Friday, November 22, 2024
Homeರಾಷ್ಟ್ರೀಯ | Nationalಭಾರತ-ಬಾಂಗ್ಲಾ ಗಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2.25 ಕೋಟಿ ಮೌಲ್ಯದ ಚಿನ್ನ ವಶ

ಭಾರತ-ಬಾಂಗ್ಲಾ ಗಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2.25 ಕೋಟಿ ಮೌಲ್ಯದ ಚಿನ್ನ ವಶ

ಬರಾಸತ್, ಫೆ 18: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪೆಟ್ರಾಪೋಲ್‍ನಲ್ಲಿರುವ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯ ಮೂಲಕ 2.25 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಮೂವರನ್ನು ಬಂಸಲಾಗಿದೆ ಎಂದು ಬಿಎಸ್‍ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಚಿತ ಸುಳಿವಿನ ಮೇರೆಗೆ ಪ್ರತ್ಯೇಕ 2 ಘಟನೆಗಳಲ್ಲಿ ಕಳೆದ ರಾತ್ರಿ ಕಾರ್ಯಾಚರಣೆ ನಡೆಸಿದ ಬಿಎಸ್‍ಎಫ್ ಸಿಬ್ಬಂದಿ ಈ ಭಾರಿ ಮೊತ್ತದ ಚಿನ್ನ ಜಪ್ತಿ ಮಾಡಲಾಗಿದೆ.ಮೊದಲ ಘಟನೆಯಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಪ್ರವೇಶಿಸುತ್ತಿದ್ದ ಟ್ರಕ್‍ಗಳ ತಪಾಸಣೆ ನಡೆಸುತ್ತಿದ್ದಾಗ ವಾಹನವೊಂದರಲ್ಲಿ 1.58 ಕೋಟಿ ಮೌಲ್ಯದ 2.5 ಕೆಜಿ ಚಿನ್ನದ ಬಿಸ್ಕತ್‍ಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಸಿದ್ದಾರೆ.

ಮತ್ತೊಂದು ಘಟನೆಯಲ್ಲಿ, 1 ಕೆಜಿಗಿಂತ ಹೆಚ್ಚು ತೂಕದ ಚಿನ್ನದ ಪೇಸ್ಟ್‍ಅನ್ನುಸಗಿಸುತ್ತಿದ್ದ ವ್ಯಕ್ತಿಯನ್ನು ಬಂಸಲಾಗಿದೆ.ಇದರ ಹಿಂದೆ ಯಾರಿದ್ದಾರೆ ಮತ್ತಿತರ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ವಶಪಡಿಸಿಕೊಂಡ ಚಿನ್ನ ಮತ್ತು ಬಂತ ವ್ಯಕ್ತಿಗಳನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದಾರೆ.

RELATED ARTICLES

Latest News