ಕೊಕ್ರಜಾರ್, ಮೇ 3: ಭಾರತ-ಭೂತಾನ್ ಗಡಿಯ ಸಮೀಪವಿರುವ ಅಸ್ಸಾಂನ ಮನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಕಾಡು ಆನೆಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉದ್ಯಾನದ ಪಶ್ಚಿಮ ಭಾಗದಲ್ಲಿರುವ ಪನ್ದಾರಿ ಶ್ರೇಣಿಯ ಪಲೆಂಗ್ಲಿ ಬೀಟ್ ಪ್ರದೇಶದಲ್ಲಿ ಅರಣ್ಯ ರಕ್ಷಕರು ಆನೆ ಶವಗಳನ್ನು ಪತ್ತೆ ಮಾಡಿದ್ದಾರೆ ಎಂದು ಅವರು ಹೇಳಿದರು. ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಕಳ್ಳ ಬೇಟೆಗಾರರು ಆನೆಗಳನ್ನು ಕೊಂದಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಆದರೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆನೆಗಳ ಅಂತಿಮ ವಿಧಿಗಳನ್ನು ಮಾಡುವ ಮೊದಲು ಅವುಗಳ ಮರಣೋತ್ತರ ಪರೀಕ್ಷೆಗಳನ್ನು ಕಾಡಿನಲ್ಲಿ ನಡೆಸಲಾಗುವುದು ಎಂದು ಅವರು ಹೇಳಿದರು.