Saturday, May 4, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-01-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-01-2024)

ನಿತ್ಯ ನೀತಿ : ಗೆದ್ದಾಗ ಅಹಂ ಪಟ್ಟವನು ಉಳಿಯಲಾರ. ಸೋತಾಗ ಕುಸಿದು ಹೋದವನು ಬೆಳೆಯಲಾರ. ಗೆಲುವಿನ ಸಂಭ್ರಮ ನೆತ್ತಿಗೆ ಹೇರದಿರಲಿ. ಸೋಲಿನ ನೋವು ಮನಸ್ಸಿಗೆ ತಾಕದಿರಲಿ.

ಪಂಚಾಂಗ ಬುಧವಾರ 24-01-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಪುನರ್ವಸು / ಯೋಗ: ವೈಧೃತಿ / ಕರಣ: ಗರಜೆ

ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.17
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ
: ಪಿತ್ರಾರ್ಜಿತ ಆಸ್ತಿ ವಿಚಾರದ ಮಾತುಕತೆ ನಡೆಯಲಿದೆ. ವಾಹನದಿಂದ ಅಪಾಯ.
ವೃಷಭ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ ಮತ್ತು ಅದರಲ್ಲಿ ನೀವು ಯಶಸ್ಸು ಸಾಧಿಸುವಿರಿ.
ಮಿಥುನ: ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ ದಿನ. ಪ್ರಯಾಣದಲ್ಲಿ ಜಾಗೃತರಾಗಿರಿ.

ಕಟಕ: ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.
ಸಿಂಹ: ಆಕಸ್ಮಿಕ ಧನಾಗಮನ ವಾಗಲಿದೆ. ಕೃಷಿ ಉಪಕರಣಗಳ ಖರೀದಿಸುವಿರಿ.
ಕನ್ಯಾ: ಅಗತ್ಯವಿರುವ ವಸ್ತುಗಳನ್ನು ಖರೀದಿಸುವುದು ಒಳಿತು. ಸಿಕ್ಕಾಪಟ್ಟೆ ಖರ್ಚು ಮಾಡದಿರಿ.

ತುಲಾ: ಕೌಟುಂಬಿಕ ಮತ್ತು ವೈವಾಹಿಕ ಜೀವನ ಆಹ್ಲಾದಕರವಾಗಿರುತ್ತದೆ.
ವೃಶ್ಚಿಕ: ಪ್ರಾಮುಖ್ಯತೆ ನೀಡಿ. ಹೊಸ ವ್ಯವಹಾರ ಪ್ರಾರಂಭಿಸಿಲು ಉತ್ತಮ ದಿನ.
ಧನುಸ್ಸು: ಯಾರ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಸಲು ಹೋಗದಿರಿ. ಕಷ್ಟ ಎದುರಿಸಬೇಕಾಗುತ್ತದೆ.

ಮಕರ: ಬರುವ ಅವಕಾಶಗಳನ್ನು ಸದುಪಯೋಗಪಡಿಸಿ ಕೊಳ್ಳಿ.ಸರ್ಕಾರಿ ಕೆಲಸದಲ್ಲಿ ಯಶಸ್ಸು ಸಾಧಿಸುವಿರಿ.
ಕುಂಭ: ಹೆಚ್ಚಿನ ಲಾಭದ ಆಸೆಗೆ ಇರುವ ಉಳಿತಾಯದ ಹಣವನ್ನು ಖರ್ಚು ಮಾಡದಿರಿ.
ಮೀನ: ಯುವಕರು ಶಾಶ್ವತ ಕೆಲಸ ಹುಡುಕುವ ಪ್ರಯತ್ನ ದಲ್ಲಿ ಯಶಸ್ವಿಯಾಗುತ್ತಾರೆ.

RELATED ARTICLES

Latest News