ರೇವಾ,ಆ.10-ಮಳೆ ನೀರಿನಿಂದ ತುಂಬಿದ ನಿರ್ಮಾಣ ಹಂತದ ಹೊಂಡದಲ್ಲಿ ಮೂವರು ಅಪ್ರಾಪ್ತ ಸಹೋದರಿಯರು ಮುಳುಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಗೋವಿಂದಗಢ ಪೊಲೀಸ್ ಠಾಣೆ ವ್ಯಾಪ್ತಿಯ ತಮಾರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ಜಾನ್ಹವಿ ರಾಜಕ್(6), ತನ್ವಿ (7) ಮತ್ತು ಸುಹಾನಿ (9) ಎಂದು ಗುರುತಿಸಲಾಗಿದೆ.ನಾಗ ಪಂಚಮಿ ಆಚರಣೆಯ ಅಂಗವಾಗಿ ಮಾಡಿದ್ದ ಮಣ್ಣಿನ ವಿಗ್ರಹಗಳನ್ನು ನೀರಿನಲ್ಲಿ ಮುಳುಗಿಸಲು ಮೂವರು ಸಹೋದರಿಯರು ಸಂಜೆ ಮನೆಯಿಂದ ಹೊರಟರು ಎಂದು ಇನ್‌ಸ್ಪೆಕ್ಟರ್ ಶಿವ ಅಗರವಾಲ್ ತಿಳಿಸಿದ್ದಾರೆ.
ಸಮೀಪದಲ್ಲೇ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲು ಹೊಂಡ ತೆಗೆದಿದ್ದು, ಮಳೆ ನೀರು ತುಂಬಿಕೊಂಡಿತ್ತು ಮೂವರು ಸಹೋದರಿ ಅದರೊಳಗೆ ಜಾರಿಬಿದ್ದು ನೀರಿನಲ್ಲಿ ಮುಳುಗಿದ್ದಾರೆ ಎಂದು ಅವರು ಹೇಳಿದರು.
ರಾತ್ರಿ ಮಾಹಿತಿ ತಿಳಿದು ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ನೀರಿನಿಂದ ಮಕ್ಕಳನ್ನು ಹೊರತೆಗೆದರು ಆದರೆ ಆ ವೇಳೆಗಾಗಲೇ ಅವರೆಲ್ಲರೂ ಮೃತಪಟ್ಟಿದ್ದರು.ಪೋಷಕರು ದರಂತದಿಂದ ಕಂಗಾಲಾಗಿದ್ದಾರೆ,ಇಡೀ ಗ್ರಾಮಸ್ಥರು ಕಂಬನಿ ಸುರಿಸಿದ್ದಾರೆ.