ನಿತ್ಯ ನೀತಿ :
ವಿಲಕ್ಷಣ ವ್ಯಕ್ತಿಯ ಭಾವದ ಭಾವನೆಗಳೇ ಬೇರೆ. ಅವನ ಮನಸ್ಥಿತಿ ಪ್ರಕ್ಷುಬ್ಧಗೊಂಡಿರುತ್ತದೆ. ಅಂತಹ ವ್ಯಕ್ತಿಗಳಿಂದ ಸಜ್ಜನರು ಅಂತರ ಕಾಯ್ದುಕೊಳ್ಳಬೇಕು.
ಪಂಚಾಂಗ : ಶುಕ್ರವಾರ, 15-12-2023
ಶೋಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಪೂರ್ವಾಷಾಢ / ಯೋಗ: ವೃದ್ಧಿ / ಕರಣ: ತೈತಿಲ
ಸೂರ್ಯೋದಯ : ಬೆ.06.33
ಸೂರ್ಯಾಸ್ತ : 05.56
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00
ಇಂದಿನ ರಾಶಿಭವಿಷ್ಯ :
ಮೇಷ: ನಿಮ್ಮದಲ್ಲದ ತಪ್ಪಿಗೆ ಸಣ್ಣದೊಂದು ಶಿಕ್ಷೆ ಅನುಭವಿಸಬೇಕಾದ ಸಂದರ್ಭ ಎದುರಾಗಬಹುದು.
ವೃಷಭ: ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಮನೆಗೆ ದೂರದ ಬಂಧುಗಳ ಆಗಮನ.
ಮಿಥುನ: ಉನ್ನತ ಅಧಿಕಾರಿಗಳಿಗೆ ಹೊರ ರಾಜ್ಯಗಳಿಗೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ.
ಕಟಕ: ಯಾವುದೇ ಪರಿಸ್ಥಿತಿಯಲ್ಲೂ ಅವಸರದ ತೀರ್ಮಾನ ಕೈಗೊಳ್ಳುವುದು ಸೂಕ್ತವಲ್ಲ.
ಸಿಂಹ:ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ. ಮಕ್ಕಳಿಂದ ಸಂತಸ ಸಿಗಲಿದೆ.
ಕನ್ಯಾ: ವಿದ್ಯಾರ್ಥಿಗಳಿಗೆ ಪಠ್ಯದ ವಿಚಾರಕ್ಕಿಂತ ಪಠ್ಯೇತರ ವಿಚಾರದಲ್ಲಿ ಆಸಕ್ತಿ ಮೂಡಲಿದೆ.
ತುಲಾ: ಬೇರೆಯವರು ನಿಮ್ಮೊಂದಿಗೆ ಗೆಳೆತನ ಬೆಳೆಸಲು ಬಯಸುತ್ತಾರೆ.
ವೃಶ್ಚಿಕ: ಹೊಸ ವ್ಯವಹಾರ ವನ್ನು ಪ್ರಾರಂಭಿಸಿದ್ದರೆ, ಪ್ರಚಾರ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಿ.
ಧನುಸ್ಸು: ಆತ್ಮೀಯರ ಅಗಲಿಕೆಯಿಂದ ನಿಮಗೆ ಆಘಾತ ಉಂಟಾಗುವ ಸಾಧ್ಯತೆಯಿದೆ.
ಮಕರ: ಸ್ವ ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿವೆ. ಮಾತಿಗಿಂತ ಮೌನವಾಗಿರುವುದು ಒಳಿತು.
ಕುಂಭ: ಕಾನೂನು ವ್ಯವಹಾರಗಳು ಶೀಘ್ರವಾಗಿ ಇತ್ಯರ್ಥವಾಗಲಿವೆ. ದೂರ ಪ್ರಯಾಣ ಮಾಡುವಿರಿ.
ಮೀನ: ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಮನದಲ್ಲಿರುವ ದುಗುಡ ನಿವಾರಿಸಿಕೊಳ್ಳಲು ಯತ್ನಿಸುವಿರಿ.