ನವದೆಹಲಿ,ಜು.6- ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ .ಚಂದ್ರಚೂಡ್ ಅವರು ವಾಸ್ತವ್ಯ ಇರುವ ನಿವಾಸವನ್ನು ತಕ್ಷಣವೇ ಖಾಲಿ ಮಾಡಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಇದು ತೀರಾ ಅಪರೂಪದಲ್ಲೇ ಅಪರೂಪದ ಪ್ರಕರಣವಾಗಿದ್ದು, ನ್ಯಾಯಮೂರ್ತಿಗಳ ಅಧಿಕೃತ ನಿವಾಸವನ್ನು ತುರ್ತಾಗಿ ಖಾಲಿ ಮಾಡಿ ನ್ಯಾಯಾಲಯದ ವಸತಿ ನಿಲಯಕ್ಕೆ ಹಿಂತಿರುಗಿಸುವಂತೆ ಪತ್ರದಲ್ಲಿ ಕೋರಿದೆ.
ಜುಲೈ 1ರಂದು ಸುಪ್ರೀಂಕೋರ್ಟ್‌ನಿಂದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಬಂದಿರುವ ಪತ್ರದಲ್ಲಿ, ಭಾರತದ ಹಾಲಿ ಸಿಜೆಐ ಅವರ ನಿಯೋಜಿತ ನಿವಾಸವಾದ ಲುಟಿಯೆನ್‌್ಸ ದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ಬಂಗಲೆ ಸಂಖ್ಯೆ 5 ಅನ್ನು ತಕ್ಷಣವೇ ಖಾಲಿ ಮಾಡಬೇಕೆಂದು ಒತ್ತಾಯಿಸಲಾಗಿದೆ.
ನಿವೃತ್ತ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಂದ ಕೃಷ್ಣ ಮೆನನ್ ಮಾರ್ಗದ 5ನೇ ಬಂಗಲೆಯನ್ನು ಯಾವುದೇ ವಿಳಂಬವಿಲ್ಲದೆ ಸ್ವಾಧೀನಪಡಿಸಿಕೊಳ್ಳಲು ನಾನು ನಿಮನ್ನು ವಿನಂತಿಸುತ್ತೇನೆ. ಏಕೆಂದರೆ, ಉಳಿದುಕೊಳ್ಳಲು ನೀಡಲಾದ ಅನುಮತಿಯು 2025ರ ಮೇ 31ಕ್ಕೆ ಮುಕ್ತಾಯಗೊಂಡಿದೆ. ಜೊತೆಗೆ 2022ರ ನಿಯಮದಂತೆ ಒದಗಿಸಲಾದ ಆರು ತಿಂಗಳ ಅವಧಿಯು 2025ರ ಮೇ 10ರಂದು ಮುಕ್ತಾಯಗೊಂಡಿದೆ.
ನವೆಂಬರ್ 2022ರಿಂದ ನವೆಂಬರ್ 2024ರವರೆಗೆ 50ನೇ ಸಿಜೆಐ ಆಗಿ ಸೇವೆ ಸಲ್ಲಿಸಿದ್ದ ನ್ಯಾಯಮೂರ್ತಿ ಚಂದ್ರಚೂಡ್, ಅಧಿಕಾರ ತ್ಯಜಿಸಿದ ಸುಮಾರು ಎಂಟು ತಿಂಗಳ ನಂತರ ಪ್ರಸ್ತುತ ಟೈಪ್ ಐಐಐ ಬಂಗಲೆಯನ್ನು ಹೊಂದಿದ್ದಾರೆ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಹಾಲಿ ಭೂಷಣ್ ಆರ್ ಗವಾಯಿ – ಆವರಣಕ್ಕೆ ಸ್ಥಳಾಂತರಗೊಳ್ಳದಿರಲು ನಿರ್ಧರಿಸಿ ಹಿಂದೆ ಅವರಿಗೆ ಹಂಚಿಕೆ ಮಾಡಲಾದ ಬಂಗಲೆಗಳಲ್ಲಿ ವಾಸಿಸುವುದನ್ನು ಮುಂದುವರಿಸಲು ಆಯ್ಕೆ ಮಾಡಿಕೊಂಡಿದ್ದರು.
