Friday, October 18, 2024
Homeಬೆಂಗಳೂರುಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿದರೆ ಜೋಕೆ..! ಬೀಳಲಿದೆ ಭಾರೀ ದಂಡ

ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿದರೆ ಜೋಕೆ..! ಬೀಳಲಿದೆ ಭಾರೀ ದಂಡ

ಬೆಂಗಳೂರು, ಜು.23- ಸಂಚಾರ ನಿಯಮ ಉಲ್ಲಂಸಿ ಸ್ಕೂಟರ್ ಸವಾರ ಇಬ್ಬರನ್ನು ಕೂರಿಸಿಕೊಂಡು ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲಿ ಸಂಚರಿಸುತ್ತಾ ಸಂಚಾರಕ್ಕೆ ಅಡ್ಡಿಪಡಿಸಿದ್ದನ್ನು ಪ್ರಶ್ನಿಸಿದ ಸಾರ್ವಜನಿಕರಿಗೆ ಬೈದು ಪರಾರಿಯಾಗಿದ್ದ ಸವಾರನನ್ನು ವಾಹನ ಸಮೇತ ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದು 5 ಸಾವಿರ ದಂಡ ವಿಧಿಸಿದ್ದಾರೆ.

ವಾಹನ ಚಲಾಯಿಸುವ ಯುವಕರು ನಂಬರ್ ಪ್ಲೇಟ್ ಅಳವಡಿಸದೆ ಇಲ್ಲವೇ ನಂಬರ್ ಪ್ಲೇಟ್ ಮರೆಮಾಚಿಕೊಂಡು ರಸ್ತೆಯಲ್ಲಿ ಇತರೆ ವಾಹನಗಳಿಗೆ ದಾರಿ ಬಿಡದೆ ಅಡ್ಡಾದಿಡ್ಡಿಯಾಗಿ ಚಲಿಸುತ್ತಾ, ಅಜಾಗರೂಕತೆ, ನಿರ್ಲಕ್ಷ್ಯತೆಯಿಂದ ವಾಹನಗಳನ್ನು ಸವಾರಿ ಮಾಡುವವರ ಬಗ್ಗೆ ಸಾರ್ವಜನಿಕರು ಬಿಟಿಪಿ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳನ್ನು ಸಲ್ಲಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಇನ್‍ಸ್ಪೆಕ್ಟರ್ ನೇತೃತ್ವದಲ್ಲಿ ಒಂದು ತಂಡವನ್ನು ನೇಮಕ ಮಾಡಲಾಗಿದೆ.

ಈ ತಂಡವು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಂಡು, ಇಬ್ಬರನ್ನು ಸ್ಕೂಟರ್‍ನಲ್ಲಿ ಸವಾರ ಕೂರಿಸಿಕೊಂಡು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಸಾರ್ವಜನಿಕರಿಗೆ ಬೈದು ಪರಾರಿಯಾಗಿದ್ದ ಸವಾರನನ್ನು ಪತ್ತೆಹಚ್ಚಿ ವಿವಿಧ ಸಂಚಾರ ನಿಯಮ ಉಲ್ಲಂಘನೆಯಡಿ 5 ಸಾವಿರ ದಂಡ ವಿಧಿಸಿದ್ದಾರೆ.

ಇಂತಹ ಸಂಚಾರ ನಿಯಮ ಉಲ್ಲಂಸುವ ಸವಾರ/ಚಾಲಕರ ವರ್ತನೆಗಳು ಸಾರ್ವಜನಿಕ ವಾಹನಗಳಲ್ಲಿ ಅಳವಡಿಸಿರುವ ಡ್ಯಾಶ್ ಕ್ಯಾಮೆರಾಗಳಲ್ಲಿ ಸೆರೆಯಾದ ವಿಡಿಯೋಗಳನ್ನು ಹಾಗೂ ಸಾರ್ವಜನಿಕರ ಮೊಬೈಲ್, ಕ್ಯಾಮೆರಾಗಳಲ್ಲಿ ರೆಕಾರ್ಡ್ ಮಾಡಿದ ವಿಡಿಯೋಗಳನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪಬ್ಲಿಕ್ ಐ ಆ್ಯಪ್‍ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಹಾಗಾಗಿ ಸಂಚಾರಿ ಪೊಲೀಸರಿಗೆ ಆರೋಪಿಗಳನ್ನು ಪತ್ತೆ ಮಾಡಲು ಅನುಕೂಲವಾಗುತ್ತಿರುತ್ತದೆ. ಇಲ್ಲಿ ಸೆರೆಯಾದ ಸಂಚಾರ ಉಲ್ಲಂಘನೆಗಳ ದೂರುಗಳ ಸಂಬಂಧ ನಗರ ಸಂಚಾರ ಪೊಲೀಸರು ಶೀಘ್ರವಾಗಿ ಕ್ರಮಕೈಗೊಂಡು ದಂಡ ವಿ„ಸಿರುತ್ತಾರೆ. ಈ ಕಾರ್ಯಾಚರಣೆಯನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಹಾಗೂ ಸಿಬ್ಬಂದಿ ತಂಡ ಕೈಗೊಂಡಿರುತ್ತದೆ.

RELATED ARTICLES

Latest News