ಬೆಂಗಳೂರು,ಆ.16– ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್‌ಎಸ್ ಪಾತ್ರ ಏನು ಎಂಬುದನ್ನ ಸ್ವಲ್ಪ ಓದಿ ತಿಳಿದುಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯಭರಿತ ಸಲಹೆ ನೀಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಿದ್ದರಾಮಯ್ಯನವರ ಹೇಳಿಕೆಯಿಂದ ನನಗೇನು ಅಚ್ಚರಿಯಾಗಿಲ್ಲ. ಕಾಂಗ್ರೆಸ್ ಪಕ್ಷದ ಹತಾಶೆ, ಅಸೂಯೆ ಏನು ಎಂಬುದು ನನಗೆ ಅರ್ಥವಾಗುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಇತಿಹಾಸ, ಸಿದ್ಧಾಂತ, ಕಾರ್ಯದ ಬಗ್ಗೆ ಅಪಪ್ರಚಾರ, ನಿಂದನೆ, ತೇಜೋವಧೆ ಮಾಡುವ ವಿಫಲ ಪ್ರಯತ್ನವನ್ನ ಕಾಂಗ್ರೆಸ್ ಪಕ್ಷ ಅನೇಕ ದಶಕಗಳಿಂದಲೂ ಮಾಡುತ್ತಲೇ ಬಂದಿದೆ. ಆದರೂ ಆರ್‌ಎಸ್‌ಎಸ್ ಬಗ್ಗೆ ಜನರಿಗೆ ಗೌರವ, ಅಭಿಮಾನ ಹೆಚ್ಚುತ್ತಲೇ ಇದೆ. ಸಂಘದ ವೈಚಾರಿಕತೆ ವ್ಯಾಪಕವಾಗಿ ಸ್ವೀಕೃತವಾಗುತ್ತಿದೆ. ಸಂಘ ಪರಿವಾರ ದೊಡ್ಡದಾಗುತ್ತಲೇ ಇದೆ ಎಂದು ಹೇಳಿದ್ದಾರೆ.
ಆರ್‌ಎಸ್‌ಎಸ್‌ಗೆ ನಿಂದನೆ ಮಾಡಿದರೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ನಕಲಿ ಗಾಂಧಿ ಕುಟುಂಬವನ್ನು ಮೆಚ್ಚಿಸಬಹುದು. ತಮ ಅಕ್ಕಪಕ್ಕದಲ್ಲೇ ಓಡಾಡಿಕೊಂಡು ಅವರ ರಹಸ್ಯ ಕಾರ್ಯಸೂಚಿಗಳನ್ನು ಜಾರಿ ಮಾಡಲು ಸದಾ ಹೊಂಚು ಹಾಕುತ್ತಿರುವ ಕೆಲವು ಎಡಪಂಥೀಯರನ್ನು, ಸ್ವಯಂಘೋಷಿತ ಬುದ್ಧಿಜೀವಿಗಳನ್ನು ಓಲೈಕೆ ಮಾಡಬಹುದು. ಆದರೆ ರಾಜಕೀಯ ಲಾಭಕ್ಕಾಗಿ ದೇಶಭಕ್ತ ಸಂಘಟನೆಗಳನ್ನು ನಿಂದಿಸುವ ಕಾಂಗ್ರೆಸ್ ಪಕ್ಷದ ಈ ನಡೆಯನ್ನ ಯಾವ ದೇಶಪ್ರೇಮಿಯೂ ಕ್ಷಮಿಸುವುದಿಲ್ಲ.
ಕೆಲವೇ ಕೆಲವರನ್ನು ಮೆಚ್ಚಿಸಲು ಕೋಟ್ಯಂತರ ದೇಶಪ್ರೇಮಿಗಳ ಕಣ್ಣಲ್ಲಿ ಚಿಕ್ಕವರಾಗಬೇಡಿ ಎಂದು ತಿರುಗೇಟು ನೀಡಿದ್ದಾರೆ. ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್ ಆದಿಯಾಗಿ ಪಕ್ಷ, ಸೈದ್ಧಾಂತಿಕ ಹಿನ್ನೆಲೆ ಮೀರಿ ಅನೇಕ ಮಹನೀಯರು ಖನ ಸೇವೆ, ಸಮರ್ಪಣೆ, ಸಮಾನತೆ, ಭಾತೃತ್ವದ ಭಾವನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ.
1934ರಲ್ಲಿ ಅರ್‌ಎಸ್‌ಎಸ್ ಶಿಬಿರಕ್ಕೆ ಭೇಟಿ ನೀಡಿದ್ದ ಗಾಂಧೀಜಿ ಅವರು ಅಲ್ಲಿ ಎಲ್ಲಾ ಸ್ವಯಂಸೇವಕರು ಜಾತಿ, ಮತ, ಕುಲದ ಭೇದವಿಲ್ಲದೆ ರಾಷ್ಟ್ರ ಸೇವೆಯ ಏಕೈಕ ಗುರಿಯೊಂದಿಗೆ ಒಟ್ಟಿಗೆ ಅನ್ಯೋನ್ಯವಾಗಿ ಒಂದೇ ತಾಯಿ ಮಕ್ಕಳಂತೆ ಇದ್ದದ್ದನ್ನು ಕಂಡು ಜಾತಿಬೇಧ ರಹಿತ, ಅಸ್ಪಶ್ಯತೆರಹಿತ ಸಮಾಜ ನಿರ್ಮಾಣದ ನನ್ನ ಕನಸನ್ನು ಆರ್‌ಎಸ್‌ಎಸ್ ನನಸು ಮಾಡಿದೆ ಎಂದು ಪ್ರಸಂಶೆ ವ್ಯಕ್ತಪಡಿಸಿದ್ದರು ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಆರ್ ಎಸ್‌ಎಸ್ ಸ್ವಯಂಸೇವಕರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು 1963ರ ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್‌ಗೆ ಸ್ವಯಂಸೇವಕರನ್ನು ಆಹ್ವಾನಿಸಿದ್ದರು.ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿರವರು 2018ರಲ್ಲಿ ಆರ್‌ಎಸ್‌ಎಸ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಆಶೋಕ್ ನೆನಪಿಸಿದ್ದಾರೆ.
- ಧರ್ಮಸ್ಥಳ ಅನಾಮಿಕನ ಪ್ರಕರಣ : ಎಸ್ಐಟಿಯಿಂದ ಮಧ್ಯಂತರ ವರದಿ
- ಬೆಂಗಳೂರಿನಾದ್ಯಂತ ಶ್ರೀಕೃಷ್ಣಜನಾಷ್ಟಮಿ ಸಡಗರ
- ಸಿದ್ದರಾಮಯ್ಯನವರೇ, ಗಾಂಧಿ ಕುಟುಂಬ ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಆರ್‌ಎಸ್‌ಎಸ್ ಟೀಕಿಸಬೇಡಿ : ಆರ್.ಅಶೋಕ್
- ಪೊಲೀಸರಿಂದ ತಪ್ಪಿಸಿಕೊಂಡ ಬಾಂಗ್ಲಾದೇಶದ ಗರ್ಭಿಣಿ ಕೈದಿ
- ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಗಡುವು ವಿಧಿಸಲು ಬರಲ್ಲ ; ಕೇಂದ್ರ ಸರ್ಕಾರ ಎಚ್ಚರಿಕೆ