ಈ ಕುರಿತು ಚಂದ್ರಚೂಡ್ ಅವರನ್ನು ಸಂಪರ್ಕಿಸಿದಾಗ, ಸುಪ್ರೀಂಕೋರ್ಟ್ ಆಡಳಿತಕ್ಕೆ ಸಂಪೂರ್ಣವಾಗಿ ತಿಳಿಸಲಾದ ಸಂದರ್ಭಗಳು ವಿಳಂಬಕ್ಕೆ ಕಾರಣ ಎಂದು ಹೇಳಿದ್ದಾರೆ. ಸರ್ಕಾರವು ಈಗಾಗಲೇ ಸೀಮಿತ ಅವಧಿಗೆ ಬಾಡಿಗೆಗೆ ಪರ್ಯಾಯ ವಸತಿಯನ್ನು ನೀಡಿದೆ ಮತ್ತು ವರ್ಷಗಳ ಕಾಲ ಬಳಕೆಯಲ್ಲಿಲ್ಲದ ನಂತರ ಅದನ್ನು ವಾಸಯೋಗ್ಯವಾಗಿಸಲು ಮಾತ್ರ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಜುಲೈ 1ರ ಸಂವಹನದ ಪ್ರಕಾರ, ಡಿಸೆಂಬರ್ 18, 2024ರಂದು – ನಿವೃತ್ತರಾದ ಕೇವಲ ಒಂದು ತಿಂಗಳ ನಂತರ, ನ್ಯಾಯಮೂರ್ತಿ ಚಂದ್ರಚೂಡ್ ಅವರು ಆಗಿನ ಸಿಜೆಐ ಖನ್ನಾ ಅವರಿಗೆ ಪತ್ರ ಬರೆದು, ಏಪ್ರಿಲ್ 30, 2025ರವರೆಗೆ 5 ಕೃಷ್ಣ ಮೆನನ್ ಮಾರ್ಗದಲ್ಲಿ ವಾಸಿಸಲು ಅನುಮತಿ ಕೋರಿ ಪತ್ರ ಬರೆದಿದ್ದಾರೆ.
ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ ಪತ್ರದಲ್ಲಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ತಿದ್ದುಪಡಿ) ನಿಯಮಗಳು, 2022ರ ನಿಯಮ 3(ಐಐಐ) ಪ್ರಕಾರ ತುಘಲಕ್ ರಸ್ತೆಯಲ್ಲಿರುವ ಬಂಗಲೆ ಸಂಖ್ಯೆ 14 ಅನ್ನು ತಮಗೆ ಹಂಚಿಕೆ ಮಾಡಲಾಗಿದ್ದರೂ, ಮಾಲಿನ್ಯ-ಸಂಬಂಧಿತ ನಿರ್ಮಾಣ ನಿರ್ಬಂಧಗಳಿಂದಾಗಿ ಹೊಸ ನಿವಾಸದಲ್ಲಿ ನವೀಕರಣ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಹೇಳಿದ್ದಾರೆ.
5ರ ಕೃಷ್ಣಮೆನನ್ ಮಾರ್ಗದಲ್ಲಿರುವ ಅಸ್ತಿತ್ವದಲ್ಲಿರುವ ವಸತಿ ಸೌಕರ್ಯವನ್ನು ಏಪ್ರಿಲ್ 30, 2025ರವರೆಗೆ ಉಳಿಸಿಕೊಳ್ಳಲು ನನಗೆ ಅನುಮತಿ ನೀಡಿದರೆ ಅದು ಹೆಚ್ಚು ಅನುಕೂಲಕರವಾಗಿರುತ್ತದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಕೋರಿದ್ದಾರೆ. ತುಘಲಕ್ ರಸ್ತೆಯ ಬಂಗಲೆಯನ್ನು ತ್ಯಜಿಸಲು ಮುಂದಾಗಿ ಅದನ್ನು ಬೇರೆ ನ್ಯಾಯಾಧೀಶರಿಗೆ ಹಂಚಿಕೆ ಮಾಡಲು ಅವಕಾಶ ನೀಡಿದ್ದಾರೆ.
