ಬೆಳಗಾವಿ : ಬಹುತೇಕ ಬೆಳಗಾವಿ ಸಾರ್ವಜನಿಕ ಗಣೇಶೋತ್ಸವ ವಿಸರ್ಜನೆ ಶಾಂತಿಯುತವಾಗಿ ನಡೆಯಿತು ಎಂದುಕೊಳ್ಳುವಷ್ಟರಲ್ಲಿ ಇಂದು ಬೆಳಂಬೆಳಿಗ್ಗೆ ಮೂವರು ಯುವಕರ ಮೇಲೆ ಚಾಕುವಿನಿಂದ ದಾಳಿ ನಡೆಸಲಾಗಿಸೆ.ಮಂಗಳವಾರ ತಡ ರಾತ್ರಿ ನಡೆದಿದ್ದ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಯುವಕರ ಮಧ್ಯೆ ಕುಣಿಯುವ ಸಂಬಂಧ ಪರಸ್ಪರ ವಾಗ್ವುದ್ದ ತಳ್ಳಾಟ ನಡೆದಿದೆ.ಯುವಕರ ನಡುವೆ ಜಗಳವಾಗಿ ಆ ಪೈಕಿ ಮೂವರ ಮೇಲೆ ಚಾಕು ಇರಿತವಾಗಿರುವುದು ಬೆಳಿಗ್ಗೆ ತಿಳಿದುಬಂದಿದೆ.
ನಗರದ ಚನ್ನಮ ವೃತ್ತದ ಬಳಿ ಗಣಪತಿ ವಿಸರ್ಜನಾ ಮೆರವಣಿಯಲ್ಲಿ ಮೂವರು ಯುವಕರು, ಹಾಡಿಗೆ ಹೆಜ್ಜೆ ಹಾಕುವಾಗ ಏಕಾಏಕಿ ದಾಳಿ ನಡೆದಿದೆ. ಘಟನೆಯಲ್ಲಿ ದರ್ಶನ್ ಪಾಟೀಲ(20)ಸತೀಶ ಪೂಜಾರಿ(22) ಪ್ರವೀಣ್ ಗುಂಡ್ಯಾಗೋಳಗ(24) ಗಾಯಗೊಂಡಿದ್ದು, ಮೂವರು ಯುವಕರ ಹೊಟ್ಟೆಗೆ ಚೂರಿ ಇರಿದು ಆರೋಪಿಗಳು ಪರಾರಿಯಾಗಿದ್ದಾರೆ.
ತೀವ್ರ ಅಸ್ವಸ್ಥರಾಗಿದ್ದ ಮೂವರೂ ಯುವಕರನ್ನು ಹತ್ತಿರದ ಬಿಮ್ಸೌ ತುರ್ತು ಘಟಕಕ್ಕೆ ರವಾಣಿಸಲಾಯಿತು. ಬೆಳಗಾವಿ ಜಿಲ್ಲಾಸ್ಪತ್ರೆಗೆ ಎಪಿಎಂಸಿ ಠಾಣೆ, ಕ್ಯಾಂಪ್ ಹಾಗೂ ಖಡೆಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕಮಿಷ್ನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಭೇಟಿ ನೀಡಿದರು. ಈ ಘಟನೆ ಹೊರತುಪಡಿಸಿ ಈ ಭಾರಿಯ ಗಣೇಶೋತ್ಸವ ಮೆರವಣಿಗೆ ಬಹಳ ಶಾಂತತೆಯಿಂದ ನೆರವೇರಿರುವುದು ಗಮನ ಸೆಳೆದಿದೆ.