Sunday, September 8, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-07-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-07-2024)

ನಿತ್ಯ ನೀತಿ : ಹಣ ಗಳಿಸುವುದರಲ್ಲಿ ಜೀವನ ಕಳೆಯಬೇಡಿ. ಖರ್ಚು ಮಾಡಲೂ ಸಮಯವಿಲ್ಲದಂತಾದರೆ ಪ್ರಯೋಜನವಿರುವುದಿಲ್ಲ.

ಪಂಚಾಂಗ : ಬುಧವಾರ , 17-07-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಅನುರಾಧಾ / ಯೋಗ: ಶುಭ / ಕರಣ: ವಣಿಜ್

ಸೂರ್ಯೋದಯ – ಬೆ.06.02
ಸೂರ್ಯಾಸ್ತ – 06.50
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ
: ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ. ಮಕ್ಕಳಿಂದ ಸಂತಸ ಸಿಗಲಿದೆ.
ವೃಷಭ: ವ್ಯಾಪಾರದಲ್ಲಿ ಶತ್ರುಗಳ ಕಾಟ. ನಿವೇಶನ ಖರೀದಿಗೆ ನಿರ್ಧಾರ ಮಾಡುವಿರಿ.
ಮಿಥುನ: ಕಚೇರಿ ಕೆಲಸವನ್ನು ನಿಷ್ಠೆಯಿಂದ ಮಾಡು ವಿರಿ. ಅನ್ಯರಿಗೆ ಉಪಕಾರ ಮಾಡಲು ಮುಂದಾಗಿ.

ಕಟಕ: ಪತ್ನಿ ಸಹಕಾರದಿಂದ ಕೆಲಸ-ಕಾರ್ಯಗಳು ಸುಗಮವಾಗಿ ನೆರವೇರಲಿವೆ.
ಸಿಂಹ: ಧಾರ್ಮಿಕ ಕಾರ್ಯಗಳತ್ತ ಗಮನ ಹರಿಸುವಿರಿ. ಕೀರ್ತಿ ನಿಮ್ಮನ್ನು ಅರಸಿ ಬರಲಿದೆ.
ಕನ್ಯಾ: ಅಂದುಕೊಂಡಿದ್ದ ಕೆಲಸಗಳು ಉತ್ತಮ್ಮವಾಗಿ ನೆರವೇರುವುದರಿಂದ ನೆಮ್ಮದಿ ಸಿಗಲಿದೆ.

ತುಲಾ: ಕಟ್ಟಡ ನಿರ್ಮಾಣಗಾರರಿಗೆ ಹೆಚ್ಚಿನ ಕೆಲಸ ಇರುವುದು.
ವೃಶ್ಚಿಕ: ಉಪನ್ಯಾಸಕ ವೃತ್ತಿಯವರಿಗೆ ನಷ್ಟ.
ಧನುಸ್ಸು: ಕಷ್ಟದ ಪರಿಸ್ಥಿತಿಯಲ್ಲಿ ಜನಬಲದ ಕೊರತೆಯಾದರೂ ಸ್ನೇಹಿತರ ಸಹಕಾರ ಸಿಗಲಿದೆ.

ಮಕರ: ಹೊಸ ಜನರ ಸಂಪರ್ಕ ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
ಕುಂಭ: ಅಜೀರ್ಣ ಮತ್ತು ಉದರಕ್ಕೆ ಸಂಬಂಧಿಸಿದ ಅನಾರೋಗ್ಯ ಎದುರಾಗಲಿದೆ.
ಮೀನ: ಜವಾಬ್ದಾರಿ ಸ್ವೀಕರಿಸುವ ಮೊದಲು ಅದನ್ನು ನಿಭಾಯಿಸುವ ಬಗ್ಗೆ ಯೋಚಿಸಿ.

RELATED ARTICLES

Latest News