Thursday, November 14, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-11-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-11-2024)

Today's Horoscope

ನಿತ್ಯ ನೀತಿ : ಕರ್ಮ ಹೇಳುತ್ತದೆ; ನಿನ್ನವರು ಬದಲಾಗಿ ನಿನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದಾಗ ಒಬ್ಬನೇ ಬದುಕಲು ಸಿದ್ಧನಾಗಿರು. ಇವತ್ತಿಗೆ ನೀನು ಅವರಿಗೆ ಬೇಕಾಗಿದ್ದೀಯ ನಾಳೆ ನೀನು ಅವರಿಗೆ ಬೇಡವಾಗಬಹುದು. ಇದೇ ನಿಜವಾದ ಜೀವನ.

ಪಂಚಾಂಗ : ಮಂಗಳವಾರ , 12-11-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ /
ತಿಥಿ: ಏಕಾದಶಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ಹರ್ಷಣ / ಕರಣ: ಭವ
ಸೂರ್ಯೋದಯ – ಬೆ.06.17
ಸೂರ್ಯಾಸ್ತ – 05.50
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಹಣ ನಿಮ್ಮ ಮೂಲಕ ಸುಲಭವಾಗಿ ಜಾರಿಹೋದರೂ ನಿಮ್ಮ ಅದೃಷ್ಟದಿಂದ ನಿಮಗೆ ಸುಲಭವಾಗಿ ದೊರಕುವಂತೆ ಮಾಡುತ್ತದೆ.
ವೃಷಭ: ಇತರರಿಗೆ ಮುಜುಗರ ಉಂಟು ಮಾಡ ಬೇಡಿ ಮತ್ತು ನಿಮ್ಮ ಕುಟುಂಬದ ಅವಶ್ಯಕತೆಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸಿ
ಮಿಥುನ: ಕೆಲಸ- ಕಾರ್ಯಗಳಲ್ಲಿ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ.

ಕಟಕ: ಬಂಧು- ಮಿತ್ರರಲ್ಲಿ ಸಣ್ಣಪುಟ್ಟ ವಿರಸ ಉಂಟಾಗಬಹುದು.
ಸಿಂಹ: ಮಹತ್ವಾಕಾಂಕ್ಷೆಯ ಸ್ವಭಾವ ಹೊಂದಿರುವ ವರಿಗೆ ಶುಭಕರವಾಗಿರುತ್ತದೆ.
ಕನ್ಯಾ: ವ್ಯಾಪಾರ ಹಾಗೂ ದೂರ ಪ್ರಯಾಣ ಮಾಡುವುದರಿಂದ ಲಾಭದಾಯಕವಾಗಿರುತ್ತದೆ.

ತುಲಾ: ಕಚೇರಿಯಲ್ಲಿ ಉನ್ನತ ಅಧಿ ಕಾರಿಯೊಂದಿಗೆ ವಾದ-ವಿವಾದ ನಡೆಯುವ ಸಾಧ್ಯತೆಗಳಿವೆ
ವೃಶ್ಚಿಕ: ಹೊಸ ಜನರನ್ನು ಭೇಟಿ ಮಾಡುವುದರಿಂದ ಹೆಚ್ಚು ಪ್ರಯೋಜನವಾಗಲಿದೆ.
ಧನುಸ್ಸು: ಅತಿಥಿಗಳ ಆಗಮನದಿಂದಾಗಿ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ.

ಮಕರ: ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಉತ್ತಮ ದಿನ
ಕುಂಭ: ತಂದೆಯ ಆಶೀರ್ವಾದದೊಂದಿಗೆ ಸರ್ಕಾರದಿಂದ ಗೌರವಿಸುವ ಸಾಧ್ಯತೆ ಇದೆ
ಮೀನ: ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಇರುತ್ತದೆ.

RELATED ARTICLES

Latest News