Sunday, October 6, 2024
Homeರಾಷ್ಟ್ರೀಯ | Nationalತಿರುಪತಿ ಅನ್ನಪ್ರಸಾದ ಕಲುಷಿತ ಆರೋಪ ತಳ್ಳಿ ಹಾಕಿದ ಟಿಟಿಡಿ

ತಿರುಪತಿ ಅನ್ನಪ್ರಸಾದ ಕಲುಷಿತ ಆರೋಪ ತಳ್ಳಿ ಹಾಕಿದ ಟಿಟಿಡಿ

Tirupati laddu row: Now devotees claim insects in prasad, TTD says claim ‘unconvincing

ತಿರುಪತಿ,ಅ.6- ವೆಂಕಟೇಶ್ವರ ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ (ದೇವಸ್ಥಾನದ ನೈವೇದ್ಯ) ಕೀಟಗಳು ಕಂಡುಬಂದಿವೆ ಎಂಬ ಭಕ್ತರ ಹೇಳಿಕೆಯನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತಳ್ಳಿಹಾಕಿದೆ.

ಬುಧವಾರ ಮಧ್ಯಾಹ್ನ 1.30ಕ್ಕೆ ದೇವಸ್ಥಾನದಲ್ಲಿ ಊಟ ಬಡಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ತನ್ನ ಮೊಸರು ಅನ್ನದಲ್ಲಿ ಮಿಲಿಪೈಡ್‌ ಕಂಡುಬಂದಿದೆ. ಈ ನಿರ್ಲಕ್ಷ್ಯ ಸ್ವೀಕಾರಾರ್ಹವಲ್ಲ ಮಕ್ಕಳು ಅಥವಾ ಇತರರು ಕಲುಷಿತ ಆಹಾರವನ್ನು ಸೇವಿಸಿದರೆ, ಸಂಭಾವ್ಯ ಆಹಾರ ವಿಷಕ್ಕೆ ಯಾರು ಹೊಣೆಗಾರರಾಗುತ್ತಾರೆ? ಎಂದು ಪ್ರಶ್ನಿಸಿದ್ದಾರೆ. ಟಿಟಿಡಿ ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಅವುಗಳನ್ನು ಆಧಾರರಹಿತ ಮತ್ತು ಸುಳ್ಳು ಎಂದು ಹೇಳಿದೆ.

ಶ್ರೀವಾರಿ ದರ್ಶನಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಬಿಸಿಯೂಟ ಅನ್ನ ಪ್ರಸಾದವನ್ನು ಟಿಟಿಡಿ ಸಿದ್ಧಪಡಿಸುತ್ತಿದ್ದು, ಆಹಾರದಲ್ಲಿ ಮಿಲಿಪೆಡ್‌ ಬೀದಿದ್ದೆ ಎಂಬುದು ಸುಳ್ಳು ಹೇಳಿಕೆಯಾಗಿದೆ. ಇದು ವೆಂಕಟೇಶ್ವರನ ಮೇಲಿನ ಭಕ್ತರ ನಂಬಿಕೆಯನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ ಮತ್ತು ಸಂಸ್ಥೆಯನ್ನು ದೂಷಿಸುವ ಸಾಧನವಾಗಿದೆ ಎಂದು ಟಿಟಿಡಿ ಹೇಳಿಕೊಂಡಿದೆ.

ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬಿನಂಶವಿದೆ ಎಂಬ ಆರೋಪದ ಕಾರಣ ಸಿಬಿಐ ನೆರವಿನ ವಿಶೇಷ ತನಿಖಾ ತಂಡವು ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನಂಶವನ್ನು ಪರಿಶೀಲಿಸುತ್ತಿದೆ. ಇದರ ಬೆನ್ನಲ್ಲೇ ಪ್ರಸಾದದಲ್ಲಿ ಕೀಟ ಬಿದ್ದಿದ್ದೆ ಎಂಬ ದೂರು ಬಂದಿದೆ.

RELATED ARTICLES

Latest News