ಸಾಗರ,ನ.14- ತೆಪ್ಪ ಮಗುಚಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ಕಳಸ ವಳ್ಳಿಯ ಶರಾವತಿ ಹಿನ್ನೀರಿನಲ್ಲಿ ನಡೆದಿದೆ.ರಾಜು, ಸಂದೀಪ್ ಭಟ್ ಮತ್ತು ಚೇತನ್ ಮೃತ ಯುವಕರೆಂದು ಗುರುತಿಸಲಾಗಿದೆ.ಇವರು ಸ್ಥಳೀಯ ಬನರಾಳು ಹೊಳೆ ಹಟ್ಟಿ ನಿವಾಸಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಈ ಮೂವರು ಸಣ್ಣ ಪುಟ್ಟ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಿನ್ನೆ ಸಂಜೆ ಒಟ್ಟು ಐದು ಮಂದಿ ತೆಪ್ಪದಲ್ಲಿ ಮತ್ತೊಂದು ತೀರಕ್ಕೆ ಹೋಗುತ್ತಿದ್ದಾಗ ಕಳಸವಳ್ಳಿಯ ಶರಾವತಿ ಹಿನ್ನೀರಿನ ಮಾರ್ಗಮಧ್ಯೆ ತೆಪ್ಪ ಮೊಗಚಿ ಬಿದ್ದಿದೆ.
ಈ ವೇಳೆ ಎಲ್ಲರೂ ನೀರಿಗೆ ಬಿದಿದ್ದಾರೆ. ಈ ಪೈಕಿ ನವೀನ್ ಹಾಗೂ ಯಶ್ವಂತ್ ಈಜಿಕೊಂಡು ದಡ ಸೇರಿದ್ದಾರೆ. ಆದರೆ ರಾಜು, ಸಂದೀಪ್ ಭಟ್ ಮತ್ತು ಚೇತನ್ ನೀರಿನಲ್ಲಿ ಮುಳಗಿ ನಾಪತ್ತೆಯಾಗಿದ್ದರು.
ಸುದ್ದಿ ತಿಳಿದು ಸ್ಥಳಕ್ಕೆ ಕಾರಗಲ್ ಠಾಣೆ ಪೊಲೀಸರು ದಾವಿಸಿದ್ದಾರೆ. ನಂತರ ಅಗ್ನಿ ಶಾಮಕ ಸಿಬ್ಬಂದಿ ಬಂದು ನೀರಿನಲ್ಲಿ ಹುಡುಕಾಟ ನಡೆಸಿದ್ದಾರೆ.ಆದರೆ ಕತ್ತಲಾದ ಕಾರಣ ಕಾರ್ಯಾಚರಣೆ ನಿಲ್ಲಿಸಿ ಇಂದು ಬೆಳಿಗ್ಗೆ ಮಲ್ಪೆಯಿಂದ ಈಜುಗಾರರನ್ನು ಕೆರೆಸಿ ಕಾರ್ಯಾಚರಣೆ ನಡೆಸಿದಾಗ ಮೂವರು ಯುವಕರ ಮೃತದೇಹಗಳು ಪತ್ತೆಯಾಗಿವೆ. ಕಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.