Saturday, October 5, 2024
Homeರಾಷ್ಟ್ರೀಯ | Nationalಲಡ್ಡು ವಿವಾದದ ನಡುವೆಯೂ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಳ

ಲಡ್ಡು ವಿವಾದದ ನಡುವೆಯೂ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಳ

Tirupati devotees unfazed by animal fat row, 13 lakh laddus sold in 4 days

ಬೆಂಗಳೂರು,ಅ.5- ಭಾರತದ ಅತಿ ಶ್ರೀಮಂತ ದೇಗುಲಗಳಲ್ಲಿ ತಿರುಪತಿ ವೆಂಕಟೇಶ್ವರ ದೇವಾಲಯವೂ ಒಂದು. ತಿರುಪತಿ ತಿಮಪ್ಪನಿಗೆ ಲಕ್ಷಾಂತರ ಭಕ್ತರಿದ್ದು, ತಿರುಪತಿ ಲಡ್ಡು ವಿವಾದದ ನಂತರವೂ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲೂ ಕರ್ನಾಟಕದಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ, ಆಂಧ್ರ ಸಿಎಂಗೆ ಹೊಸ ಮನವಿ ಮಾಡಿದೆ.

ಭಕ್ತರ ಪಾಲಿಗೆ ಕಲಿಯು ಗದ ವೈಕುಂಠ. ತಿರುಮಲಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಎರಡು ತೆಲುಗು ರಾಜ್ಯಗಳಲ್ಲದೆ, ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ.

ಆಪತ್ತುಗಳನ್ನು ನಿವಾರಿಸುವ ಏಡುಕೊಂಡಲವಾಡ ದರ್ಶನ ಪಡೆಯಲು ಜನ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಥವಾ ಕೆಎಸ್ಟಿಡಿಸಿಯ ಸೀಟ್‌ಗಳಿಗಾಗಿ ಪ್ರತಿದಿನ ಕಾಯುತ್ತಾರೆ. ಪ್ರತಿದಿನ ಟಿಟಿಡಿಯು ಕೆಎಸ್ಟಿಡಿಸಿಗೆ ಕರ್ನಾಟಕದ 250 ಭಕ್ತಾದಿಗಳಿಗೆ ನೇರ ದರ್ಶನಕ್ಕೆ ಸದ್ಯ ಅವಕಾಶ ನೀಡಿದೆ.

ಆದರೂ ನೇರ ದರ್ಶನಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಇದು ತಿರುಪತಿ ಲಡ್ಡು ವಿವಾದದ ನಂತರವೂ ಮುಂದುವರೆದಿದೆ. ಈ ನಿಟ್ಟಿನಲ್ಲಿ ಕೆಎಸ್ಟಿಡಿಸಿಯು ಪ್ರತಿದಿನ 250 ಜನರಿಗೆ ನೇರ ದರ್ಶನದ ಸಂಖ್ಯೆಯನ್ನು, ಒಂದು ಸಾವಿರಕ್ಕೆ ಹೆಚ್ಚಿಸಬೇಕೆಂದು ಆಂಧ್ರ ಸಿಎಂಗೆ ಮನವಿ ಮಾಡಿದ್ದು, ಸದ್ಯ ಮಾತುಕತೆ ನಡೆದಿದೆ.

ಇನ್ನೂ ಸದ್ಯ 250 ಜನ ಭಕ್ತಾದಿಗಳಿಗೆ ನಿಗಮದಿಂದ ಪ್ರತಿನಿತ್ಯ 5-6 ಬಸ್‌‍ಗಳು ರಾಜ್ಯದಿಂದ ತೆರಳುತ್ತಿದ್ದವು. ಸಾವಿರ ಜನರಿಗೆ ಅವಕಾಶ ಸಿಕ್ಕರೇ, ರಾಜ್ಯದಿಂದ ತಿರುಪತಿಯತ್ತ 10-12 ಬಸ್‌‍ಗಳು ಪ್ರವಾಸೋದ್ಯಮ ಇಲಾಖೆಯಿಂದ ಸಂಚರಿಸಲಿವೆ. ಭಕ್ತಾದಿಗಳ ಸಂಖ್ಯೆ ಹೆಚ್ಚಾದರೂ ಅಲ್ಲಿನ ವಸತಿ ವ್ಯವಸ್ಥೆಗೆ ಆತಂಕ ಪಡಬೇಕಿಲ್ಲ. ಏಕೆಂದರೆ ತಿರುಪತಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ 350 ರೂಮ್‌ಗಳ ವ್ಯವಸ್ಥೆ ಮಾಡಲಾಗಿದೆ.

RELATED ARTICLES

Latest News