ನಿತ್ಯ ನೀತಿ : ನೂರು ಪುಸ್ತಕ ಓದಿದರೇನು? ನೂರು ಪ್ರವಚನ ಕೇಳಿದರೇನು? ತನ್ನಾಂತರ್ಯದಲ್ಲಿನ ಕಶ್ಮಲತೆಯನ್ನು ತೆಗೆಯದಿದ್ದರೇನು ಪ್ರಯೋಜನ.
ಪಂಚಾಂಗ ಗುರುವಾರ 23-11-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ವಜ್ರ / ಕರಣ: ವಣಿಜ್
ಸೂರ್ಯೋದಯ : ಬೆ.06.22
ಸೂರ್ಯಾಸ್ತ : 05.50
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30
ರಾಶಿ ಭವಿಷ್ಯ
ಮೇಷ: ಉಲ್ಲಾಸದಿಂದ ಮೈಮರೆಯದಿರಿ. ನಿಮ್ಮನ್ನು ಅತಿಯಾಗಿ ಪ್ರೀತಿಸುವವರೇ ದ್ವೇಷಿಸುವರು.
ವೃಷಭ: ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಮಿಥುನ: ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವ ಪ್ರವೃತ್ತಿಯನ್ನು ನಿಯಂತ್ರಿಸಿ.
ಕಟಕ: ಅಧ್ಯಯನದ ಅಭ್ಯಾಸ ಮಾಡುವಾಗ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು.
ಸಿಂಹ: ಅತಿಯಾದ ಒಳ್ಳೆಯತನ, ಬೇಜವಾಬ್ದಾರಿತನದಿಂದಾಗಿ ಸಂಕಷ್ಟಕ್ಕೆ ಸಿಲುಕುವಿರಿ.
ಕನ್ಯಾ: ವಿವಿಧ ಮೂಲಗಳಿಂದ ಧನಲಾಭ. ವೈರಿಗಳಿಂದ ದೂರವಿರುವುದು ಒಳಿತು.
ತುಲಾ: ಕೆಲಸದ ಸ್ಥಳದಲ್ಲಿ ಪ್ರಾಬಲ್ಯ ಸ್ಥಾಪಿಸುವಿರಿ. ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿತರಾಗುವಿರಿ.
ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಫಲ ಲಭಿಸುವುದು. ಕಾರ್ಯಸಾಧನೆಗಾಗಿ ತಿರುಗಾಟ.
ಧನುಸ್ಸು: ಹಣ ಬಂದರೂ ಉಳಿಯುವುದಿಲ್ಲ. ಚಂಚಲ ಸ್ವಭಾವವನ್ನು ನಿಯಂತ್ರಿಸಿಕೊಳ್ಳಿ.
ಮಕರ: ಬರುವ ಅವಕಾಶಗಳನ್ನು ಸದುಪ ಯೋಗಪಡಿಸಿಕೊಳ್ಳಿ. ಸುಖ ಭೋಜನ ಮಾಡುವಿರಿ.
ಕುಂಭ: ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕ್ರಮೇಣ ಪ್ರಗತಿ ಕಂಡುಕೊಳ್ಳುವಿರಿ.
ಮೀನ: ಸ್ತ್ರೀಯರು ಹೆಚ್ಚು ತಾಳ್ಮೆಯಿಂದ ಇರುವುದು ಕ್ಷೇಮಕರ. ಮಗನಿಂದ ಶುಭವಾರ್ತೆ ಕೇಳುವಿರಿ.