Tuesday, May 6, 2025
Homeಬೆಂಗಳೂರುಮೂವರು ಮನೆಗಳ್ಳರ ಬಂಧನ : 56.51 ಲಕ್ಷ ರೂ.ಮೌಲ್ಯದ ಚಿನ್ನದಗಟ್ಟಿ-ಆಭರಣ ವಶ

ಮೂವರು ಮನೆಗಳ್ಳರ ಬಂಧನ : 56.51 ಲಕ್ಷ ರೂ.ಮೌಲ್ಯದ ಚಿನ್ನದಗಟ್ಟಿ-ಆಭರಣ ವಶ

Three house robbers arrested: Gold bars and jewellery worth Rs. 56.51 lakh seized

ಬೆಂಗಳೂರು,ಮೇ 6-ನಗರದ ದಕ್ಷಿಣ ವಿಭಾಗದ ಜಯನಗರ ಹಾಗೂ ಗಿರಿನಗರ ಠಾಣೆ ಪೊಲೀಸರು ಮೂವರು ಮನೆಗಳ್ಳರನ್ನು ಬಂಧಿಸಿ ಒಟ್ಟು 56.51 ಲಕ್ಷ ರೂ. ಬೆಲೆಯ ಚಿನ್ನದ ಗಟ್ಟಿಗಳು ಹಾಗೂ ಚಿನ್ನಾಭರಣಗಳು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಜಯನಗರ: ಆರ್‌.ಆರ್‌ ನಗರದ ನಿವಾಸಿಯೊಬ್ಬರು ಜಯನಗರದ 8ನೇ ಬ್ಲಾಕ್‌ನ, ಸಂಗಮ್‌ ಸರ್ಕಲ್‌ನಲ್ಲಿ ಸ್ವೀಟ್‌ ಅಂಗಡಿಯೊಂದನ್ನು ಇಟ್ಟುಕೊಂಡಿದ್ದು, ಅಂಗಡಿ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ಸ್ವೀಟ್‌ ಅಂಗಡಿಯಲ್ಲಿ ಸ್ವೀಟ್‌ಗಳನ್ನು ತಯಾರಿಸಲು ಹೋಗಿದ್ದಾಗ ಅವರ ದ್ವಿಚಕ್ರ ವಾಹನ ಕಳವುವಾಗಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ಖಚಿತ ಮಾತಿಯನ್ನು ಕಲೆಹಾಕಿ, ಆರೋಪಿಯನ್ನು ಬಸವನಗುಡಿಯಲ್ಲಿರುವ, ಗಾಂಧಿ ಬಜಾರ್‌ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಮೇತ ಇಬ್ಬರನ್ನು ಬಂಧಿಸಿದ್ದಾರೆ.

ಈ ಇಬ್ಬರು ಆರೋಪಿಗಳು ಮತ್ತೊಂದು ದ್ವಿಚಕ್ರ ವಾಹನವನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಕೋಣನಕುಂಟೆ, ಸುಬ್ರಮಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮತ್ತಿಬ್ಬರ ಸಹಚರರೊಂದಿಗೆ ಸೇರಿಕೊಂಡು ಮನೆ ಕನ್ನ ಕಳವು ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಇಬ್ಬರು ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ವಿಚಾರಣೆ ಗೊಳಪಡಿಸಿ ದಾಗ ಮನೆ ಕನ್ನ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಕತ್ರಿಗುಪ್ಪೆಯಲ್ಲಿರುವ ಜ್ಯೂವಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದ 390 ಗ್ರಾಂನ ಎರಡು ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ ದೀಪಕ್‌ ಹಾಗೂ ಸಿಬ್ಬಂದಿಗಳ ತಂಡ ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಸಂಬಂಧಿಕನೇ ಆರೋಪಿ:
ಬನಶಂಕರಿ ಮೂರನೆ ಹಂತದ ನಿವಾಸಿಯೊಬ್ಬರು ಕೆಲಸದ ನಿಮಿತ್ತ ಮುಂಬೈಗೆ
ಪತ್ನಿಯೊಂದಿಗೆ ತೆರಳಿದ್ದಾಗ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಸಂಬಂ ಕನನ್ನು ಗಿರಿನಗರ ಪೊಲೀಸರು ಬಂ ಸಿ 24.51 ಲಕ್ಷ ರೂ. ಬೆಲೆಯ 258 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮುಂಬೈನಿಂದ ವಾಪಸ್‌ ಮನೆಗೆ ಬಂದ ದಂಪತಿ ಗೋದ್ರೀಜ್‌ ಲಾಕರ್‌ನ್ನು ತೆಗೆಯಲು ಹೋದಾಗ ಲಾಕರ್‌ನ ಬಾಗಿಲು ತೆರೆದಿರುವುದು ಕಂಡು ಬಂದಿದೆ. ಅನುಮಾನಗೊಂಡು ನೋಡಿದಾಗ ಅದರಲ್ಲಿಟ್ಟಿದ್ದ 325 ಗ್ರಾಂ ಚಿನ್ನಾಭರಣಗಳು ಇರಲಿಲ್ಲ .
ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡ ಪೊಲೀಸರು ದೂರುದಾರರ ಪತ್ನಿಯ ತಂಗಿಯ ಮಗನ ಮೇಲೆ ಅನುಮಾನಗೊಂಡು ಚನೈನ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಭರಣ ಕಳವು ಮಾಡಿರುವುದಾಗಿ ತಿಳಿಸಿದ್ದಾನೆ.

ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ನಡೆಸಿ ಚಿನ್ನಾಭರಣ ಅಂಗಡಿಗಳಲ್ಲಿ ಮಾರಾಟ ಮಾಡಿದ್ದ ಒಟ್ಟು 258 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಇನ್‌್ಸಪೆಕ್ಟರ್‌ ಸತೀಶ್‌ಕುಮಾರ್‌ ಹಾಗೂ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ.

RELATED ARTICLES

Latest News