Sunday, June 30, 2024
Homeಇದೀಗ ಬಂದ ಸುದ್ದಿಪಿ.ಆರ್‌.ರಮೇಶ್‌, ಬಸವರಾಜ್‌ಗೆ ವಿಧಾನ ಪರಿಷತ್‌ ಟಿಕೆಟ್‌ ನೀಡುವಂತೆ ತಿಗಳ ಮಹಾಸಭಾ ಆಗ್ರಹ

ಪಿ.ಆರ್‌.ರಮೇಶ್‌, ಬಸವರಾಜ್‌ಗೆ ವಿಧಾನ ಪರಿಷತ್‌ ಟಿಕೆಟ್‌ ನೀಡುವಂತೆ ತಿಗಳ ಮಹಾಸಭಾ ಆಗ್ರಹ

ಬೆಂಗಳೂರು,ಮೇ.24- ಸಮುದಾಯದ ಮುಖಂಡರಾದ ಪಿ.ಆರ್‌.ರಮೇಶ್‌ ಹಾಗೂ ಎ.ಎಚ್‌.ಬಸವರಾಜ್‌ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಆಯ್ಕೆ ಮಾಡುವಂತೆ ಕರ್ನಾಟಕ ರಾಜ್ಯ ತಿಗಳರ ಮಹಾ ಸಭಾ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ ಎಲ್‌.ಎ. ಮಂಜುನಾಥ್‌ ಅವರು ಸಮುದಾಯದ ಮುಖಂಡರಾಗಿದ್ದು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್‌.ಬಸವರಾಜ್‌ ಅವರಿಗೆ ಮುಂಬರುವ ವಿಧಾನಪರಿಷತ್‌ ಚುನಾವಣೆಯಲ್ಲಿ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದರು.

ನಮ್ಮ ಸಮುದಾಯಕ್ಕೆ ಇದುವರೆಗೂ ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ಸಿಗದಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಪಕ್ಷಕ್ಕಾಗಿ ನಿರಂತರವಾಗಿ ದುಡಿಯುತ್ತಿರುವ ಬಸವರಾಜ್‌ ಅವರಿಗೆ ಪರಿಷತ್‌ ಟಿಕೆಟ್‌ ನೀಡಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಮನವಿ ಮಾಡಿಕೊಂಡರು.

ಎ.ಎಚ್‌.ಬಸವರಾಜ್‌ ಮಾತನಾಡಿ, ನಮ ಸಮುದಾಯದ ಹಿರಿಯ ಮುಖಂಡರಾಗಿರುವ ಪಿ.ಆರ್‌.ರಮೇಶ್‌ ಅವರು ಬೆಂಗಳೂರು ಮಹಾನಗರ ಪಾಲಿಕೆ ಮಹಾಪೌರರಾಗಿ ಹಾಗೂ ಎಂಎಲ್‌ಸಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಅವರ ಸೇವೆಯನ್ನು ಗಂಭೀರವಾಗಿ ಪರಿಗಣಿಸಿ ಕಾಂಗ್ರೆಸ್‌‍ ಪಕ್ಷದ ವರಿಷ್ಠರು ಮತ್ತೊಂದು ಅವಧಿಗೆ ಅವರಿಗೆ ಪರಿಷತ್‌ ಟಿಕೆಟ್‌ ನೀಡಿ ನಮ್ಮ ಸಮುದಾಯದ ಏಳಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಸಮುದಾಯದ ಹಲವಾರು ಮುಖಂಡರುಗಳು ಹಾಜರಿದ್ದರು.

RELATED ARTICLES

Latest News