Sunday, July 7, 2024
Homeರಾಷ್ಟ್ರೀಯತಿಮಪ್ಪನ ಹುಂಡಿಯಲ್ಲಿ ಒಂದೇ ದಿನದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

ತಿಮಪ್ಪನ ಹುಂಡಿಯಲ್ಲಿ ಒಂದೇ ದಿನದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

ತಿರುಪತಿ,ಜೂ.19- ತಿರುಪತಿ ತಿರುಮಲ ದೇವಸ್ಥಾನದಲ್ಲಿ ಒಂದೇ ದಿನದಲ್ಲಿ 5.41 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಸಾಲು ಸಾಲು ರಜೆಗಳ ಹಿನ್ನಲೆಯಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದರಿಂದ ತಿಮಪ್ಪನ ಹುಂಡಿಗೆ ದಾಖಲೆಯ ಮೊತ್ತದ ಆದಾಯ ಬಂದಿದೆ.

ಜೂ.18ರ ಮಂಗಳವಾರದಂದು ಶ್ರೀವಾರಿ ಹುಂಡಿಯ ಒಟ್ಟು ಆದಾಯ 5.41 ಕೋಟಿ ರೂ. ಇತ್ತೆಂದು ಟಿಟಿಡಿ ತಿಳಿಸಿದೆ. ಮಂಗಳವಾರ ಒಂದೇ ದಿನ 75,125 ಭಕ್ತರು ತಿಮಪ್ಪನ ದರ್ಶನ ಪಡೆದರು. 31,140 ಭಕ್ತರು ಅಪಾರ ಪ್ರಮಾಣದ ಕಾಣಿಕೆಯನ್ನು ಸಮರ್ಪಿಸಿದರು.

ಎರಡು ವರ್ಷಗಳ ಹಿಂದೆ ಫೆಬ್ರವರಿ 2022ರಲ್ಲಿ ಯಾವುದೇ ವಿಶೇಷ ಶುಭ ದಿನ ಇಲ್ಲದ ಸಂದರ್ಭದಲ್ಲಿ ಶ್ರೀವಾರಿ ಹುಂಡಿಗೆ ದಾಖಲೆ ಪ್ರಮಾಣದ ಆದಾಯ ಬಂದಿತ್ತು. ಆಗಲೂ ನಿಖರವಾಗಿ 5.41 ಕೋಟಿ ರೂ. ಆದಾಯ ಬಂದಿದ್ದು ವಿಶೇಷ.

ತಿರುಮಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ದರ್ಶನಕ್ಕೆ 20 ಗಂಟೆ ಬೇಕು ಎಂದು ಟಿಟಿಡಿ ಹೇಳಿದೆ. ಎಲ್ಲಾ ವಿಭಾಗಗಳು ಭಕ್ತರಿಂದ ತುಂಬಿವೆ. ಕೃಷ್ಣತೇಜ ಅತಿಥಿ ಗೃಹದವರೆಗೂ ಸರತಿ ಸಾಲು ಬಂದು ನಿಂತಿದೆ. ಹಿರಿಯ ನಾಗರಿಕರಿಗಾಗಿ ವಿಶೇಷ ಪ್ರವೇಶ ದರ್ಶನ ಆನ್‌ಲೈನ್‌ ಕೋಟಾ ಮೂರು ತಿಂಗಳ ಮುಂಚಿತವಾಗಿಯೇ ಬಿಡುಗಡೆಯಾಗಿದೆ. ಹಿರಿಯ ನಾಗರಿಕರಿಗೆ ಪಿಎಚ್‌ಸಿ ಮಾರ್ಗದಲ್ಲಿ ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

RELATED ARTICLES

Latest News