ನಿತ್ಯ ನೀತಿ : ಬೇರೆಯವರ ಮಾತು ನಮಗೆ ಸರಿಬಾರದಿದ್ದರೆ ತಿರಸ್ಕರಿಸಬಹುದು. ಆದರೆ ನಮ ಮಾತು ನಮಗೇ ಹಿತವಾಗದಿದ್ದರೆ..? ಹಾಗಾಗದಿರಲಿ. ಮಾತು ನಮ ಮನಕ್ಕೊಪ್ಪುವಂತಿರಲಿ.
ಪಂಚಾಂಗ : ಶುಕ್ರವಾರ, 31-05-2024
ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಕೃಷ್ಣ ಪಕ್ಷ
ತಿಥಿ: ಅಷ್ಟಮಿ / ನಕ್ಷತ್ರ: ಶತಭಿಷಾ / ಯೋಗ: ವಿಷ್ಕಂಭ / ಕರಣ: ತೈತಿಲ
ಸೂರ್ಯೋದಯ – ಬೆ.05.52
ಸೂರ್ಯಾಸ್ತ – 06.43
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ದಿನದ ಆರಂಭ ಉತ್ತಮವಾಗಿರಲಿದೆ. ಕೈಗೊಂಡ ಯಾವುದೇ ಕಾರ್ಯದಲ್ಲಿ ಯಶಸ್ವಿಯಾಗುತ್ತೀರಿ.
ವೃಷಭ: ಸ್ನೇಹಿತರು ನೀವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುವರು.
ಮಿಥುನ: ನೆರೆಹೊರೆಯವರೊಂದಿಗಿನ ಸಂಬಂಧ ಸೌಹಾರ್ದಯುತವಾಗಿರುತ್ತದೆ.
ಕಟಕ: ಆರ್ಥಿಕ ಪ್ರಗತಿಗೆ ಸ್ನೇಹಿತರ ಸಹಾಯ ಸಿಗಲಿದೆ.
ಸಿಂಹ: ಸಹೋದ್ಯೋಗಿ ಗಳೊಂದಿಗೆ ಮಾತುಕತೆ ನಡೆಸುವಾಗ ಪದಗಳನ್ನು ಎಚ್ಚರಿಕೆಯಿಂದ ಬಳಸಿ.
ಕನ್ಯಾ: ಸಂಭಾಷಣೆ ನಡೆಸುವುದರಿಂದ ಉತ್ತಮ ರೀತಿಯ ಸಂಬಂಧಗಳು ರೂಪುಗೊಳ್ಳುತ್ತವೆ.
ತುಲಾ: ನಿಮ್ಮ ಉಜ್ವಲ ಭವಿಷ್ಯಕ್ಕೆ ಹೊಸ ಸ್ನೇಹ ಸಹಕಾರಿಯಾಗಲಿದೆ.
ವೃಶ್ಚಿಕ: ಅನಗತ್ಯ ವಾದ- ವಿವಾದಗಳಿಂದ ದೂರವಿರಿ.
ಧನುಸ್ಸು: ಶ್ರಮ ಮತ್ತು ಅದೃಷ್ಟ ಎಲ್ಲಾ ರೀತಿಯಲ್ಲೂ ಬೆಂಬಲ ನೀಡುತ್ತದೆ.
ಮಕರ: ಸ್ಥಗಿತಗೊಂಡ ಕೆಲಸ-ಕಾರ್ಯಗಳು ಶೀಘ್ರಗತಿಯಲ್ಲಿ ಮುಂದುವರಿಯಲಿವೆ.
ಕುಂಭ: ಹಿರಿಯರು ಹಾಗೂ ಸಜ್ಜನರನ್ನು ಗೌರವಿಸುವಿರಿ. ಉತ್ತಮ ಪ್ರಗತಿ ಸಾಧಿಸುವಿರಿ.
ಮೀನ: ಹೊಸ ಉದ್ಯೋಗಗಳು ಮತ್ತು ಉದ್ಯೋಗ ಬದಲಾವಣೆಗೆ ಇದು ಉತ್ತಮ ದಿನವಾಗಿದೆ.