ಮಾಗಡಿ,ಮೇ.19-ಇಲ್ಲಿನ ವೈಜಿ ಗುಡ್ಡ ಜಲಾಶಯಕ್ಕೆ ಬಂದಿದ್ದ 7 ಮಂದಿ ಯುವತಿಯರು ಮೀನು ಹಿಡಿಯಲು ಹೋಗಿ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಂದು ಮದ್ಯಾಹ್ನ ನಡೆದಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ರಾಘವಿ(18) ಮಧುಮಿತ(20), ಹಾಗೂ ರಮ್ಯಾ (22) ಮೃತಪಟ್ಟ ದುರ್ದೃವಿಗಳು. ಒಟ್ಟು 7 ಮಂದಿ ಯುವತಿಯ ತಂಡ ಬೆಂಗಳೂರಿನಿಂದ ಎಳಗಳ್ಳಿ ಗ್ರಾಮದಲ್ಲಿನ ಸ್ನೇಹಿತೆ ಮನೆಗೆ ಬಂದಿದ್ದರು.ನಂತರ ಜಲಾಶಯ ನೋಡಲು ಹೋದಾಗ ಮೀನಿನ ಮರಿಗಳನ್ನು ನೋಡಿ ತಾವು ತೊಟ್ಟಿದ್ದ ವೇಲಿನಿಂದ ಹಿಡಿಯಲು ನೀರಿಗೆ ಇಳಿದು ಆಳಕ್ಕೆ ಹೋಗಿ ನೀರಿನಲ್ಲಿ ಮುಳುಗಿದ್ದಾರೆ.
ತಕ್ಷಣ ಅವರ ಜೊತೆ ಇದ್ದ ಯುವಕನೊಬ್ಬ ನೀರಿಗೆ ಇಳಿದು ನಾಲ್ವರನ್ನು ರಕ್ಷಿಸಿದ್ದಾನೆ . ಆವೇಳೆಗಾಗಲೆ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ.
ಸುದ್ದಿ ತಿಳಿದು ಮಾಗಡಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ, ಮೃತ ದೇಹಗಳನ್ನು ನೀರಿನಿಂದ ಮೇಲೆತ್ತಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.