ನಿತ್ಯ ನೀತಿ: ಮಡಿ ಎನ್ನುವುದು ಮನಸ್ಸಿನ ಭಾವಸ್ಥರ. ಕೇವಲ ಸ್ನಾನ ಮಾಡಿದ ಮಾತ್ರಕ್ಕೆ ಮಡಿಯಾಗದು. ಮನಸ್ಸು ಮಲಿನ ಮಾಡಿಕೊಂಡು ಮಾಡುವ ಪೂಜೆ ದೇವರಿಗೆ ಪ್ರಿಯವಾಗುವುದಿಲ್ಲ. ಕೇವಲ ವ್ಯಾವಹಾರಿಕ ಪೂಜೆಯಾಗುತ್ತದೆ.
ಪಂಚಾಂಗ ಭಾನುವಾರ 19-11-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಶ್ರವಣ / ಯೋಗ: ವೃದ್ಧಿ / ಕರಣ: ಗರಜೆ
ಸೂರ್ಯೋದಯ : ಬೆ.06.20
ಸೂರ್ಯಾಸ್ತ : 05.50
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30
ರಾಶಿ ಭವಿಷ್ಯ
ಮೇಷ: ವಿವಾಹಿತರು ಉತ್ತಮ ದಾಂಪತ್ಯ ಜೀವನವನ್ನು ಆನಂದಿಸುವರು.
ವೃಷಭ: ಸ್ಥಗಿತಗೊಂಡ ಕೆಲಸಗಳು ಮುಂದುವರಿಯಲಿವೆ.
ಮಿಥುನ: ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳದಿರಿ. ಅತಿಯಾದ ಆತ್ಮವಿಶ್ವಾಸ ಬೇಡ.
ಕಟಕ: ಕುಟುಂಬದ ಸದಸ್ಯರಿಂದ ಒಳ್ಳೆಯ ಸುದ್ದಿ ಕೇಳುವಿರಿ. ಅತ್ತಿಗೆಯಿಂದ ಲಾಭವಾಗಲಿದೆ.
ಸಿಂಹ: ಕೌಟುಂಬಿಕ ಮತ್ತು ವೈವಾಹಿಕ ಜೀವನವು ಆಹ್ಲಾದಕರವಾಗಿರುತ್ತದೆ.
ಕನ್ಯಾ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ತುಲಾ: ನಿಮ್ಮ ಶ್ರಮ ಮತ್ತು ಅದೃಷ್ಟ ಎಲ್ಲಾ ರೀತಿಯಲ್ಲೂ ಬೆಂಬಲ ನೀಡುತ್ತದೆ.
ವೃಶ್ಚಿಕ: ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ.
ಧನುಸ್ಸು: ಹಿರಿಯ ಅಧಿಕಾರಿಗಳು, ಕುಟುಂಬದವರು ನಿಮ್ಮ ವ್ಯಕ್ತಿತ್ವವನ್ನು ಪ್ರಶಂಸಿಸುವರು.
ಮಕರ: ವಿವಿಧ ಕ್ಷೇತ್ರ ಗಳಲ್ಲಿ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಕುಂಭ: ಯೋಜಿತ ರೀತಿಯಲ್ಲಿ ಹೋದರೆ ಸಮಸ್ಯೆ ಗಳು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲ.
ಮೀನ: ವ್ಯವಹಾರದಲ್ಲಿನ ನಿಮ್ಮ ನಿರ್ಧಾರಗಳು ಲಾಭ ತಂದುಕೊಡಲು ಕಾರಣವಾಗುತ್ತವೆ.