ನಿತ್ಯ ನೀತಿ : ಯಾವುದಕ್ಕೂ ಭಯಪಡದಿರು. ನಿನ್ನ ಕರ್ಮ, ನಿನ್ನ ಧರ್ಮ, ನಿನ್ನ ಶ್ರಮ, ಭಗವಂತನ ಮೇಲಿರುವ ನಿನ್ನ ಪ್ರೇಮ ನಿನ್ನನ್ನು ರಕ್ಷಿಸುವುದು. ಇದು ಸತ್ಯ.
ಪಂಚಾಂಗ : ಬುಧವಾರ, 10-07-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ
ತಿಥಿ: ಚತುರ್ಥಿ / ನಕ್ಷತ್ರ: ಮಘಾ / ಯೋಗ: ವ್ಯತೀಪಾತ / ಕರಣ: ಭವ
ಸೂರ್ಯೋದಯ – ಬೆ.06.00
ಸೂರ್ಯಾಸ್ತ – 06.50
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00
ರಾಶಿಭವಿಷ್ಯ :
ಮೇಷ: ಮನೆ ನಿರ್ಮಾಣ ಕೆಲಸದಲ್ಲಿರುವ ಅಡೆತಡೆಗಳು ಸಹೋದರರು ನೀಡುವ ಸಲಹೆಗಳಿಂದ ದೂರವಾಗಲಿವೆ.
ವೃಷಭ: ಹಣ ಹೇಗೆ ವಿನಿಯೋಗ ಆಗಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಬಹಳ ಮುಖ್ಯ.
ಮಿಥುನ: ಉದ್ಯೋಗದ ಕಡೆಗೆ ಹೆಚ್ಚಿನ ಗಮನಹರಿಸಿ. ಖರ್ಚು ಹೆಚ್ಚಾಗಲಿದೆ.
ಕಟಕ: ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸುವಿರಿ.
ಸಿಂಹ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.
ಕನ್ಯಾ: ಸಹೋದರರು ಆರ್ಥಿಕ ಸಹಾಯ ಮಾಡುವರು. ಇದರಿಂದ ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಲಿದೆ.
ತುಲಾ: ಬೇರೆಯವರು ನಿಮ್ಮೊಂದಿಗೆ ಗೆಳೆತನ ಬೆಳೆಸಲು ಬಯಸುತ್ತಾರೆ. ಜಾಗ್ರತೆ ವಹಿಸುವುದು ಬಹಳ ಸೂಕ್ತ.
ವೃಶ್ಚಿಕ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರಿ.
ಧನುಸ್ಸು: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.
ಮಕರ: ಕೆಲಸ ಸ್ಥಳದಲ್ಲಿ ಕಿರಿಕಿರಿ ಉಂಟಾಗಿ ಕೆಲಸ ಬಿಡುವ ಮನಸ್ಸು ಕೂಡ ಮಾಡಬಹುದು.
ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ಶುಭ ದಿನ. ಕೃಷಿಕರಿಗೆ ಶುಭಫಲ ಸಿಗಲಿದೆ. ಉದ್ಯೋಗದಲ್ಲಿ ಲಾಭ.
ಮೀನ: ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಯಾಗುವುದರಿಂದ ವೈದ್ಯರನ್ನು ಭೇಟಿ ಮಾಡಿ.