Sunday, November 24, 2024
Homeರಾಷ್ಟ್ರೀಯ | Nationalಫಾರೂಖ್ ಅಬ್ದುಲ್‍ಗೆ ಮರ್ಮಾಘಾತ : ಬಿಜೆಪಿ ಸೇರಿದ ನ್ಯಾಷನಲ್ ಕಾನರೆನ್ಸ್ ನಾಯಕರು

ಫಾರೂಖ್ ಅಬ್ದುಲ್‍ಗೆ ಮರ್ಮಾಘಾತ : ಬಿಜೆಪಿ ಸೇರಿದ ನ್ಯಾಷನಲ್ ಕಾನರೆನ್ಸ್ ನಾಯಕರು

ಜಮ್ಮು,ಜ.29- ನ್ಯಾಷನಲ್ ಕಾನರೆನ್ಸ್‍ನ ಹಲವಾರು ನಾಯಕರು ಬಿಜೆಪಿಗೆ ಸೇರುವ ಮೂಲಕ ಫಾರೂಖ್ ಅಬ್ದುಲ್‍ಗೆ ಮರ್ಮಾಘಾತ ಉಂಟು ಮಾಡಿದ್ದಾರೆ. ಜಮ್ಮು ಪ್ರದೇಶದಲ್ಲಿ ನಿನ್ನೆ ಕತುವಾ ಜಿಲ್ಲಾಧ್ಯಕ್ಷ ಸೇರಿದಂತೆ ಹಲವಾರು ನ್ಯಾಷನಲ್ ಕಾನರೆನ್ಸ್‍ನ ಪದಾಕಾರಿಗಳು, ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾದರು. ಜಮ್ಮು ಮತ್ತು ಕಾಶ್ಮೀರ ಘಟಕದ ಬಿಜೆಪಿ ಮುಖ್ಯಸ್ಥ ರವೀಂದ್ರ ರೈನಾ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ನ್ಯಾಷನಲ್ ಕಾನರೆನ್ಸ್ ಮುಖಂಡರನ್ನು ಭವ್ಯವಾಗಿ ಸ್ವಾಗತಿಸಲಾಯಿತು.

ದೇಶದ ಜನರ ಮತ್ತು ಧರ್ಮದ ಕಲ್ಯಾಣಕ್ಕಾಗಿ ಬಿಜೆಪಿ ತನ್ನ ಬದ್ದತೆಯನ್ನು ಎತ್ತಿ ಹಿಡಿಯುತ್ತದೆ ಎಂದು ರೈನಾ ಈ ಸಂದರ್ಭದಲ್ಲಿ ಹೇಳಿದರು. ಆರೋಗ್ಯ ರಕ್ಷಣೆ, ಶಿಕ್ಷಣ, ಮೂಲಸೌಕರ್ಯ ನಿರ್ಮಾಣ ಮತ್ತು ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಬಿಜೆಪಿಗೆ ಕೊಡುಗೆ ಮತ್ತು ಸಾಧನೆಗಳು ಐತಿಹಾಸಿಕವಾಗಿವೆ ಎಂದರು. ಪ್ರಧಾನಿ ನರೇಂದ್ರಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ಅವರು, ರಾಷ್ಟ್ರದ ಏಕತೆ ಮತ್ತು ಪ್ರಗತಿಗೆ ಅವರ ಅರ್ಹನಿಶಿ ಪ್ರಯತ್ನ ಕಾರಣವಾಗಿದೆ ಎಂದು ಹೇಳಿದರು.

ಜ್ಞಾನವ್ಯಾಪಿ ಸಮೀಕ್ಷೆ ವಿರೋಧಿಸುವವರು ತುಕ್ಡೆ ಗ್ಯಾಂಗ್‍ನ ಭಾಗವಾಗಿದ್ದಾರೆ : ಜಮಾಲ್

ಪ್ರತಿಯೊಬ್ಬರ ಹೊಸ ಪ್ರವೇಶವನ್ನು ಪ್ರೀತಿ ಮತ್ತು ಸೌಹಾರ್ದತೆಯಿಂದ ಸ್ವಾಗತಿಸುವುದಾಗಿ ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಸಿಂಗ್ ರಾಣಾ ತಿಳಿಸಿದರು. ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನಕ್ಕಾಗಿ ಪ್ರಧಾನಿಯವರ ನಾಯಕತ್ವವನ್ನು ಬೆಂಬಲಿಸುತ್ತಾ ನಾವು ಬಿಜೆಪಿ ಸೇರಿರುವುದಾಗಿ ನ್ಯಾಷನಲ್ ಕಾನರೆನ್ಸ್‍ನ ಕತುವಾ ಜಿಲ್ಲಾ ಘಟಕದ ನೇತೃತ್ವ ವಹಿಸಿದ್ದ ಸಂಜೀವ್ ಕುಜರಿಯ ಮಾತನಾಡಿ, ಮೋದಿ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಪ್ರಶನಿಸಿದರು.

ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಕವೀಂದರ್ ಗುಪ್ತ ಮಾತನಾಡಿ, ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಸಲು ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಜಮ್ಮುಕಾಶ್ಮೀರ ಎದುರಿಸುತ್ತಿರುವ ಸವಾಲುಗಳನ್ನು ಹಿಮ್ಮೆಟ್ಟಿಸಲು ಬಿಜೆಪಿ ಬದ್ದವಾಗಿದೆ ಎಂದು ಗುಪ್ತ ಹೇಳಿದರು. ಮಹಿಳೆಯರು ಮತ್ತು ಯುವಕರಿಗೆ ಪ್ರಾತಿನಿಧ್ಯ ನೀಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದರು.

RELATED ARTICLES

Latest News