Friday, November 22, 2024
Homeಇದೀಗ ಬಂದ ಸುದ್ದಿಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-07-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-07-2024)

ನಿತ್ಯ ನೀತಿ : ಚಿಂತೆಯಿಲ್ಲದ ಜೀವನವನ್ನು ದೇವರು ಯಾರಿಗೂ ನೀಡುವುದಿಲ್ಲ. ಆದರೆ, ಚಿಂತೆಯನ್ನು ಮರೆಸುವಂತ ಪ್ರೀತಿ, ಸ್ನೇಹ ಮತ್ತು ಸಂಬಂಧಗಳನ್ನು ನೀಡುತ್ತಾನೆ. ದೇವರು ಕೊಟ್ಟ ಇಂಥ ಅತ್ಯಮೂಲ್ಯವಾದ ಸಂಬಂಧಗಳು ಜೀವನದಲ್ಲಿ ಶಾಶ್ವತವಾಗಿರಲಿ.

ಪಂಚಾಂಗ : ಶುಕ್ರವಾರ , 19-07-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಮೂಲಾ / ಯೋಗ: ಐಂದ್ರ / ಕರಣ: ಕೌಲವ

ಸೂರ್ಯೋದಯ – ಬೆ.06.02
ಸೂರ್ಯಾಸ್ತ – 06.50
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :
ಮೇಷ
: ರಾಜಕೀಯದವರಿಂದ ಅನುಕೂಲ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.
ವೃಷಭ: ಹಳೆಯ ಕಾನೂನು ವಿಷಯಗಳಿಗೆ ಪರಿಹಾರ ದೊರೆಯಲಿದೆ. ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ.
ಮಿಥುನ:ನಿರೀಕ್ಷಿತ ಧನಾಗಮನವಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.

ಕಟಕ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗು ವುದು. ಭಾವನೆಗಳಿಗೆ ಪೆಟ್ಟು ಬೀಳಲಿದೆ.
ಸಿಂಹ: ಅನಗತ್ಯ ಚರ್ಚೆಗಳಿಗೆ ಆಸ್ಪದ ನೀಡದಿರಿ. ಸಾಲ ಮಾಡುವ ಸ್ಥಿತಿ ತಂದುಕೊಳ್ಳಬೇಡಿ.
ಕನ್ಯಾ: ಕೆಲಸ-ಕಾರ್ಯಗಳಲ್ಲಿ ಜನಪ್ರಿಯತೆ ಗಳಿಸುವಿರಿ. ನಿರೀಕ್ಷಿತ ಸ್ಥಾನಮಾನ ಸಿಗಲಿದೆ.

ತುಲಾ: ಲೇವಾದೇವಿ ವ್ಯವ ಹಾರ ನಡೆಸುವುದು ಸರಿಯಲ್ಲ.
ವೃಶ್ಚಿಕ: ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ಧನುಸ್ಸು: ಭೂ ವ್ಯವಹಾರ ದಲ್ಲಿ ತೊಡಗಿಕೊಂಡ ನಿಮಗೆ ಹೆಚ್ಚಿನ ಲಾಭ ಸಿಗಲಿದೆ.

ಮಕರ: ಭೂಮಿ, ಆಸ್ತಿ ವಿಚಾರಗಳಲ್ಲಿ ಪ್ರಗತಿ ಕಾಣುವಿರಿ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ.
ಕುಂಭ: ಪತ್ನಿಯ ಸಹಕಾರದಿಂದ ನಿಮ್ಮ ಕೆಲಸ-ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ.
ಮೀನ: ನಿಮ್ಮ ಉಜ್ವಲ ಭವಿಷ್ಯಕ್ಕೆ ಹೊಸ ಸ್ನೇಹ ಸಹಕಾರಿಯಾಗಲಿದೆ.

RELATED ARTICLES

Latest News