2022ರ ನಿಯಮಗಳ ಪ್ರಕಾರ ನಿವೃತ್ತ ಮುಖ್ಯ ನ್ಯಾಯಾಧೀಶರು ಕೃಷ್ಣ ಮೆನನ್ ಮಾರ್ಗದ ಬಂಗಲೆಯ (ಟೈಪ್ ಐಐಐ ) ಕೆಳಗೆ ಇರುವ ಟೈಪ್ ಐಐ ವಸತಿಯನ್ನು ನಿವೃತ್ತಿಯ ನಂತರ ಗರಿಷ್ಠ ಆರು ತಿಂಗಳವರೆಗೆ ಉಳಿಸಿಕೊಳ್ಳಲು ಅನುಮತಿಸುತ್ತದೆ.ಎಂದಿದ್ದಾರೆ.
ಆಗಿನ ಸಿಜೆಐ ಅವರ ಅನುಮೋದನೆಯ ನಂತರ, ನ್ಯಾಯಮೂರ್ತಿ ಚಂದ್ರಚೂಡ್ ಅವರು ಡಿಸೆಂಬರ್ 11, 2024ರಿಂದ ಏಪ್ರಿಲ್ 30, 2025ರವರೆಗೆ ತಿಂಗಳಿಗೆ 5,430 ಪರವಾನಗಿ ಶುಲ್ಕವನ್ನು ಪಾವತಿಸುವ ಮೇಲೆ ಕೃಷ್ಣ ಮೆನನ್ ಮಾರ್ಗದಲ್ಲಿರುವ ಟೈಪ್ ಐಐಐ ಬಂಗಲೆಯನ್ನು ಉಳಿಸಿಕೊಳ್ಳಲು ಅನುಮೋದನೆ ನೀಡಿತು. ಇದನ್ನು ಫೆಬ್ರವರಿ 13, 2025ರಂದು ಬರೆದ ಪತ್ರದ ಮೂಲಕ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಜುಲೈ 1 ರ ಪತ್ರದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರು ಮೇ 31, 2025 ರವರೆಗೆ ಅದೇ ಆವರಣದಲ್ಲಿ ವಾಸಿಸುವಂತೆ ಸಿಜೆಐಗೆ ಮೌಖಿಕ ವಿನಂತಿಯನ್ನು ಮಾಡಿದರು, ಆದರೆ ಅದನ್ನು ಒಂದು ಎಚ್ಚರಿಕೆಯೊಂದಿಗೆ ನೀಡಲಾಯಿತು – ಮಧ್ಯಂತರದಲ್ಲಿ ಬಡ್ತಿ ಪಡೆದ ಇತರ ನ್ಯಾಯಾಧೀಶರು ಅತಿಥಿ ಗೃಹಗಳಲ್ಲಿ ವಾಸಿಸುತ್ತಿರುವುದರಿಂದ ಅಥವಾ ಬಂಗಲೆ ಹಂಚಿಕೆಗಾಗಿ ಕಾಯುತ್ತಿರುವುದರಿಂದ ಹೆಚ್ಚಿನ ವಿಸ್ತರಣೆಯನ್ನು ಅನುಮತಿಸಲಾಗುವುದಿಲ್ಲ. ಜುಲೈ 1 ರ ಪತ್ರವು ಅನುಮತಿ ಸಮಯಾವಧಿ ಮತ್ತು ಶಾಸನಬದ್ಧ ಚೌಕಟ್ಟಿನ ಉಲ್ಲಂಘನೆಯನ್ನುಹೇಳುತ್ತದೆ.ನಿಯಮ 3ಃ ನಿವೃತ್ತ ಮುಖ್ಯ ನ್ಯಾಯಾಧೀಶರಿಗೆ ಆರು ತಿಂಗಳವರೆಗೆ ಮಾತ್ರ ಟೈಪ್ ಐಐಐ ನಿವಾಸಕ್ಕೆ ಅರ್ಹತೆ ನೀಡುತ್ತದೆ ಎಂದು ಅದು ಗಮನಿಸುತ್ತದೆ. ಈ ಅವಧಿಯು ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ಮೇ 10, 2025ರಂದು ಕೊನೆಗೊಂಡಿದೆ.
