Tuesday, August 26, 2025
Homeರಾಜ್ಯಕೇಸರಿ ಶಾಲು ಧರಿಸಿದ್ದ ಟ್ರಾವಲ್ಸ್ ಕಾರ್ಮಿಕ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಮೂವರು ಕಿಡಿಗೇಡಿಗಳ ಸೆರೆ

ಕೇಸರಿ ಶಾಲು ಧರಿಸಿದ್ದ ಟ್ರಾವಲ್ಸ್ ಕಾರ್ಮಿಕ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಮೂವರು ಕಿಡಿಗೇಡಿಗಳ ಸೆರೆ

Three arrested for assaulting travel worker and staff wearing saffron shawl

ಬೆಂಗಳೂರು,ಆ.26- ಕೇಸರಿ ಶಾಲು ಹಾಕಿಕೊಂಡು ಕೆಲಸ ಮಾಡುತ್ತಿದ್ದಿಯಾ ಎಂದು ಟ್ರಾವಲ್ಸ್ ನ ಕೂಲಿ ಕಾರ್ಮಿಕ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಮೂವರು ಕಿಡಿಗೇಡಿಗಳನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಲಾಸಿಪಾಳ್ಯ ಬಸ್‌‍ ನಿಲ್ದಾಣದ ಎ.ವಿ ರಸ್ತೆಯ ರಾಯಲ್‌ ಟ್ರಾವಲ್ಸ್ ಕಚೇರಿ ಬಳಿ ಕಳೆದ ರಾತ್ರಿ 9.30ರಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಗುರಪ್ಪನಪಾಳ್ಯದ ಅಜೀತ್‌ಖಾನ್‌ (37), ನಾಗವಾರಪಾಳ್ಯದ ತಬ್ರೇಜ್‌ (30) ಹಾಗೂ ಬನಶಂಕರಿಯ ಇಬ್ರಾನ್‌ ಖಾನ್‌(36) ಎಂಬುವವರನ್ನು ಬಂಧಿಸಲಾಗಿದೆ.

ಘಟನೆಯಲ್ಲಿ ಟ್ರಾವಲ್ಸ್ ಸಿಬ್ಬಂದಿ ಹರಿಕೃಷ್ಣ ಮತ್ತು ಕೂಲಿ ಕಾರ್ಮಿಕ ಸ್ಲಿಂಧರ್‌ ಕುಮಾರ್‌ ಎಂಬುವವರ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಬೆದರಿಕೆ ಹಾಕಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಕಳೆದ ರಾತ್ರಿ ಟ್ರಾವಲ್ಸ್ ಬಳಿ ಬಿಹಾರ ಮೂಲದ ಸ್ಲಿಂಧರ್‌ಕುಮಾರ್‌ ಕೇಸರಿ ಶಾಲು ಹಾಕಿಕೊಂಡು ಕೆಲಸ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿಗಳು ನೀನು ಕೇಸರಿ ಶಾಲು ಹಾಕಿಕೊಂಡಿರುವುದು ಏಕೆ. ಅದನ್ನು ತೆಗೆದುಹಾಕು ಎಂದು ಬೆದರಿಸಿದ್ದಾರೆ.

ಈ ವೇಳೆ ಮಾತಿನ ಚಕಮಕಿ ನಡೆದು ಏಕಾಏಕಿ ಆರೋಪಿಗಳು ಸ್ಲಿಂಧರ್‌ಕುಮಾರ್‌ನನ್ನು ಹಿಡಿದು ಹೊಡೆದಿದ್ದಾರೆ.ಇದನ್ನು ನೋಡಿದ ಟ್ರಾವಲ್‌್ಸನ ಸರಕನ್ನು ಇಳಿಸುವ ಉಸ್ತುವಾರಿ ವಹಿಸಿದ್ದ ಹರಿಕೃಷ್ಣ ಅವರು, ಜಗಳ ಬಿಡಿಸಲು ಹೋದಾಗ ಅವರ ಮೇಲೂ ದರ್ಪ ತೋರಿಸಿ ಬಟ್ಟೆಯನ್ನು ಹರಿದು ಹಲ್ಲೆ ನಡೆಸಿದ್ದಾರೆ.

ನಂತರ ನಿಮನ್ನು ಸುಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ವಿಷಯ ತಿಳಿದ ಕಲಾಸಿಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು, ಅಲ್ಲಿನ ರಸ್ತೆಗಳಲ್ಲಿರುವ ಸಿಸಿ ಟಿವಿಗಳು ಹಾಗೂ ಬಂದಿದ್ದ ವಾಹನಗಳ ಮಾಹಿತಿ ಕಲೆಹಾಕಿ ಕ್ಷಿಪ್ರಕಾರ್ಯಾಚರಣೆ ನಡೆಸಿ ಬೆಳಗ್ಗೆ ಆರೋಪಿಗಳನ್ನು ಬಂಧಿಸಿದ್ದಾರೆ.ಕಲಾಸಿಪಾಳ್ಯ ಪೊಲೀಸ್‌‍ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

RELATED ARTICLES

Latest News