ನವದೆಹಲಿ : 2006 ರಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಚೇರಿಯ ಮೇಲೆ ನಡೆದ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಲಷ್ಕರ್-ಎ-ತೊಯ್ದಾ ಭಯೋತ್ಪಾದಕ ರಜವುಲ್ಲಾ ನಿಜಾಮಿ ಅಲಿಯಾಸ್ ಅಬು ಸೈಯುಲ್ಲಾನನ್ನು ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಭಾನುವಾರ ಹತ್ಯೆ ಮಾಡಿದ್ದಾರೆ. ಲಷ್ಕರ್ ಭಯೋತ್ಪಾದಕ ಅಬು ಸೈಫುಲ್ಲಾ ನೇಪಾಳದ ಮೂಲಕ ಭಯೋತ್ಪಾದಕ ಜಾಲವನ್ನು ನಿರ್ವಹಿಸುತ್ತಿದ್ದ.
ಲಷ್ಕರ್ ಉಗ್ರ ರಜಾವುಲ್ಲಾ ನಿಝಾಮನಿ ಭಾರತದಲ್ಲಿ ಮೂರು ಉಗ್ರ ದಾಳಿ ನಡೆಸಿದ್ದ. ಇದರ ಜೊತೆಗೆ ಹಲವು ದಾಳಿಗೆ ನೆರವು ನೀಡಿದ್ದ. 2006ರಲ್ಲಿ ನಾಗ್ಪುರದ ಆರ್‌ಎಸ್ಎಸ್ ಮುಖ್ಯ ಕಚೇರಿ ಮೇಲೆ ನಡೆಸಿದ ಉಗ್ರ ದಾಳಿ, 2005ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮೇಲೆ ನಡೆಸಿದ ಉಗ್ರ ದಾಳಿ ಹಾಗೂ 2001ರಲ್ಲಿ ರಾಂಪುರದ ಸಿಆರ್‌ಪಿಎಫ್ ಮೇಲೆ ನಡೆಸಿದ ಉಗ್ರ ದಾಳಿ ಮಾಸ್ಟರ್ ಮೈಂಡ್ ಈತ. ಭಾರತಕ್ಕೆ ಬೇಕಾಗಿದ್ದ ಈ ಉಗ್ರನನ್ನು ಸಿಂಧ್ ಪ್ರಾಂತ್ಯದಲ್ಲಿ ಅಪರಿಚಿತರು ಹತ್ಯೆ ಮಾಡಿದ್ದಾರೆ.
ವಿನೋದ್ ಕುಮಾರ್, ಮೊಹಮ್ಮದ್ ಸಲೀಂ, ಖಾಲಿದ್, ವನಿಯಾಲ್, ವಾಜಿದ್ ಮತ್ತು ಸಲೀಂ ಭಾಯ್ ಸೇರಿದಂತೆ ಬಹು ಅಲಿಯಾಸ್‌ಗಳಿಂದ ಕರೆಯಲ್ಪಡುವ ಸೈಫುಲ್ಲಾ, ಎಲ್‌ಇಟಿಯ ಕಾರ್ಯಾಚರಣೆಗಳು, ನೇಮಕಾತಿ, ನಿಧಿಸಂಗ್ರಹಣೆ ಮತ್ತು ಗಡಿಯಾಚೆಗಿನ ಒಳನುಸುಳುವಿಕೆಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ.
ಲಷ್ಕರ್-ಎ-ತೊಯ್ಬಾದ ಉನ್ನತ ಕಮಾಂಡರ್ ಅಬು ಸೈಫುಲ್ಲಾ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿದ್ದ. ಅಬು ಸೈಫುಲ್ಲಾ ಅಲಿಯಾಸ್ ಮೊಹಮ್ಮದ್ ಸಲೀಂ ನೇಪಾಳದಲ್ಲಿ ತನ್ನ ಭಯೋತ್ಪಾದಕ ಜಾಲವನ್ನು ಹರಡಿದ್ದ ಮತ್ತು ಅಲ್ಲಿಂದ ಭಾರತದ ವಿರುದ್ಧ ಭಯೋತ್ಪಾದಕ ಪಿತೂರಿಗಳನ್ನು ನಡೆಸುತ್ತಿದ್ದ. ಭಾರತದ ಭದ್ರತಾ ಸಂಸ್ಥೆಗಳು ಅಬು ಸೈಫುಲ್ಲಾನನ್ನು ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಿದ್ದವು. ಇದರಿಂದಾಗಿ ಆತ ನೇಪಾಳ ಬಿಟ್ಟು ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ. ಅವರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾಗ ಅಪರಿಚಿತ ದಾಳಿಕೋರರಿಂದ ಹತ್ಯೆಗೀಡಾಗಿದ್ದಾನೆ ಎಂದು ವರದಿಯಾಗಿದೆ.