ನಿತ್ಯ ನೀತಿ: ಇತಿಹಾಸ ಹೇಳುತ್ತೆ ಕಳೆದುಹೋದ ದಿನ ಸುಖವಾಗಿತ್ತು ಅಂತ. ವಿಜ್ಞಾನ ಹೇಳುತ್ತೆ ನಾಳೆ ಬರುವ ದಿನ ಸುಖವಾಗಿರುತ್ತದೆ ಅಂತ. ಆದರೆ ಧರ್ಮ ಹೇಳುತ್ತೆ ಸತ್ಯವಾದ ಮನಸ್ಸು ಹಾಗೂ ಸ್ವಚ್ಛವಾದ ಹೃದಯವಿದ್ದರೆ ಪ್ರತಿಕ್ಷಣ ಸುಖವಾಗಿರುತ್ತೆ ಎಂದು.
ಪಂಚಾಂಗ ಶನಿವಾರ 11-11-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಚಿತ್ತಾ / ಯೋಗ: ಪ್ರೀತಿ / ಕರಣ: ವಿಷ್ಟಿ
ಸೂರ್ಯೋದಯ ; ಬೆ.06.16
ಸೂರ್ಯಾಸ್ತ : 05.51
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30
ರಾಶಿ ಭವಿಷ್ಯ
ಮೇಷ: ಕುಟುಂಬದವರೊಂದಿಗೆ ಏನಾದರೂ ವಿವಾದವಿದ್ದರೆ, ಸಂಭಾಷಣೆಯ ಮೂಲಕ ಬಗೆಹರಿಸಿಕೊಳ್ಳುವುದು ಒಳ್ಳೆಯದು.
ವೃಷಭ: ವ್ಯಾಪಾರ-ವ್ಯವಹಾರ ಕ್ಷೇತ್ರಗಳಲ್ಲಿ ನಿಮಗೆ ಉತ್ತಮ ಫಲಿತಾಂಶ ದೊರೆಯುವುದು.
ಮಿಥುನ: ಕೋಪ ನಿಯಂತ್ರಣದಲ್ಲಿದ್ದರೆ ಸಾಮಾಜಿಕ ಮಟ್ಟದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ.
ಕಟಕ: ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ.
ಸಿಂಹ: ವಿದ್ಯಾರ್ಥಿಗಳು ಏಕಾಗ್ರತೆಯ ಕೊರತೆಯಿಂದ ಓದಬೇಕಾಗುತ್ತದೆ.
ಕನ್ಯಾ: ಬೀದಿ ಬದಿಯ ಆಹಾರ ಸೇವಿಸುವುದನ್ನು ತಪ್ಪಿಸಿದರೆ ಒಳ್ಳೆಯದು.
ತುಲಾ: ಪ್ರೇಮ ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ.
ವೃಶ್ಚಿಕ: ಮಾನಸಿಕ ಶಾಂತಿ ಗಾಗಿ ಏಕಾಂತದಲ್ಲಿ ಸಮಯ ಕಳೆಯಲು ಬಯಸುವಿರಿ.
ಧನುಸ್ಸು: ವಿರೋಧಿಗಳಿಂದ ದೂರವಿರಿ. ಆರೋಗ್ಯದಲ್ಲೂ ಏರುಪೇರು ಉಂಟಾಗಬಹುದು.
ಮಕರ: ಸಂಗಾತಿಯಿಂದ ನಿಮಗೆ ಆಶ್ಚರ್ಯಕರ ಉಡುಗೊರೆ ದೊರೆಯುವುದರಿಂದ ಸಂತಸವಾಗಲಿದೆ.
ಕುಂಭ: ಪತ್ನಿಯ ಸಹಾಯದಿಂದ ಹಣಕಾಸಿನ ವಿಷಯದಲ್ಲಿ ಸುಧಾರಣೆ ಕಂಡುಬರಲಿದೆ.
ಮೀನ: ಅವಸರದಲ್ಲಿ ಯಾವುದೇ ನಿರ್ಧಾರ ಬೇಡ.