ನಿತ್ಯ ನೀತಿ : ಸೋಲೆಂಬ ರೋಗಕ್ಕೆ ಕಠಿಣ ಪರಿಶ್ರಮ ಮತ್ತು ಆತವಿಶ್ವಾಸವೇ ಮದ್ದು. ಇದು ಯಾರಲ್ಲಿ ಇರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.
ಪಂಚಾಂಗ : ಸೋಮವಾರ , 01-07-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ಅಶ್ವಿನಿ / ಯೋಗ: ಸುಕರ್ಮ / ಕರಣ: ಭವ
ಸೂರ್ಯೋದಯ – ಬೆ.05.57
ಸೂರ್ಯಾಸ್ತ – 06.50
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00
ರಾಶಿಭವಿಷ್ಯ :
ಮೇಷ: ಕೆಲಸದ ಒತ್ತಡ ಸ್ವಲ್ಪ ಕಡಿಮೆಯಾಗಿ ಉದ್ಯೋಗ ಸ್ಥಳದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ.
ವೃಷಭ: ಆತ್ಮವಿಶ್ವಾಸದಿಂದ ದುಡಿದರೆ ಪ್ರಗತಿಯ ಹಾದಿ ಕಾಣುವಿರಿ. ನಿರೀಕ್ಷಿತ ಧನಾಗಮನವಾಗಲಿದೆ.
ಮಿಥುನ: ದೊಡ್ಡ ತೊಂದರೆಯಲ್ಲಿ ಸಿಲುಕಿಸಿಕೊಳ್ಳುವ ಸಾಧ್ಯತೆಗಳಿವೆ. ಬಹಳ ಎಚ್ಚರಿಕೆಯಿಂದಿರಿ.
ಕಟಕ: ಕಠಿಣ ಪರಿಶ್ರಮ ಪಡುವುದರಿಂದ ಮಾತ್ರ ನಿಮಗೆ ಯಶಸ್ಸು ದೊರೆಯಲಿದೆ.
ಸಿಂಹ: ಕೋಪ ಅನರ್ಥಕ್ಕೆ ಕಾರಣವಾಗುತ್ತದೆ. ಉದ್ಯೋಗ ಸ್ಥಳದಲ್ಲಿ ತೊಂದರೆಯಾಗುವುದು.
ಕನ್ಯಾ: ಸಾಲ ಮರು ಪಾವತಿ ಮಾಡುವಲ್ಲಿ ಯಶಸ್ವಿ ಯಾಗುವಿರಿ.
ತುಲಾ: ವೃತ್ತಿಜೀವನದಲ್ಲಿ ಕೆಲವು ಸಂದಿಗ್ಧ ಪರಿಸ್ಥಿತಿಗಳು ಎದುರಾಗಲಿವೆ.
ವೃಶ್ಚಿಕ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಉತ್ತಮ ದಿನ.
ಧನುಸ್ಸು: ಮನೆಯ ಸದಸ್ಯರಿಂದ ದೂರ ಹೋಗುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಮಕರ: ಲಾಭ ಗಳಿಸಲು ಮತ್ತು ಆರ್ಥಿಕ ಸ್ಥಿತಿ ಬಲಪಡಿಸಲು ಅನೇಕ ಅವಕಾಶಗಳು ಸಿಗಲಿವೆ.
ಕುಂಭ: ವಿದ್ಯಾರ್ಥಿಗಳು ಸಾಧ್ಯವಾದರೆ ಸ್ನೇಹಿತರೊಂದಿಗೆ ಅಧ್ಯಯನ ಮಾಡಿ. ದೂರ ಪ್ರಯಾಣ ಬೇಡ.
ಮೀನ: ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಹಲವು ಬಾರಿ ಯೋಚಿಸಿ.