Wednesday, May 14, 2025
Homeಅಂತಾರಾಷ್ಟ್ರೀಯ | Internationalಅಮೆರಿಕಾದಲ್ಲಿ ಟ್ರಂಪ್ ವಿರುದ್ದ ಮತ್ತೆ ಬೀದಿಗಿಳಿದ ಜನ

ಅಮೆರಿಕಾದಲ್ಲಿ ಟ್ರಂಪ್ ವಿರುದ್ದ ಮತ್ತೆ ಬೀದಿಗಿಳಿದ ಜನ

Thousands across the US protest Trump, again

ನ್ಯೂಯಾರ್ಕ್,ಏ.20– ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ವಿರೋಧಿಗಳು ಅಮೆರಿಕದ ಎಲ್ಲೆಡೆ ಬೀದಿಗಿಳಿದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಟ್ರಂಪ್ ಆಡಳಿತವು ರಾಷ್ಟ್ರದ ಪ್ರಜಾಸತ್ತಾತ್ಮಕ ಆದರ್ಶಗಳಿಗೆ ಒಂದು ಬೆದರಿಕೆಯಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಮ್ಯಾನ್‌ಹಟನ್‌ನಿಂದ ಮಸಾಚ್ಯುಸೆಟ್ಸ್‌ವರೆಗೆ ನೂರಾರು ನಗರಗಳ ಬೀದಿಬೀದಿಗಳಲ್ಲಿ, 250 ವರ್ಷಗಳ ಹಿಂದೆ 1775ರ ಏಪ್ರಿಲ್ 19 ರಂದು ಕ್ರಾಂತಿಕಾರಿ ಸಮರ ಆರಂಭಗೊಂಡ ಸ್ಮರಣಾರ್ಥ ಮೆರವಣಿಗೆಗಳನ್ನು ನಡೆಸಲಾಯಿತು.

ಡೆನ್ಸರ್‌ನಲ್ಲಿ ನೂರಾರು ಪ್ರತಿಭಟನಾಕಾರರು ಕೊಲರಾಡೋ ಯಾ ರಾಜಧಾನಿಯಲ್ಲಿ ನೆರೆದು ವಲಸಿಗರೊಂದಿಗೆ ಸೌಹಾರ್ದ ಸಾರುವ ಮತ್ತು ಹ್ಯಾಂಡ್ಸ್ ಆಫ್ ಎಂಬ ಭಿತ್ತಿಪತ್ರಗಳನ್ನು ಹಿಡಿದಿದ್ದರು. ಶೋಕ ಸೂಚಕವಾಗಿ ಅನೇಕರು ಅಮೆರಿಕದ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಿಡಿದಿದ್ದರು.

ಪೋರ್ಟ್‌ಲ್ಯಾಂಡ್, ಓರೆಗಾನ್‌ಗಳ ಮುಖಾಂತರ ನೂರಾರು ಮಂದಿ ಮೆರವಣಿಗೆಯಲ್ಲಿ ಸಾಗಿದರೆ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನೂರಾರು ಜನರು ಟ್ರಂಪ್‌ಗೆ ವಾಗ್ದಡನೆ ವಿಧಿಸಿ, ತೊಲಗಿಸಿ ಎಂದು ಸಮುದ್ರದಂಡೆಯ ಮರಳಿನ ಮೇಲೆ ಬರೆದರು. ಆ್ಯಂಕರೇಜ್, ಅಲಾಸ್ಕಾದಲ್ಲಿಯೂ ಜನರು ಧಿಕ್ಕಾರದ ಒಕ್ಕಣೆಯಿದ್ದ ಭಿತ್ತಿಪತ್ರಗಳನ್ನು ಹಿಡಿದು ಸಾಗಿದರು.

ಕೇಂದ್ರ ಸರ್ಕಾರವನ್ನು ಕುಂದಿಸುತ್ತಿರುವ ಆರೋಪದ ಮೇಲೆ ಶತಕೋಟ್ಯಧೀಶ ಮತ್ತು ಟ್ರಂಪ್ ಅವರ ಸಲಹೆಗಾರ ಎಲಾನ್ ಮಸ್ಕ್ ಅವರ ಟೆಸ್ನಾ ಕಾರ್ ರ್ಡೇಶಿಪ್ ಕಚೇರಿಗಳ ಮುಂದೆ ಪ್ರತಿಭಟನೆ ಆಯೋಜಿಸಲಾಗಿತ್ತು. ಮತ್ತೆ ಕೆಲವರು ಸಮುದಾಯ ಸೇವಾ ಕಾರ್ಯಗಳ ಮೂಲಕ ಪ್ರತಿಭಟನೆ ನಡೆಸಿದರು. ಎರಡು ವಾರಗಳ ಹಿಂದೆ ಇದೇ ರೀತಿ ರಾಷ್ಟ್ರವ್ಯಾಪಿ ಮುಷ್ಕರ ನಡೆದಿತ್ತು.

RELATED ARTICLES

Latest News