ಕೃಷ್ಣ ಮೆನನ್ ಮಾರ್ಗ್ ನಿವಾಸವನ್ನು ವಿಶೇಷ ಸಂದರ್ಭಗಳಿಂದಾಗಿ ಅನುಮತಿಸಲಾಗಿದ್ದರೂ, ಮೇ ಅಂತ್ಯದವರೆಗೆ ಒಪ್ಪಿಗೆಯ ವಿಸ್ತರಣೆಯ ನಂತರ ಅದನ್ನು ಖಾಲಿ ಮಾಡಲಾಗುವುದು ಎಂಬ ತಿಳುವಳಿಕೆ ಇತ್ತು ಎಂದು ಸಂವಹನವು ಸ್ಪಷ್ಟಪಡಿಸಿದೆ. ಆ ಗಡುವು ಮುಗಿದ ನಂತರ, ಈಗ ಯಾವುದೇ ವಿಳಂಬವಿಲ್ಲದೆ ಸ್ವಾಧೀನಪಡಿಸಿಕೊಳ್ಳಲು ಮತ್ತು ಸುಪ್ರೀಂ ಕೋರ್ಟ್‌ಗೆ ದೃಢೀಕರಿಸಲು ಸಚಿವಾಲಯವನ್ನು ಒತ್ತಾಯಿಸಿದೆ.
ಈ ಪತ್ರವು ಸುಪ್ರೀಂಕೋರ್ಟ್ ತನ್ನ ಅತ್ಯುನ್ನತ ಅಧಿಕೃತ ನಿವಾಸವನ್ನು ಮಾಜಿ ನಿವಾಸಿಯಿಂದ, ಅದರಲ್ಲೂ ಮಾಜಿ ಸಿಜೆಐನಿಂದ ಮರಳಿ ಪಡೆಯಲು ಔಪಚಾರಿಕ ಹಸ್ತಕ್ಷೇಪ ಮಾಡಿದ ಅಪರೂಪದ ನಿದರ್ಶನವನ್ನು ಗುರುತಿಸುತ್ತದೆ. ನಿವೃತ್ತಿಯ ನಂತರ ಅನೌಪಚಾರಿಕ ವಿಸ್ತರಣೆಗಳು ಮತ್ತು ಗ್ರೇಸ್ ಅವಧಿಗಳು ನ್ಯಾಯಾಂಗ ಅಥವಾ ಅಧಿಕಾರಶಾಹಿಯಲ್ಲಿ ಅಸಾಮಾನ್ಯವಲ್ಲದಿದ್ದರೂ, ತುರ್ತು ಕ್ರಮವನ್ನು ಕೋರಿ ಪತ್ರವು ಈ ಮಟ್ಟದಲ್ಲಿಕೇಳಿಬರುವುದಿಲ್ಲ.
- ಶಿವಮೊಗ್ಗದಲ್ಲಿ ಗಣೇಶ ಮೂರ್ತಿಗೆ ಕಾಲಿನಿಂದ ಒದ್ದು, ನಾಗನ ವಿಗ್ರಹ ಚರಂಡಿಗೆಸೆದು ವಿಕೃತಿ ಮೆರೆದ ಕಿಡಿಗೇಡಿಗಳು : ಭಾರಿ ಆಕ್ರೋಶ
- ನಿವೃತ್ತ CJI ಚಂದ್ರಚೂಡ್ ವಾಸವಿರುವ ನಿವಾಸವನ್ನು ತಕ್ಷಣವೇ ನಿವಾಸ ಖಾಲಿ ಮಾಡಿಸುವಂತೆ ಕೇಂದ್ರಕ್ಕೆ ಸುಪ್ರೀಂ ಪತ್ರ
- ಇಸ್ರೇಲ್-ಇರಾನ್ ಯುದ್ಧದ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿ ಖಮೇನಿ
- ದಲೈಲಾಮಾ ಅವರ 90ನೇ ಹುಟ್ಟುಹಬ್ಬ : ಶುಭಾಶಯ ಕೋರಿದ ಪ್ರಧಾನಿ ಮೋದಿ
- ತುಮಕೂರು : ಖಾಸಗಿ ಹೋಟೆಲ್ನಲ್ಲಿ ದಾವಣಗೆರೆಯ ಪಿಎಸ್ಐ ಆತ್ಮಹತ್ಯೆ