ನಿತ್ಯ ನೀತಿ : ಬದುಕಿನ ಅನೇಕ ಸಮಸ್ಯೆಗಳಿಗೆ ನಮ ಮಾತಿನ ಶೈಲಿಯೇ ಕಾರಣವಾಗುತ್ತದೆ. ನಾವು ಏನು ಹೇಳುತ್ತೇವೆ ಅನ್ನುವುದಕ್ಕಿಂತ ಹೇಗೆ ಹೇಳುತ್ತೇವೆ ಎನ್ನುವುದೇ ಮುಖ್ಯ..!
ಪಂಚಾಂಗ : ಗುರುವಾರ, 11-07-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ /ತಿಥಿ: ಪಂಚಮಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ವರೀಯಾನ್ / ಕರಣ: ಕೌಲವ
ಸೂರ್ಯೋದಯ – ಬೆ.06.00
ಸೂರ್ಯಾಸ್ತ – 06.50
ರಾಹುಕಾಲ – 1.30-3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00-10.30
ರಾಶಿಭವಿಷ್ಯ :
ಮೇಷ: ಅನಾವಶ್ಯಕ ವಿಚಾರಗಳನ್ನು ಮನಸ್ಸಿಗೆ ಹಾಕಿಕೊಳ್ಳದೆ ಸದಾ ಒಳ್ಳೆಯದನ್ನೇ ಚಿಂತಿಸಿ.
ವೃಷಭ: ತಂದೆ ಮಾತಿನಂತೆ ನಡೆಯುವುದು ಶ್ರೇಯಸ್ಕರ.
ಮಿಥುನ: ಉದ್ಯೋಗದ ಅನಿವಾರ್ಯತೆ ಬಿಟ್ಟು ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕಟಕ: ಜನರನ್ನು ಆಕರ್ಷಿ ಸುವ ಕಲೆ ಜತೆಗೆ ತಂತ್ರಗಾರಿಕೆ ಬಳಸಿ ಕೊಳ್ಳುವುದರಿಂದ ಲಾಭ ಗಳಿಸುವಿರಿ.
ಸಿಂಹ: ಆರ್ಥಿಕ ಲಾಭ ಪಡೆಯುವಿರಿ.
ಕನ್ಯಾ: ಶತ್ರುಗಳ ಸ್ಪರ್ಧಾತ್ಮಕ ಗುಣದಿಂದ ಆತಂಕಕ್ಕೆ ಒಳಗಾಗುವಿರಿ.
ತುಲಾ: ಮಾತು ಗಾರಿಕೆಯಲ್ಲಿ ಸೋಲು ಒಪ್ಪಿಕೊಳ್ಳಬೇಕಾಗುತ್ತದೆ.
ವೃಶ್ಚಿಕ: ಆದರ್ಶ ಹಾಗೂ ತತ್ವಗಳ ಜತೆಗೆ ಹಿರಿಯರ ಉತ್ತಮ ಅನುಭವ ಹಾಗೂ ಸಲಹೆ ಅಳವಡಿಸಿಕೊಳ್ಳಿ.
ಧನುಸ್ಸು: ಹಣಕಾಸಿನ ಮುನ್ನೆಚ್ಚರಿಕೆ ಅಗತ್ಯ.
ಮಕರ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರು ವವರು ಹಂತ ಹಂತವಾಗಿ ಸುಧಾರಿಸಿಕೊಳ್ಳುವರು.
ಕುಂಭ: ಮಸಾಲೆ ಪದಾರ್ಥಗಳಿಂದ ದೂರವಿರಿ. ಮೀನ: ವ್ಯವಹಾರದಲ್ಲಿ ಲಾಭ ಸಿಗಲಿದೆ.