Sunday, August 3, 2025
Homeರಾಜ್ಯನಟಿ ರಮ್ಯಾಗೆ ಅವಹೇಳನಕಾರಿ ಸಂದೇಶ ಕಳುಹಿಸಿದ್ದ ಮೂವರು ಕಿಡಿಗೇಡಿಗಳ ಬಂಧನ

ನಟಿ ರಮ್ಯಾಗೆ ಅವಹೇಳನಕಾರಿ ಸಂದೇಶ ಕಳುಹಿಸಿದ್ದ ಮೂವರು ಕಿಡಿಗೇಡಿಗಳ ಬಂಧನ

Three miscreants arrested for sending derogatory messages to actress Ramya

ಬೆಂಗಳೂರು,ಆ.2- ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾಗೆ ಅವಹೇಳನಕಾರಿ ಸಂದೇಶ ಕಳುಹಿಸಿದ್ದ ಮೂವರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕೋಲಾರ, ಚಿತ್ರದುರ್ಗ ಮೂಲದ ಮೂವರನ್ನು ಬಂಧಿಸಲಾಗಿದೆ. ಈ ಮೂವರು ಅಶ್ಲೀಲ ಕಮೆಂಟ್‌ ಹಾಕಿ ಸವಾಲ್‌ ಹಾಕಿದ್ದರು.

ನಟಿ ರಮ್ಯಾ ದೂರು ನೀಡುವ ವೇಳೆ 43 ಅಕೌಂಟ್‌‍ಗಳ ಹೆಸರು ಉಲ್ಲೇಖಿಸಿ ದೂರು ದಾಖಲಿಸಿದ್ದರು. ಐಪಿ ಅಡ್ರೆಸ್‌‍ ಆಧರಿಸಿ ಪ್ರಕರಣದಲ್ಲಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಫ್‌ಐಆರ್‌ ದಾಖಲಾದ ತಕ್ಷಣ ಬಹುತೇತ ಅಕೌಂಟ್‌‍ಗಳು ಡಿಲೀಟ್‌ ಆಗಿದ್ದವು. ಅಷ್ಟರಲ್ಲಿ ಪೊಲೀಸರು ಸಂಬಂಧಪಟ್ಟ ಸಂಸ್ಥೆಗಳಿಗೆ ಪತ್ರ ಬರೆದು ಐಪಿ ಅಡ್ರೆಸ್‌‍ಗಳು ,ಅಕೌಂಟ್‌ ಡಿಟೇಲ್‌್ಸ ಕೊಡುವಂತೆ ಮನವಿ ಮಾಡಿದ್ದರು.ಇದರಿಂದಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಮಂದಿಯ ಚಹರೆ ಗುರುತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಹಲವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದ್ದು,ಇಂದು ರಾತ್ರಿ ವೇಳೆಗೆ ಇನ್ನು ಹಲವರನ್ನು ಬಂಧಿಸುವ ಸಾಧ್ಯತೆ ಇದೆ. ಈ ನಡುವೆ ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಮೂವರ ಬಂಧನ ಖಚಿತ ಪಡಿಸಿದ್ದು. ನಟಿ ರಮ್ಯಾ ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್‌ ಮಾಡಿದ ಇಬ್ಬರು ಕಿಡಿಗೇಡಿಗಳನ್ನ ಬಂಧಿಸಲಾಗಿದೆ. 11 ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಅವರು ಸೋಷಿಯಲ್‌ ಮೀಡಿಯಾ ಕಾಮೆಂಟ್‌್ಸಬಗ್ಗೆ ಪರಿಶೀಲನೆ ಮಾಡಿದ್ದೇವೆ. ಸಿಸಿಬಿಯವರು ಹಲವರನ್ನ ಗುರುತಿಸಿದ್ದಾರೆ. ಕೆಲವರ ಸ್ಪಷ್ಟ ಮಾಹಿತಿ ಸಿಕ್ಕಿದೆ, ಇಬ್ಬರನ್ನು ಅರೆಸ್ಟ್‌ ಮಾಡಿದ್ದೇವೆ. ಇನ್ನೂ ಹನ್ನೊಂದು ಜನರ ಮಾಹಿತಿ ಸಿಕ್ಕಿದ್ದು ತನಿಖೆ ನಡೆಯುತ್ತಿದೆ ಎಂದರು.

ಅಲ್ಲದೇ ಬಂಧಿತರು ಯಾರ ಅಭಿಮಾನಿ ಅನ್ನೊದರ ಬಗ್ಗೆ ತನಿಖೆ ನಡೆಯುತ್ತಿದೆ. ಯಾರೇ ಆಗಿರಲಿ ಅಶ್ಲೀಲ ಸಂದೇಶ ಹಾಕಿದರೆ ಕಠಿಣ ಕ್ರಮ ಕೈಗೊಳ್ಳುತೇವೆ. ಈ ಬಗ್ಗೆ ಸೈಬರ್‌ ಪೊಲೀಸರಿಗೆ ವಿಶೇಷ ತರಬೇತಿ ನೀಡಿದ್ದೇವೆ. ಅವಹೇಳನಕಾರಿಯಾಗಿ ಯಾರೇ ಸಂದೇಶ ಹಾಕಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸ್‌‍ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಎಚ್ಚರಿಸಿದ್ದಾರೆ.

RELATED ARTICLES

Latest News