ನಿತ್ಯ ನೀತಿ : ಬದುಕಿ, ಇತರರನ್ನು ಬದುಕಲು ಬಿಡಿ ಎಂಬುದೇ ನಮ ಜೀವನದ ಮಂತ್ರವಾಗಬೇಕು.
ಪಂಚಾಂಗ : ಶುಕ್ರವಾರ , 02-08-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ /ಕೃಷ್ಣ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಆರಿದ್ರಾ / ಯೋಗ: ಹರ್ಷಣ / ಕರಣ: ವಿಷ್ಠಿ
ಸೂರ್ಯೋದಯ – ಬೆ.06.06
ಸೂರ್ಯಾಸ್ತ – 06.46
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ
ಮೇಷ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದುತ್ತೀರಿ.
ವೃಷಭ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.
ಮಿಥುನ: ಶತ್ರುಗಳ ಬಲೆಗೆ ಬೀಳದಂತೆ ಎಚ್ಚರ ವಹಿಸಬೇಕು. ದೂರ ಸಂಚಾರ ಮಾಡದಿರಿ.
ಕಟಕ: ನೀವು ಮಾಡುವ ಒಳ್ಳೆಯ ಕಾರ್ಯಗಳು ನಿಮ್ಮ ಕುಟುಂಬದ ಹಿರಿಮೆಯನ್ನು ಹೆಚ್ಚಿಸುತ್ತದೆ.
ಸಿಂಹ: ಜೀವನ ಸಂಗಾತಿ ಯಿಂದ ಆರ್ಥಿಕ ಲಾಭ ಮತ್ತು ಗೌರವ ಪಡೆಯುವಿರಿ.
ಕನ್ಯಾ: ವ್ಯವಹಾರದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾದರೆ ತೊಂದರೆ ಅನುಭವಿಸಬೇಕಾಗುತ್ತದೆ.
ತುಲಾ: ಪೋಷಕರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಬನ್ನಿ.
ವೃಶ್ಚಿಕ: ಮಸಾಲೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸದಿರುವುದು ಒಳಿತು.
ಧನುಸ್ಸು: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗಬಹುದಾದ ವಿಪತ್ತುಗಳು ದೂರವಾಗಲಿವೆ.
ಮಕರ: ನಿಮ್ಮ ಬೇಜವಾಬ್ದಾರಿತನದಿಂದಾಗಿ ಸಂಕಷ್ಟಕ್ಕೆ ಸಿಲುಕುವಿರಿ. ವ್ಯಾಸಂಗದಲ್ಲಿ ತೊಂದರೆ.
ಕುಂಭ: ಹಣಕಾಸು ವ್ಯವಹಾರದಲ್ಲಿ ನಷ್ಟ ತಪ್ಪಿಸುವ ಉದ್ದೇಶದಿಂದ ಜಾಗರೂಕತೆಯಿಂದ ಇರಿ.
ಮೀನ: ಕಲಾವಿದರುಗಳಿಗೆ, ಪತ್ರಕರ್ತರಿಗೆ ಪ್ರಶಂಸೆಯ ಮಾತುಗಳು ಕೇಳಿಬರುವುವು.