Home ಇದೀಗ ಬಂದ ಸುದ್ದಿ ಕಮರಿಗೆ ಬಸ್‌‍ ಉರುಳಿ ಬಿದ್ದು ಮೂವರ ಸಾವು, 24 ಮಂದಿಗೆ ಗಾಯ

ಕಮರಿಗೆ ಬಸ್‌‍ ಉರುಳಿ ಬಿದ್ದು ಮೂವರ ಸಾವು, 24 ಮಂದಿಗೆ ಗಾಯ

0
ಕಮರಿಗೆ ಬಸ್‌‍ ಉರುಳಿ ಬಿದ್ದು ಮೂವರ ಸಾವು, 24 ಮಂದಿಗೆ ಗಾಯ

ಉತ್ತರಕಾಶಿ, ಜೂ.12 (ಪಿಟಿಐ) ಉತ್ತರಾಖಂಡದ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯ ಗಂಗನಾನಿ ಬಳಿ ಬಸ್‌‍ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ ಗಂಗ್ನಾನಿಯಿಂದ 50 ಕಿಮೀ ದೂರದಲ್ಲಿ ಈ ಘಟನೆ ಸಂಭವಿಸಿದೆ. ಬಸ್‌‍ ಚಾಲಕನ ನಿಯಂತ್ರಣ ತಪ್ಪಿ, ಕ್ರ್ಯಾಶ್‌ ಬ್ಯಾರಿಯರ್‌ ಮುರಿದು, ಕಮರಿಗೆ ಬಿದ್ದು, ಕೆಳಕ್ಕೆ ಢಿಕ್ಕಿ ಹೊಡೆಯುವ ಮುನ್ನವೇ ಮರದ ಮೇಲೆ ಸಿಲುಕಿಕೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಸ್‌‍ ಗಂಗೋತ್ರಿಯಿಂದ ಉತ್ತರಕಾಶಿ ಕಡೆಗೆ 27 ಯಾತ್ರಾರ್ಥಿಗಳೊಂದಿಗೆ ಹೋಗುತ್ತಿತ್ತು ರಕ್ಷಣಾ ಮತ್ತು ಪರಿಹಾರ ಕಾರ್ಯವನ್ನು ತ್ವರಿತವಾಗಿ ಪ್ರಾರಂಭಿಸಲಾಯಿತು ಮತ್ತು ಗಾಯಾಳುಗಳನ್ನು ಉತ್ತರಕಾಶಿ ಜಿಲ್ಲಾ ಆಸ್ಪತ್ರೆ ಮತ್ತು ಭಟ್ವಾಡಿ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.

ಮತರನ್ನು ಉತ್ತರಾಖಂಡದ ಉಧಮ್‌ ಸಿಂಗ್‌ ನಗರ ಜಿಲ್ಲೆಯ ರುದ್ರಾಪುರ ನಿವಾಸಿ ದೀಪಾ ತಿವಾರಿ, ಹಲ್ದ್ವಾನಿ ನಿವಾಸಿಗಳಾದ ನೀಮಾ ತೇಡಾ ಮತ್ತು ಮೀನಾ ರೆಕ್ವಾಲ್‌ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.2010ರಲ್ಲಿ ಇದೇ ಸ್ಥಳದಲ್ಲಿ ಟ್ರಕ್‌ ಕಮರಿಗೆ ಬಿದ್ದು 27 ಕನ್ವಾರಿಯಾಗಳು ಸಾವನ್ನಪ್ಪಿದ್ದರೆ, 2023ರಲ್ಲಿ ಇಲ್ಲಿ ಬಸ್‌‍ ಅಪಘಾತದಲ್ಲಿ ಏಳು ಯಾತ್ರಿಕರು ಸಾವನ್ನಪ್ಪಿದ್ದರು.