Sunday, July 13, 2025
Homeರಾಜ್ಯಮಂತ್ರಾಲಯದಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ಯುವಕರು ನೀರುಪಾಲು

ಮಂತ್ರಾಲಯದಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ಯುವಕರು ನೀರುಪಾಲು

Three people drowned while taking a bath at Mantralaya

ರಾಯಚೂರು,ಜು.13- ರಾಯರ ದರ್ಶನಕ್ಕೆ ಮಂತ್ರಾಲಯಕ್ಕೆ ತೆರಳಿದ್ದ ರಾಜ್ಯದ ಏಳು ಭಕ್ತರ ಪೈಕಿ ಮೂವರು ತುಂಗಭದ್ರಾ ನದಿ ಪಾಲಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ನದಿ ಪಾಲಾದ ಯುವಕರನ್ನು ಕೊಡಗು ಜಿಲ್ಲೆಯ ಸಂಗಾಪುರ ಗ್ರಾಮದ ಅಜಿತ್‌ಕುಮಾರ್‌ (20), ಹಾಸನ ಜಿಲ್ಲೆ ಅರಸೀಕೆರೆಯವರಾದ ಸಚಿನ್‌ ಜಿ.ಕೆ. (20), ಪ್ರಮೋದ್‌ ಜಿ.ಎಂ. (20) ಎಂದು ಗುರುತಿಸಲಾಗಿದೆ.

ಇತರ ನಾಲ್ವರು ಸ್ನೇಹಿತರೊಂದಿಗೆ ಮಂತ್ರಾಲಯದ ರಾಘವೇಂದ್ರ ಶ್ರೀಗಳ ದರ್ಶನ ಪಡೆಯಲು ಬಂದಿದ್ದ ಈ ಮೂವರು ಯುವಕರು ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಇಳಿದಾಗ ನೀರಿನಲ್ಲಿ ಕೊಚ್ಚಿಹೋಗಿದ್ದರು. ತಕ್ಷಣ ಸ್ಥಳಕ್ಕೆ ದಾವಿಸಿದ ಮಂತ್ರಾಲಯ ಠಾಣೆ ಪೊಲೀಸರು ಯುವಕರ ರಕ್ಷಣೆಗೆ ಮುಂದಾದರೂ ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿಯಿಂದ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ನಿರಂತರ ಕಾರ್ಯಾಚರಣೆ ನಂತರ ನೀರಿನಲ್ಲಿ ಕೊಚ್ಚಿಹೋಗಿದ್ದ ಮೂವರು ಯುವಕರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಎಮಿಗೆಪುರಂ ಜನರಲ್‌ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ ಎಂದು ಮಂತ್ರಾಲಯ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮೂವರು ಯುವಕರು ಸ್ನೇಹಿತರಾಗಿದ್ದು, ಪದವಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿಗೆ ರಜೆಯಿದ್ದ ಕಾರಣ ನಿನ್ನೆ ಮಂತ್ರಾಲಯಕ್ಕೆ ಬಂದು ರಾಯರ ದರ್ಶನ ಮಾಡಿ ನದಿ ಭಾಗಕ್ಕೆ ಹೋಗಿದ್ದರು. ಈ ವೇಳೆ ನೀರಿಗಿಳಿದಾಗ ಕಾಲು ಜಾರಿ ಕೊಚ್ಚಿಕೊಂಡು ಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಂತ್ರಾಲಯ ಠಾಣೆ ಪೊಲೀಸರು ಹಾಗೂ ಆಗ್ನಿಶಾಮಕ ಸಿಬ್ಬಂದಿ ಹಾಗೂ ಶ್ರೀಮಠದ ಸಿಬ್ಬಂದಿ ಇಂದು ಬೆಳಗ್ಗೆ ಮತ್ತೆ ನದಿಯಲ್ಲಿ ಹುಡುಕಾಟ ನಡೆಸಿದ ನಂತರ ಮೂವರ ಶವಗಳನ್ನು ನದಿಯಿಂದ ಹೊರತರಲಾಗಿದೆ.

RELATED ARTICLES

Latest News