Sunday, September 7, 2025
Homeರಾಷ್ಟ್ರೀಯ | Nationalಪ್ರಯಾಗ್‌ರಾಜ್‌‍ : ಗಂಗೆ ಪಾಲಾದ ಮೂವರು ಬಾಲಕರು

ಪ್ರಯಾಗ್‌ರಾಜ್‌‍ : ಗಂಗೆ ಪಾಲಾದ ಮೂವರು ಬಾಲಕರು

Three boys drown in Ganga in Prayagraj

ಪ್ರಯಾಗ್‌ರಾಜ್‌‍, ಸೆ. 7 (ಪಿಟಿಐ) ತುಂಬಿ ಹರಿಯುತ್ತಿರುವ ಗಂಗೆಯಲ್ಲಿ ಮೂವರು ಬಾಲಕರು ಮುಳುಗಿ ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.ಪ್ರಯಾಗ್‌ರಾಜ್‌ ಸಮೀಪದ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಮೂವರು ಹದಿಹರೆಯದ ಬಾಲಕರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಈ ಘಟನೆ ನಡೆದಿದ್ದು, ಮೂವರು ಬಾಲಕರ ಶವಗಳನ್ನು ಹೊರತೆಗೆಯಲಾಗಿದೆ ಎಂದು ಎಸಿಪಿ (ಧೂಮಂಗಂಜ್‌‍) ಅಜೇಂದ್ರ ಯಾದವ್‌ ತಿಳಿಸಿದ್ದಾರೆ.ಮೃತರನ್ನು 15 ವರ್ಷದ ಅಮನ್‌, 13 ವರ್ಷದ ಮನೀಷ್‌ ಮತ್ತು 14 ವರ್ಷದ ಶೌರ್ಯ ಪಾಲ್‌ ಎಂದು ಗುರುತಿಸಲಾಗಿದೆ – ಇವರೆಲ್ಲರೂ ಮುಂಡೇರಾ ಪ್ರದೇಶದವರು.

RELATED ARTICLES

Latest News