ ಊರುಗಳಿಗೆ ತೆರಳಿದ್ದು ಜಿಲ್ಲಾ ಕೇಂದ್ರಗಳ ಬಸ್ ನಿಲ್ಲಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮೈಂಡ್ ್ರೇಶ್ ಮಾಡಿಕೊಂಡು ಉತ್ಸಾಹದಿಂದ ಇಂದು ಕೆಲಸಕ್ಕೆ ಮರಳಿತ್ತಿದ್ದ ಜನರಿಗೆ ಟ್ರಾಫಿಕ್ ಬೆಳ್ಳಂಬೆಳಗ್ಗೆ ಟ್ರಾಫಿಕ್‌ಜಾಮ್ ತಲೆ ಬಿಸಿ ತಂದೊಟ್ಟಿತ್ತು.ಇಷ್ಟು ಮಾತ್ರವಲ್ಲದೇ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಸಹ ಪುಲ್ ರಶ್ ಆಗಿದ್ದು, ಕೆಂಗೇರಿ ಚೆಕ್ ಪೋಸ್ಟ್ ಬಳಿ ಕೆಲಕಾಲ ಸಂಚಾರದಟ್ಟಣೆ ಉಂಟಾಗಿತ್ತು. ಸ್ಥಳದಲ್ಲಿದ್ದ ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.