Tuesday, January 14, 2025
Homeಬೆಂಗಳೂರುಬೆಂಗಳೂರಲ್ಲಿ ಮತ್ತೆ ಟೋಯಿಂಗ್ ಜಾರಿಗೆ ಚಿಂತನೆ

ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ಜಾರಿಗೆ ಚಿಂತನೆ

Towing to be reintroduced in Bengaluru

ಬೆಂಗಳೂರು,ಡಿ.14– ನಗರದಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಗೆ ತರಲು ಚಿಂತಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಹೇಳಿದರು. ಕೆಂಗೇರಿ ಉಪನಗರದ ಸುರಾನ ಕಾಲೇಜಿನಲ್ಲಿ ಇಂದು ಹಮಿಕೊಂಡಿದ್ದ ಸಂಚಾರ ಸಂಪರ್ಕ ದಿವಸ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಆಲಿಸಿ ಅವರು ಮಾತನಾಡಿದರು.

ನಗರದ ಹಲವು ಕಡೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹಾಗಾಗಿ ಸುಗಮ ಸಂಚಾರಕ್ಕಾಗಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಗೆ ತರಲು ಚರ್ಚಿಸಲಾಗುತ್ತಿದೆ ಎಂದರು.

ಈ ಹಿಂದೆ ಇದ್ದ ಟೋಯಿಂಗ್ ಸಮಸ್ಯೆಯನ್ನು ಸರಿಪಡಿಸಿ ಮತ್ತೆ ಜಾರಿಗೆ ತಂದರೆ ಸುಗಮ ಸಂಚಾರಕ್ಕೆ ಅನುವಾಗುತ್ತದೆ. ಅಲ್ಲದೆ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದನ್ನು ತಡೆಗಟ್ಟಬಹುದಾಗಿದೆ ಎಂದು ಅವರು ಹೇಳಿದರು.

ವೀಕೆಂಡ್ನಲ್ಲಿ ಗೂಡ್‌್ಸ ವಾಹನಗಳು ಸಂಚರಿಸದಂತೆ ನಿರ್ಬಂಧ ವಿಧಿಸಿರುವ ಬಗ್ಗೆ ಸಾರ್ವಜನಿಕರೊಬ್ಬರು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯುಕ್ತರು, ಹಗಲು ವೇಳೆ ಲೋಡಿಂಗ್ ಮತ್ತು ಅನ್ಲೋಡಿಂಗ್ ಮಾಡುವುದು ಬೇಡ ರಾತ್ರಿ ವೇಳೆ ಅನ್ಲೋಡ್ ಮತ್ತು ಲೋಡ್ ಮಾಡಿಕೊಂಡರೆ ಬೆಳಗ್ಗೆ ವಾಹನಗಳ ದಟ್ಟಣೆ ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ಆಯುಕ್ತರು ಸೂಚಿಸಿದರು.

ರಾತ್ರಿ ವೇಳೆ ಅನುಲೋಡ್ ಮಾಡುವಾಗ ಕೆಲವು ದುಷ್ಟ ಶಕ್ತಿಗಳು ಬಂದು ತೊಂದರೆ ಕೊಡುತ್ತಾರೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬ್ಯಾಟರಾಯನಪುರ ಟಿಂಬರ್ ಯಾರ್ಡ್ ಸ್ಥಳಕ್ಕೆ ಬಂದು ಅಡ್ಡಿಪಡಿಸುತ್ತಾರೆ. ಹಾಗಾಗಿ ಈ ಭಾಗದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕೆಂದು ವ್ಯಕ್ತಿ ಯೊಬ್ಬರು ಮಾಡಿದ ಮನವಿಗೆ ಆಯುಕ್ತರು ಸ್ಪಂದಿಸಿ, ಹಾಗೇನಾದರೂ ತೊಂದರೆ ಕೊಟ್ಟರೆ ತಕ್ಷಣ 112ಗೆ ತಿಳಿಸಿ. ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನಾಗರಬಾವಿಯ ವ್ಯಕ್ತಿಯೊಬ್ಬರು ಸಂಚಾರ ದಟ್ಟಣೆ ಹಾಗೂ ರಸ್ತೆಗಳಲ್ಲಿ ಗುಂಡಿಗಳು ಇರುವ ಬಗ್ಗೆ ಗಮನಸೆಳೆದಾಗ ಸಂಚಾರ ದಟ್ಟಣೆಯನ್ನು ನಿಯಂತ್ರಿಸುತ್ತೇವೆ. ಗುಂಡಿಗಳಿದ್ದರೆ ಬಿಬಿಎಂಪಿ ಆ್ಯಪ್ನಲ್ಲಿ ದೂರು ನೀಡಿದರೆ ಅವರು ಗಮನಿಸಿ ಸರಿಪಡಿಸಲು ಅನುಕೂಲವಾಗುತ್ತದೆ. ಮೇಲಾಧಿಕಾರಿಗಳು ಸಹ ಅದನ್ನು ಗಮನಿ ಕ್ರಮ ಕೈಗೊಳ್ಳುತ್ತಾರೆ. ಸಾರ್ವಜನಿಕರು ಸಹ ದೂರು ನೀಡಲು ಅವಕಾಶವಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ನಿಮ ದೂರು ದುಮಾನಗಳನ್ನು ನಮೂದಿಸಬಹುದಾಗಿದೆ ಎಂದರು.

RELATED ARTICLES

Latest News