ನೆಲಮಂಗಲ,ಆ.17- ತಾಲೂಕಿನ ಅರಳಸಂದ್ರ ಗ್ರಾಮದ ಸೇತುವೆ ರಸ್ತೆಯಲ್ಲೇ ನಾಟಿ ಹಸುಗಳ ಕತ್ತು ಕೊಯ್ದು ಅಟ್ಟಹಾಸ ಮೆರೆದಿದ್ದ ಮೂವರನ್ನುನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಇಮ್ರಾನ್ (30) ಸೈಯದ್ ನವಾಜ್ (35) ಹಾಗು ಮತ್ತಿಬ್ಬ ಬಂಧಿತ ಆರೋಪಿಗಳಾಗಿದ್ದಾರೆ. ಈ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದಲ್ಲದೇ ಸದನದಲ್ಲಿಯೂ ಚರ್ಚೆ ಆಗಿತ್ತು. ಘಟನೆ ಸಂಬಂಧ ಪ್ರಕರಣ ಕೈಗೆತ್ತಿಕೊಂಡಿದ್ದ ನೆಲಮಂಗಲ ಗ್ರಾಮಾಂತರ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.
ತನಿಖೆಗೆ ವೇಳೆ ಆರೋಪಿಗಳು ವಿಜಯಪುರದಿಂದ ಬೆಂಗಳೂರಿನ ಕಸಾಯಿಖಾನೆಗೆ ಪ್ರತಿನಿತ್ಯ ರಾಸುಗಳನ್ನು ಸಾಗಾಣೆ ಮಾಡುತ್ತಿದ್ದರು ಎಂದು ಗೊತ್ತಾಗಿದೆ.ಹಳ್ಳಿಕಾರ್ ತಳಿಯ ಎರಡು ನಾಟಿ ಹಸುಗಳ ಮಾಂಸ ತಿನ್ನಲು ಯೋಗ್ಯವಲ್ಲ ಎಂದುನಡು ರಸ್ತೆಯಲ್ಲಿ ಅವಗಳ ಕತ್ತುಕೊಯ್ದು ಬಿಸಾಡಿದ್ದರು.
ಈ ಪ್ರಕರಣದಲ್ಲಿ ಕಸಾಯಿಖಾನೆಗೆ ಸಾಗಿಸುವವರೊಂದಿಗೆ ಪೋಲೀಸ್ ಹೆದ್ದಾರಿ ಗಸ್ತುವಾಹನ ಚಾಲಕ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.ಇನ್ನು ಅಕ್ರಮವಾಗಿ ರಾಸುಗಳ ಸಾಗಣೆ ಬಗ್ಗೆಯೂ ಅನುಮಾನ ಮೂಡಿದೆ .ಆರೋಪಿಗಳೕಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿದೆ.