Friday, July 11, 2025
Homeಅಂತಾರಾಷ್ಟ್ರೀಯ | Internationalಅಮೆರಿಕದಲ್ಲಿ ಬಂದೂಕುದಾರಿಯಿಂದ ಗುಂಡಿನ ದಾಳಿ, 8 ಮಂದಿ ಬಲಿ

ಅಮೆರಿಕದಲ್ಲಿ ಬಂದೂಕುದಾರಿಯಿಂದ ಗುಂಡಿನ ದಾಳಿ, 8 ಮಂದಿ ಬಲಿ

ಚಿಕಾಗೋ, ಜ.23- ಅಮೆರಿಕದ ಚಿಕಾಗೋ ರಾಜ್ಯದ ಶಿಕಾಗೋ ಉಪನಗರದಲ್ಲಿ ವ್ಯಕ್ತಿಯೊಬ್ಬ ಏಕಾ ಏಕಿ ಗುಂಡಿನ ದಾಳಿ ನಡೆಸಿ 8 ಜನರನ್ನು ಕೊಂದಿದ್ದಾನೆ. ದಾಳಿ ನಡೆಸಿದ ಶಂಕಿತ ಬಂದೂಕುಧಾರಿ ವ್ಯಕ್ತಿ ಟೆಕ್ಸಾಸ್‍ನಲ್ಲಿ ಪೊಲೀಸರೊಂದಿಗೆ ಘರ್ಷಣೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಅಧಿಕಾರಿಯೊಬ್ಬರು ತಡರಾತ್ರಿ ತಿಳಿಸಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ಇರಬೇಕು ; ಮಸ್ಕ್

ಜೋಲಿಯೆಟ್‍ನಲ್ಲಿರುವ ಪೊಲೀಸರು ಸುಮಾರು 8:30 ಗಂಟೆಗೆ ಫೇಸ್‍ಬುಕ್‍ನಲ್ಲಿ ಈ ಮಾಹಿತಿ ತಿಳಿಸಿದ್ದಾರೆ. ಟೆಕ್ಸಾಸ್‍ನ ನಟಾಲಿಯಾ ಬಳಿ ಅಮೆರಿಕದ ಮಾರ್ಷಲ್‍ಗಳು ಆರೋಈಪಿ ರೋಮಿಯೋ ನ್ಯಾನ್ಸ್ ಘರ್ಷಣೆಯಲ್ಲಿ ತಾನೇ ಗುಂಡು ಹಾರಿಸಿಕೊಂಡಿದ್ದಾನೆ. ಇಲಿನಾಯ್ಸ್‍ನ ವಿಲ್ ಕೌಂಟಿ ಮತ್ತು ಜೋಲಿಯೆಟ್ ನಗರದ ಪೊಲೀಸರು ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದರು.

ಗುಂಡಿನ ದಾಳಿಯಲ್ಲಿ ಬಲಿಯಾದವರ ಮಾಹಿತಿ ಕಲೆ ಹಾಕಲಾಗುತ್ತಿದೆ ಹಲವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News