Friday, April 4, 2025
Homeರಾಜ್ಯವ್ಯಾಪಾರಿಗಳೇ ಹುಷಾರ್, ವಂಚನೆಗೆ ಇಳಿದಿದೆ 'ಎಮರ್ಜೆನ್ಸಿ' ಗ್ಯಾಂಗ್

ವ್ಯಾಪಾರಿಗಳೇ ಹುಷಾರ್, ವಂಚನೆಗೆ ಇಳಿದಿದೆ ‘ಎಮರ್ಜೆನ್ಸಿ’ ಗ್ಯಾಂಗ್

ಬೆಂಗಳೂರು,ಆ.10- ವ್ಯಾಪಾರಿಗಳನ್ನೇ ಟಾರ್ಗೆಟ್‌ ಮಾಡಿಕೊಂಡು ಮೆಡಿಕಲ್‌ ಎಮರ್ಜೆನ್ಸಿಯೊಂದು ನಂಬಿಸಿ ಅವರಿಂದ ಹಣ ಪಡೆದು ಮೊಬೈಲ್‌ಗೆ ಗೂಗಲ್‌ ಪೇ ಮಾಡುವುದಾಗಿ ಹೇಲಿ ಹಣ ಹಿಂದಿರುಗಿಸದೇ ವಂಚಿಸುತ್ತಿರುವ ಜಾಲವಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ.

ತಂತ್ರಜ್ಞಾನ ಮುಂದುವರೆದಂತೆ ಸೈಬರ್‌ ಖದೀಮರು ಹೆಚ್ಚಾಗುತ್ತಿದ್ದಾರೆ. ಡಿಜಿಟಲ್‌ ಇಂಡಿಯಾ ಎಂದು ಜನತೆ ತಮ ಬಳಿ ಹಣವಿಟ್ಟುಕೊಳ್ಳದೆ, ಫೋನ್‌ಪೇ ಎಂದು ಮೊಬೈಲ್‌ಗಳನ್ನು ಬಳಸುತ್ತಿರುವುದರಿಂದ ಇದನ್ನೇ ಬಂಡವಾಳವಾಗಿಸಿಕೊಳ್ಳುತ್ತಿರುವ ಖದೀಮರ ಮೋಸದ ಆಟಕ್ಕೆ ವ್ಯಾಪಾರಿಗಳು ದಾಳವಾಗುತ್ತಿರುವುದು ವಿಷಾದಕರ.

ತಮಗೆ ಮೆಡಿಕಲ್‌ ಎಮರ್ಜೆನ್ಸಿ ಇದೆ, ಕೂಡಲೇ ಹಣ ಬೇಕಾಗಿದೆ, ತಾವು ಹಣ ಕೊಟ್ಟರೆ ನಿಮ ಅಕೌಂಟ್‌ಗೆ ಗೂಗಲ್‌ ಪೇ ಅಥವಾ ಫೋನ್‌ ಪೇ ಮಾಡುವುದಾಗಿ ನಂಬಿಸಿ ಅಂದ್ರಹಳ್ಳಿಯ ಸೈಬರ್‌ ಸೆಂಟರ್‌ ಮಾಲೀಕನನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.

ಸೈಬರ್‌ ಸೆಂಟರ್‌ಗೆ ಹೋದ ಖದೀಮ ಮೆಡಿಕಲ್‌ ಎಮರ್ಜೆನ್ಸಿ ಇದೆ, ನೀವು 10 ಸಾವಿರ ಹಣ ಕೊಟ್ಟರೆ ನಿಮ ಅಕೌಂಟ್‌ಗೆ ಹಾಕುವುದಾಗಿ ಹೇಳಿದ್ದಾನೆ. ಅಷ್ಟು ಹಣವಿಲ್ಲದಿದ್ದರೆ 5 ಸಾವಿರವಾದರೂ ಕೊಡಿ ಎಂದು ಮಾಲೀಕನಿಗೆ ಮರಳು ಮಾಡಿದ್ದಾನೆ.

ಸೈಬರ್‌ ಮಾಲೀಕ ಹಣಕೊಟ್ಟ ನಂತರ ಅಂಗಡಿಯಲ್ಲಿದ್ದ ಸ್ಕ್ಯಾನರ್‌ ಅನ್ನು ಸ್ಕ್ಯಾನ್‌ ಮಾಡಿದ ರೀತಿ ನಟಿಸಿ ನಂತರ ನೆಟ್‌ ಆಫ್‌ ಮಾಡಿಕೊಂಡು, ಅದು ವರ್ಕ್‌ ಆಗ್ತಿಲ್ಲ, ನಿಮ ಮೊಬೈಲ್‌ ನಂಬರ್‌ಗೆ ಹಾಕುತ್ತೇನೆಂದು ಹೇಳಿ, ಮೊದಲೇ ಸ್ಕ್ರೀನ್‌ ಶಾಟ್‌ ಮಾಡಿಕೊಂಡಿದ್ದ ಫೇಕ್‌ ಆ್ಯಪ್‌ ಮುಖಾಂತರ ಪೇಮೆಂಟ್‌ ಸಕ್ಸಸ್‌‍ ಎಂಬ ಮೆಸೇಜ್‌ ತೋರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಸೈಬರ್‌ ಸೆಂಟರ್‌ ಮಾಲೀಕ ತನ್ನ ಮೊಬೈಲ್‌ ಪರಿಶೀಲಿಸಿಕೊಂಡಾಗ ಖಾತೆಗೆ ಬಾರದಿರುವುದು ಗೊತ್ತಾಗಿದೆ. ತಕ್ಷಣ ಸಿಸಿಟಿವಿಯನ್ನು ಪರಿಶೀಲಿಸಿದಾಗ ವಂಚಕನ ಮೋಸದಾಟ ಸೆರೆಯಾಗಿರುವುದು ಗಮನಕ್ಕೆ ಬಂದು ಆ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಅಪ್ಲೋಡ್‌ ಮಾಡಿ, ಯಾರೂ ಸಹ ಈ ರೀತಿ ಮೋಸ ಹೋಗದಿರಿ ಎಂದು ಅವಲತ್ತುಕೊಂಡಿದ್ದಾರೆ.

ಈ ವಂಚಕ ಈ ಅಂಗಡಿಯಷ್ಟೇ ಅಲ್ಲದೆ, ಅಂದ್ರಹಳ್ಳಿ, ತಿಗಳರ ಪಾಲ್ಯ, ಡಿಗ್ರೂಪ್‌ ಸುತ್ತಮುತ್ತ ಅಂಗಡಿ ಮಾಲೀಕರಿಗೆ ವಂಚಿಸಿದ್ದಾನೆಂದು ಅವರು ತಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಂತಹ ಖದೀಮರು ಏನಾದರೂ ನಿಮ ಸುತ್ತಮುತ್ತವಿದ್ದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿರಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

RELATED ARTICLES

Latest News