ನಿತ್ಯ ನೀತಿ : ಇತರರಿಗೆ ಒಳ್ಳೆಯದಾಗಲೆಂದು ಬಯಸುವ ಒಳ್ಳೆಯವನು ನಾಶ ಒದಗುವ ಸಮಯದಲ್ಲಿಯೂ ದ್ವೇಷವನ್ನು ಮಾಡುವುದಿಲ್ಲ. ಶ್ರೀಗಂಧದ ಮರ ಕತ್ತರಿಸಿದಾಗಲೂ ಕೊಡಲಿಯ ಬಾಯನ್ನು ಸುವಾಸನೆಯುಳ್ಳದ್ದನ್ನಾಗಿ ಮಾಡುತ್ತದೆ.
ಪಂಚಾಂಗ ಭಾನುವಾರ 18-02-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ನವಮಿ / ನಕ್ಷತ್ರ: ರೋಹಿಣಿ / ಯೋಗ: ವೈಧೃತಿ / ಕರಣ: ತೈತಿಲ
ಸೂರ್ಯೋದಯ : ಬೆ.06.41
ಸೂರ್ಯಾಸ್ತ : 06.26
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30
ರಾಶಿ ಭವಿಷ್ಯ
ಮೇಷ: ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಿ.
ವೃಷಭ: ಆಸ್ತಿ ವಿಚಾರದಲ್ಲಿ ಕಲಹ. ಧನ ಹಾನಿ. ಸಹೋದರತ್ವದಲ್ಲಿ ದ್ವೇಷ ಉಂಟಾಗಲಿದೆ.
ಮಿಥುನ: ವಾಹನ ಚಾಲನೆ ಮಾಡುವಾಗ ಜಾಗ್ರತೆ ವಹಿಸಿ.
ಕಟಕ: ಖಾಸಗಿ ಉದ್ಯೋಗಿ ಗಳಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ.
ಸಿಂಹ: ಒತ್ತಡದ ಜೀವನ. ದೃಢ ನಿರ್ಧಾರದಿಂದ ಅಭಿವೃದ್ಧಿ. ವ್ಯಾಪಾರದಲ್ಲಿ ಲಾಭ.
ಕನ್ಯಾ: ಮಕ್ಕಳ ಆರೋಗ್ಯ ದಲ್ಲಿ ಚೇತರಿಕೆ. ನಿವೇಶನ ಖರೀದಿಸುವಿರಿ.
ತುಲಾ: ಶಾರೀರಿಕ ಸಮಸ್ಯೆ. ಸಣ್ಣ ವ್ಯಾಪಾರಸ್ಥರಿಗೆ ಕೊಂಚ ಲಾಭ. ಅಧಿಕಾರಿ ವರ್ಗದವರಿಗೆ ತೊಂದರೆ.
ವೃಶ್ಚಿಕ: ಶುಭ ಕಾರ್ಯಗಳಲ್ಲಿ ಪ್ರಗತಿ ಸಾಧಿಸುವಿರಿ. ಪಾಲುದಾರಿಕೆಯಲ್ಲಿ ಯಶಸ್ಸು ಸಿಗಲಿದೆ.
ಧನುಸ್ಸು: ಸಹೋದ್ಯೋಗಿಗಳಿಂದ ತೊಂದರೆ. ಆಕಸ್ಮಿಕವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ.
ಮಕರ: ದಾಂಪತ್ಯ ಜೀವನದಲ್ಲಿ ಕಲಹ. ಗೊಂದಲದ ವಾತಾವರಣ ನಿರ್ಮಾಣವಾಗಬಹುದು.
ಕುಂಭ: ಉತ್ತಮ ಆರೋಗ್ಯ. ಧಾರ್ಮಿಕ ಕಾರ್ಯ ಗಳಿಗೆ ಹೆಚ್ಚು ಒತ್ತು. ತಾಯಿಯಿಂದ ಸಹಾಯ ಸಿಗಲಿದೆ.
ಮೀನ: ವ್ಯಾಪಾರದಲ್ಲಿ ಹಿನ್ನಡೆಯಾಗಲಿದೆ. ಉದ್ಯೋಗ ಬದಲಿಸಲು ಆಲೋಚಿಸುವಿರಿ.