Monday, March 17, 2025
Homeರಾಜ್ಯಹೋಳಿ ಹಬ್ಬದ ಎಣ್ಣೆ ಪಾರ್ಟಿಯಲ್ಲಿ ಮೂವರ ಕೊಲೆ : ಆರೋಪಿಗಳ ಪತ್ತೆಗಾಗಿ ವಿಶೇಷ 4 ತಂಡ...

ಹೋಳಿ ಹಬ್ಬದ ಎಣ್ಣೆ ಪಾರ್ಟಿಯಲ್ಲಿ ಮೂವರ ಕೊಲೆ : ಆರೋಪಿಗಳ ಪತ್ತೆಗಾಗಿ ವಿಶೇಷ 4 ತಂಡ ರಚನೆ

Three killed in Hoil party: Special 4 teams formed to find the accused

ಆನೇಕಲ್, ಮಾ. 16- ಹೋಳಿ ಹಬ್ಬದ ಹಿನ್ನಲೆಯಲ್ಲಿ ಎಣ್ಣೆ ಪಾರ್ಟಿ ಮಾಡಲು ಬಂದ ಮೂವರು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸರ್ಜಾಪುರ ಬಾಗಲೂರು ರಸ್ತೆಯ ತಿಂಡ್ಲು ಗೇಟ್ ಬಳಿ ನಿರ್ಮಾಣ ಹಂತದಲ್ಲಿರುವ ಪೋ‌ರ್ವಾಲ್ ಅವೆನ್ಯೂ ಅಪಾರ್ಟ್‌ ಮೆಂಟ್‌ನ ಮೂರನೇ ಮಹಡಿಯಲ್ಲಿ ಕಳೆದ ರಾತ್ರಿ ನಡೆದಿದೆ.

ಬಿಹಾರ ಮೂಲದ ಅನ್ನು(22), ರಾಧೆ ಶ್ಯಾಮ್ (23) ಹಾಗೂ ದೀಪು ಮೃತ ದುರ್ದೈವಿಗಳಾಗಿದ್ದಾರೆ. ಬಿಹಾರ ಮೂಲದ 6 ಮಂದಿ ಪ್ಲಂಬಿಂಗ್ ಕೂಲಿ ಕಾರ್ಮಿಕರು ಹೋಳಿ ಹಬ್ಬ ಇದ್ದರಿಂದ ಮೂರು ದಿನಗಳ ಕಾಲ ಕೆಲಸವು ರಜಾ ಇದ್ದು ಆಚರಣೆಯಲ್ಲಿ ತೊಡಗಿಕೊಂಡಿದ್ದರು. ನಂತರ ಎಲ್ಲರೂ ಸೇರಿ ಒಂದು ಕೋಣೆಯಲ್ಲಿ ತಮಗೆ ಬೇಕಾದ ಆಹಾರವನ್ನು ತಯಾರಿಸಿ ಮತ್ತೊಂದು ಕೋಣೆಯಲ್ಲಿ ಮದ್ಯಸೇವನೆ ಮಾಡುತ್ತಿದ್ದರು.

ಈ ವೇಳೆ ಅವರವರಲ್ಲೇ ಜಗಳ ನಡೆದಿತ್ತು. ಕುಡಿದ ಅಮಲಿನಲ್ಲಿದ್ದ ಯುವಕರು ಮೂವರನ್ನು ಹತ್ಯೆಗೈದಿದ್ದಾರೆ. ಮೂರನೇ ಮಹಡಿಯಲ್ಲಿ ಒಂದು ಕೋಣೆಯಲ್ಲಿ ಎರಡು ಶವ ಮತ್ತೊಂದು ಕೋಣೆಯಲ್ಲಿ ಒಂದು ಶವ ಪತ್ತೆಯಾಗಿದೆ. ವಿಷಯ ತಿಳಿದ ಕೂಡಲೇ ಸರ್ಜಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಓರ್ವ ಅಪರಾಧಿಯನ್ನು ವಶಕ್ಕೆ ಪಡೆದಿದ್ದಾರೆ. ಮಿಕ್ಕ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.

ಫೋರೆನ್ಸಿಕ್ ತಜ್ಞರು ಹಾಗೂ ಶ್ವಾನದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಪರಾಧಿಗಳ ಜಾಡು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಎಸ್.ಪಿ ಸಿ.ಕೆ ಬಾಬಾ ಮಾತನಾಡಿ, ಇದೊಂದು 14 ಮಹಡಿಯ ನಿರ್ಮಾಣ ಹಂತದ ಕಟ್ಟಡವಾಗಿದೆ. ಸಂಜೆಯಷ್ಟೇ ಈ ಬಗ್ಗೆ ನಮಗೆ ಮಾಹಿತಿ ದೊರೆತಿದೆ. ಒಟ್ಟಾರೆ ನಮಗೆ ಮೂರು ಶವಗಳು ದೊರೆತಿದ್ದು, ಇವರೆಲ್ಲರೂ ಪ್ಲಂಬಿಂಗ್ ಮತ್ತಿತರ ಕೆಲಸದಲ್ಲಿದ್ದರೆಂದು ತಿಳಿದುಬಂದಿದೆ. ಹೋಳಿ ಹಬ್ಬದ ಪ್ರಯುಕ್ತ ಮೂರು ದಿನ ರಜೆ ನೀಡಲಾಗಿತ್ತು.

ಈ ವೇಳೆ ಮೂವರೂ ತಮ್ಮ 3-4 ಮಂದಿ ಸ್ನೇಹಿತರೊಂದಿಗೆ ಮದ್ಯದ ಪಾರ್ಟಿ ಆಯೋಜಿಸಿದ್ದರು. ಬಂದಿದ್ದವರ ಪೈಕಿ ಒಬ್ಬಾತ ಗೆಳೆಯನ ಅಕ್ಕನ ಜೊತೆಗೆ ಫೋನಿನಲ್ಲಿ ಮಾತನಾಡಿದ್ದೇ ಜಗಳಕ್ಕೆ ಕಾರಣವಾಗಿದೆ ಎಂದು ಮೆಲ್ನೋಟಕ್ಕೆ ಕಂಡು ಬಂದಿದ್ದು ಮೂವರು ಸ್ಥಳದಲ್ಲಿದ್ದ ರಾಡ್ ಮತ್ತು ಬಾಟಲ್‌ಗಳಿಂದ ಹಲ್ಲೆ ನಡೆಸಿದ್ದಾರೆ. ನಾವು ಬಂದಾಗ ಇಬ್ಬರು ಮೃತಪಟ್ಟಿದ್ದರು. ಒಬ್ಬನನ್ನು ಆಂಬುಲೆನ್ಸ್‌ನಲ್ಲಿ ಹಾಕುವಾಗ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಆರೋಪಿಗಳ ಬಂಧನಕ್ಕಾಗಿ 4 ತಂಡಗಳ ರಚನೆ ಮಾಡಲಾಗಿದೆ. ಇನ್ನು ಸ್ಥಳಕ್ಕೆ ಐಜಿ ಲಾಬು ರಾಮ್ ಬೇಟಿ ನೀಡಿದರು. ಇನ್‌ಸ್ಪೆಕ್ಟರ್ ಮಂಜುನಾಥ್, ರಾಘವೇಂದ್ರ, ಸೋಮಶೇಖರ್, ಸಂಜೀವ್ ಮಹಾಜನ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ 4 ತಂಡಗಳ ರಚನೆ ಮಾಡಲಾಗಿದೆ. ಸ್ಥಳದಲ್ಲಿ ಅಡಿಷನಲ್ ಎಸ್ಪಿ ನಾಗೇಶ್ ಕುಮಾರ್, ಇನ್‌ಸ್ಪೆಕ್ಟರ್ ಪಿ.ಜಿ ನವೀನ್ ಕುಮಾರ್, ತಿಪ್ಪೇಸ್ವಾಮಿ ಇದ್ದರು.

RELATED ARTICLES

Latest News