Thursday, July 3, 2025
Homeರಾಷ್ಟ್ರೀಯ | Nationalಮಣಿಪುರದ ಇಂಫಾಲ ಕಣಿವೆ ಜಿಲ್ಲೆಗಳಲ್ಲಿ ಮೂವರು ಉಗ್ರರ ಬಂಧನ

ಮಣಿಪುರದ ಇಂಫಾಲ ಕಣಿವೆ ಜಿಲ್ಲೆಗಳಲ್ಲಿ ಮೂವರು ಉಗ್ರರ ಬಂಧನ

Three militants arrested in Manipur's Imphal Valley districts

ಇಂಫಾಲ, ಜು. 3 (ಪಿಟಿಐ) ಮಣಿಪುರದ ಇಂಫಾಲ ಕಣಿವೆ ಜಿಲ್ಲೆಗಳಲ್ಲಿ ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ ಮೂವರು ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಷ್ಣುಪುರ ಜಿಲ್ಲೆಯ ಮೈತ್ರಮ್‌ ಪ್ರದೇಶದಿಂದ ನಿಷೇಧಿತ ಸಂಘಟನೆಯ ಸದಸ್ಯನನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಆತನನ್ನು ಓಯಿನಮ್‌ ಹೇಮಂಜಿತ್‌ ಸಿಂಗ್‌ ಎಂದು ಗುರುತಿಸಲಾಗಿದೆ.
ಇಂಫಾಲ ಪೂರ್ವ ಜಿಲ್ಲೆಯ ಸೆಕ್ಮೈಜಿನ್‌ ಮಾನಿಂಗ್‌ ಲೈಕೈ ಪ್ರದೇಶದಿಂದ ನಿಷೇಧಿತ ಕಾಂಗ್ಲೈಪಾಕ್‌ ಕಮ್ಯುನಿಸ್ಟ್‌ ಪಕ್ಷ ಸಂಘಟನೆಗೆ ಸೇರಿದ ದಂಗೆಕೋರನನ್ನೂ ಭದ್ರತಾ ಪಡೆಗಳು ಬಂಧಿಸಿವೆ.

ಒಯಿನಮ್‌ ಟೊಂಬಾ ಸಿಂಗ್‌ (57) ಎಂದು ಗುರುತಿಸಲಾದ ಉಗ್ರ, ಕಾಕ್ಚಿಂಗ್‌ ಮತ್ತು ತೌಬಲ್‌ ಜಿಲ್ಲೆಗಳ ವಿವಿಧ ಪೆಟ್ರೋಲ್‌ ಪಂಪ್‌ಗಳಿಂದ ಸುಲಿಗೆಯಲ್ಲಿ ಭಾಗಿಯಾಗಿದ್ದ.ಕಾಕ್ಚಿಂಗ್‌ ಜಿಲ್ಲೆಯ ಎಲಾಂಗ್‌ ಖಾಂಗ್ಪೋಕ್ಪಿ ಅವಾಂಗ್‌ ಲೈಕೈಯಿಂದ ಕಾಂಗ್ಲೈಪಾಕ್‌ ಕಮ್ಯುನಿಸ್ಟ್‌ ಪಕ್ಷದ ಸಕ್ರಿಯ ಕಾರ್ಯಕರ್ತರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಲೌರೆಂಬಮ್‌ ಸುರೇಶ್‌ (47) ಎಂದು ಗುರುತಿಸಲಾಗಿದೆ.

ಏತನ್ಮಧ್ಯೆ, ಇಂಫಾಲ್‌ ಪೂರ್ವ ಜಿಲ್ಲೆಯ ಆಂಡ್ರೊ ಖುಮಾನ್‌ (ಬರುನಿ ಬೆಟ್ಟ) ತಪ್ಪಲಿನಿಂದ ಭದ್ರತಾ ಪಡೆಗಳು ಮ್ಯಾಗಜೀನ್‌ನೊಂದಿಗೆ .303 ರೈಫಲ್‌‍, ಮ್ಯಾಗಜೀನ್‌ಗಳೊಂದಿಗೆ ಎರಡು 9 ಎಂಎಂ ಪಿಸ್ತೂಲ್‌ಗಳು, ಒಂದು 12-ಬೋರ್‌ ಸಿಂಗಲ್‌‍-ಬ್ಯಾರೆಲ್‌ ಗನ್‌‍, ನಾಲ್ಕು ಹ್ಯಾಂಡ್‌‍-ಗ್ರೆನೇಡ್‌ಗಳು, ಚಾರ್ಜರ್‌ನೊಂದಿಗೆ ವೈರ್‌ಲೆಸ್‌‍ ಸೆಟ್‌ ಮತ್ತು ಎರಡು ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡಿವೆ.

RELATED ARTICLES

Latest News