ಚಿತ್ತೂರು, ಮೇ 18- ಆಂಧ್ರದ ಬಾಲಂವಾರಪಲ್ಲಿಯ ಕುರುಪವಳ್ಳಿ ಬಳಿ ಕಾರೊಂದು ರಸ್ತೆ ಬದಿಯ ಬಾವಿಗೆ ಬಿದ್ದು ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿಯ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಚಿಂತಾಮಣಿ ತಾಲ್ಲೂಕಿನ ಚಾಂಡ್ರಹಳ್ಳಿಯ ನಿವಾಸಿಗಳಾದ ಶಿವಾನಂದ (44), ಛಲಪತಿ (49) ಹಾಗೂ ಕೈವಾರ ಹೋಬಳಿ ಮೊತಾಕದಹಳ್ಳಿಯ ನಿವಾಸಿ ಲೋಕೇಶ್ (34) ಎಂದು ಗುರುತಿಸಲಾಗಿದೆ.
ಒಟ್ಟು ಐವರು ಕಾರಿನಲ್ಲಿ ಆಂಧ್ರಕ್ಕೆ ತೆರಳಿದ್ದರು. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಇಂದು ಮುಂಜಾನೆ ಬಾವಿಗೆ ಕಾರು ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುನಿಲ್ (29) ಮತ್ತು ವೆಂಕಟಶಿವರೆಡ್ಡಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕ ನಲ್ಲಾರಿ ಕಿಶೋರ್‌ಕುಮಾರ್ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.