Tuesday, July 15, 2025
Homeರಾಜ್ಯಹೃದಯಾಘಾತಕ್ಕೆ ರಾಜ್ಯದಲ್ಲಿ ಇಂದು ಮತ್ತೆ ಮೂವರು ಬಲಿ

ಹೃದಯಾಘಾತಕ್ಕೆ ರಾಜ್ಯದಲ್ಲಿ ಇಂದು ಮತ್ತೆ ಮೂವರು ಬಲಿ

Three more die of heart attack in the state today

ಬೆಂಗಳೂರು, ಜು.15- ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಮುಂದುವರೆದಿದ್ದು, ವಿದ್ಯಾರ್ಥಿನಿ, ಕಾರ್ಖನೆಯ ಸೂಪರ್‌ವೈಸರ್‌ಹಾಗೂ ರೈತರೊಬ್ಬರು ಮೃತಪಟ್ಟಿರುವ ಘಟನೆ ಬಳ್ಳಾರಿ ಹಾಗೂ ಹಾಸನದಲ್ಲಿ ನಡೆದಿದೆ.

ಬಳ್ಳಾರಿ :
ಶಾಲೆಗೆ ತೆರಳಲು ಸಿದ್ಧಳಾಗುತ್ತಿದ್ದ 12 ವರ್ಷದ 6ನೇ ತರಗತಿ ವಿದ್ಯಾರ್ಥಿನಿ ದೀಕ್ಷಾ ಹಠಾತ್ ಕುಸಿದುಬಿದ್ದಿದ್ದು, ಕೂಡಲೇ ಪೋಷಕರು ಸಂಡೂರಿನ ಆಸ್ಪತ್ರೆಗೆ ದಾಖಲಿಸಲು ಮುಂದಾದರು.
ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ದೀಕ್ಷಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾಳೆ.

ಅದೇ ರೀತಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾರಾನಗರದಲ್ಲಿ 35 ವರ್ಷದ ರಾಜೇಶ್ ಎಂಬಾತ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ. ಜಿಂದಾಲ್ ಕಾರ್ಖಾನೆಯಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದ ರಾಜೇಶ್‌ಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ.ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತಾದರೂ ಅಷ್ಟರೊಳಗೆ ರಾಜೇಶ್ ಮೃತಪಟ್ಟಿದ್ದಾರೆ.

ಹಾಸನ :
ಸಂತೆ ಮುಗಿಸಿಕೊಂಡು ಬರುತ್ತಿದ್ದ ರೈತ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದ ಆನಂದ್ (52) ಎಂಬುವರುಟ್ರ್ಯಾಕ್ಟರ್‌ನಲ್ಲಿ ಜಮೀನು ಉಳುಮೆ ಮಾಡಿ ನಂತರ ಬೇಲೂರಿಗೆ ಸಂತೆಗೆ ಬಂದಿದ್ದರು.

ಸಂತೆಯಲ್ಲಿ ತರಕಾರಿ, ದಿನಸಿ ಖರೀದಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಎಗಚಿ ಸೇತುವೆ ಬಳಿ ಎದೆನೋವು ಕಾಣಿಸಿಕೊಂಡು ಹಠಾತ್ತನೆ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಬೇಲೂರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಪ್ರತಿನಿತ್ಯ ರಾಜ್ಯದ ಒಂದಿಲ್ಲೊಂದು ಕಡೆ ವಿದ್ಯಾರ್ಥಿಗಳು, ಯುವಜನತೆಯ ಹಠಾತ್ ನಿಧನದಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.

RELATED ARTICLES

Latest News