Friday, October 11, 2024
Homeರಾಷ್ಟ್ರೀಯ | Nationalಜಯಲಲಿತಾರ ಚಿನ್ನದ ಆಭರಣಗಳನ್ನು ಸರ್ಕಾರಕ್ಕೆ ವರ್ಗಾಯಿಸಲು ಕೋರ್ಟ್ ಆದೇಶ

ಜಯಲಲಿತಾರ ಚಿನ್ನದ ಆಭರಣಗಳನ್ನು ಸರ್ಕಾರಕ್ಕೆ ವರ್ಗಾಯಿಸಲು ಕೋರ್ಟ್ ಆದೇಶ

ಬೆಂಗಳೂರು, ಜ 23 – ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ ಜಯಲಲಿತಾ ಅವರಿಂದ ವಶಪಡಿಸಿಕೊಂಡ ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ರಾಜ್ಯ ಸರ್ಕಾರಕ್ಕೆ ವರ್ಗಾಯಿಸುವಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಆದೇಶಿಸಿದೆ. ಜಯಲಲಿತಾ ಮತ್ತು ಇತರರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ವಸ್ತು ಸಾಕ್ಷ್ಯದ ಭಾಗವಾಗಿರುವ ಈ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಿಲೇವಾರಿ ಮಾಡಲು ತಮಿಳುನಾಡು ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧಿಶ ಹೆಚ್ ಎ ಮೋಹನ್ ಅವರು ಈ ಆದೇಶವನ್ನು ನೀಡಿದ್ದಾರೆ.

ಅಮೆರಿಕದಲ್ಲಿ ಬಂದೂಕುದಾರಿಯಿಂದ ಗುಂಡಿನ ದಾಳಿ, 8 ಮಂದಿ ಬಲಿ

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕರ್ನಾಟಕದಲ್ಲಿ ನಡೆದ ವಿಚಾರಣೆಯಲ್ಲಿ ಎಲ್ಲಾ ವಸ್ತು ಸಾಕ್ಷ್ಯಗಳು ಈಗ ನ್ಯಾಯಾಲಯದ ವಶದಲ್ಲಿರುವ ಕರ್ನಾಟಕ ಖಜಾನೆಯಲ್ಲಿವೆ. ಜಯಲಲಿತಾ ಅವರ ಸಂಬಂಧಿಕರು ರಾಜ್ಯದಿಂದ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳಿಗೆ ಅರ್ಹರಲ್ಲ ಎಂದು ನ್ಯಾಯಾಲಯ ಈ ಹಿಂದೆ ಹೇಳಿತ್ತು. ಹೀಗಾಗಿ ಜಯಲಲಿತಾ ಅವರ ಸೋದರಳಿಯ ಜೆ.ದೀಪಾ ಮತ್ತು ಜೆ.ದೀಪಕ್ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ಸಿಬಿಐ ನ್ಯಾಯಾಲಯ ತಿರಸ್ಕರಿಸಿತ್ತು.

ವಿಶೇಷ ನ್ಯಾಯಾಲಯವು ತಮಿಳುನಾಡು ಗೃಹ ಇಲಾಖೆಯು ಆಭರಣಗಳನ್ನು ಸಂಗ್ರಹಿಸಲು ಪೊಲೀಸರೊಂದಿಗೆ ಕಾರ್ಯದರ್ಶಿ ಶ್ರೇಣಿಯಲ್ಲಿರುವ ಸಮರ್ಥ ವ್ಯಕ್ತಿಗಳಿಗೆ ಅ„ಕಾರ ನೀಡುತ್ತದೆ ಎಂದು ನಿರ್ದೇಶನ ನೀಡಿತು ಇದೇ ಆದೇಶದಲ್ಲಿ ವಿಶೇಷ ನ್ಯಾಯಾಲಯವು ರಾಜ್ಯದಲ್ಲಿ ನಡೆಸಿದ ವಿಚಾರಣೆಯ ವೆಚ್ಚಕ್ಕಾಗಿ ಕರ್ನಾಟಕಕ್ಕೆ ಐದು ಕೋಟಿ ರೂ. ಚೆನ್ನೈನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಜಯಲಲಿತಾ ಅವರಿಗೆ ಸಂಬಂಧಿಸಿದ ಖಾತೆಯಲ್ಲಿನ ನಿಶ್ಚಿತ ಠೇವಣಿಯಿಂದ ಪಾವತಿ ಮಾಡಲಾಗುತ್ತದೆ.

ಜಯಲಲಿತಾ, ಅವರ ಮಾಜಿ ಆಪ್ತ ಸಹಾಯಕಿ ವಿ ಶಶಿಕಲಾ, ಜಯಲಲಿತಾ ಅವರ ಸಾಕು ಪುತ್ರ ವಿಎನ್ ಸುಧಾಕರನ್ ಮತ್ತು ಶಶಿಕಲಾ ಅವರ ಸೊಸೆ ಜೆ ಇಳವರಸಿ ವಿರುದ್ಧ ಬೆಂಗಳೂರಿನ ವಿಶೇಷ ನ್ಯಾಯಾಲಯವು ಅಕ್ರಮ ಆಸ್ತಿ ಗಳಿಕೆ ವಿಚಾರಣೆ ನಡೆಸಿತು.

RELATED ARTICLES

Latest News