Thursday, January 9, 2025
Homeಅಂತಾರಾಷ್ಟ್ರೀಯ | Internationalಆಸ್ಟ್ರೇಲಿಯಾ : ಪ್ರವಾಸಿ ವಿಮಾನ ಪತನ, ಮೂವರ ಸಾವು

ಆಸ್ಟ್ರೇಲಿಯಾ : ಪ್ರವಾಸಿ ವಿಮಾನ ಪತನ, ಮೂವರ ಸಾವು

Three Dead After Seaplane Crashes Off An Australian Island

ಮೆಲ್ಬೋರ್ನ್‌,ಜ.8– ಆಸ್ಟ್ರೇಲಿಯಾದ ಪ್ರವಾಸಿ ದ್ವೀಪದಿಂದ ಟೇಕಾಫ್‌ ಆಗುವ ವೇಳೆ ಸಮುದ್ರ ಸಣ್ಣ ವಿಮಾನವೊಂದು ಪತನಗೊಂಡು ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನುಸ್ವಿಸ್‌‍ ಮತ್ತು ಡ್ಯಾನಿಶ್‌ ಪ್ರವಾಸಿಗರು ಎಂದು ತಿಳಿದುಬಂದಿದ್ದು ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಇಲ್ಲಿ ತಿಳಿಸಿದ್ದಾರೆ.

ಸ್ವಾನ್‌ರಿವರ್‌ ಸೀಪ್ಲೇನ್ಸ್ ಒಡೆತನದ ವಿಮಾನವು ರೋಟ್ನೆಸ್ಟ್‌ ದ್ವೀಪದಿಂದ ಪೂರ್ವಕ್ಕೆ 30 ಕಿಲೋಮೀಟರ್‌ ದೂರದಲ್ಲಿರುವ ಪಶ್ಚಿಮ ಆಸ್ಟ್ರೇಲಿಯಾದ ರಾಜಧಾನಿಯಾದ ಪರ್ತ್‌ನಲ್ಲಿರುವ ತನ್ನ ನೆಲೆಗೆ ಹಿಂದಿರುಗುತ್ತಿದ್ದಾಗ ರೊಟ್ನೆಸ್ಟ್‌ ದ್ವೀಪದಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಮಾನದಲ್ಲಿ 7 ಜನರಿದ್ದರು ಅದರಲ್ಲಿ ಒಬ್ಬರು ಯಾವುದೇ ಗಾಯವಾಗದೆ ಸುರಕ್ಷತವಾಗಿರಕ್ಷಿಸಲಾಗಿದೆ.

ಮೃತರು 65 ವರ್ಷದ ಸ್ವಿಸ್‌‍ ಮಹಿಳೆ, ಡೆನಾರ್ಕ್‌ನ 60 ವರ್ಷದ ವ್ಯಕ್ತಿ ಮತ್ತು ಪರ್ತ್‌ನ 34 ವರ್ಷದ ಪುರುಷ ಪೈಲಟ್‌ ಎಂದು ಪಶ್ಚಿಮ ಆಸ್ಟ್ರೇಲಿಯಾದ ಪ್ರೀಮಿಯರ್‌ ರೋಜರ್‌ ಕುಕ್‌ ಹೇಳಿದ್ದಾರೆ.

63 ವರ್ಷದ ಸ್ವಿಸ್‌‍ ವ್ಯಕ್ತಿ ಮತ್ತು 58 ವರ್ಷದ ಡ್ಯಾನಿಶ್‌ ಮಹಿಳೆ, ಪಶ್ಚಿಮ ಆಸ್ಟ್ರೇಲಿಯಾದ ದಂಪತಿಗಳು ಬದುಕುಳಿದ್ದಾರೆ ಎಂದು ಪಾಶ್ಚಿಮಾತ್ಯ ಆಸ್ಟ್ರೇಲಿಯನ್‌ ಪೊಲೀಸ್‌‍ ಕಮಿಷನರ್‌ ಕರ್ನಲ್‌ ಬ್ಲಾಂಚ್‌ ಹೇಳಿದರು. ಗಾಯಗೊಂಡ ಮೂವರನ್ನು ಪರ್ತ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಕುಕ್‌ ಹೇಳಿದ್ದಾರೆ.

ಪ್ರಸ್ತುತ ದಕ್ಷಿಣ ಗೋಳಾರ್ಧದ ಬೇಸಿಗೆಯ ತಿಂಗಳುಗಳಲ್ಲಿ ದ್ವೀಪದ ಪ್ರವಾಸಿ ವಸತಿಗಳನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ರೋಟ್ನೆಸ್ಟ್‌ ನಮ್ಮ ಪ್ರಮುಖ ಪ್ರವಾಸೋದ್ಯಮ ತಾಣವಾಗಿದೆ ಎಂದು ಪ್ರತಿಯೊಬ್ಬ ಪಶ್ಚಿಮ ಆಸ್ಟ್ರೇಲಿಯಾದವರಿಗೆ ತಿಳಿದಿದೆ ಎಂದು ಕುಕ್‌ ಸುದ್ದಿಗಾರರಿಗೆ ತಿಳಿಸಿದರು.

ಮಂಗಳವಾರ ರಾತ್ರಿ 8 ಮೀಟರ್‌ (26 ಅಡಿ) ಆಳದಿಂದ ಮೃತದೇಹಗಳನ್ನು ಪೊಲೀಸ್‌‍ ಡೈವರ್‌ಗಳು ವಶಪಡಿಸಿಕೊಂಡಿದ್ದಾರೆ ಎಂದು ಬ್ಲಾಂಚ್‌ ಹೇಳಿದ್ದಾರೆ. ವಿಮಾನದ ಅವಶೇಷಗಳು ಇನ್ನೂ ಪತ್ತೆಯಾಗಿವೆ. ಆಸ್ಟ್ರೇಲಿಯನ್‌ ಟ್ರಾನ್ಸ್ ಪೋರ್ಟ್‌ ಸೇಫ್ಟಿ ಬ್ಯೂರೋ, ಏವಿಯೇಷನ್‌ ಕ್ರ್ಯಾಶ್‌ ಇನ್ವೆಸ್ಟಿಗೇಟರ್‌ ವಿಶೇಷ ತನಿಖಾಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗುತ್ತಿದೆ ಎಂದು ಹೇಳಿದರು.

ಎಟಿಎಸ್‌‍ಬಿಗೆ ವರದಿ ಮಾಡಿದಂತೆ, ಟೇಕ್‌‍-ಆಫ್‌ ಸಮಯದಲ್ಲಿ ಫ್ಲೋಟ್‌ಪ್ಲೇನ್‌‍ ನೀರಿನಲ್ಲಿ ಬಿದ್ದಿದೆ , ರೊಟ್ನೆಸ್ಟ್‌ನಲ್ಲಿ ವಿಹಾರಕ್ಕೆ ಹೋಗುತ್ತಿದ್ದ ಪ್ರವಾಸಿ ಗ್ರೆಗ್‌ ಕ್ವಿನ್‌ ಅವರು ವಿಮಾನ ಅಪಘಾತವನ್ನು ನೋಡಿದ್ದಾರೆ ಎಂದು ಹೇಳಿದರು.

RELATED ARTICLES

Latest News