ಮಂಡ್ಯ, ಮೇ 26-ಸಂಚಾರಿ ಪೊಲೀಸರ ಎಡವಟ್ಟಿನಿಂದಾಗಿ ಬೈಕ್‌ನಲ್ಲಿ ಪೋಷಕರೊಂದಿಗೆ ಹೋಗುತ್ತಿದ್ದ ಮೂರು ವರ್ಷದ ಮಗು ಉರುಳಿ ಬಿದ್ದು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ನಿವಾಸಿಗಳಾದ ಅಶೋಕ್-ವಾಣಿ ದಂಪತಿಯ ಮಗಳು ಹೃತೀಕ್ಷಾಳಿಗೆ ನಾಯಿ ಕಚ್ಚಿದ್ದರಿಂದ ಇಂದು ಬೆಳಗ್ಗೆ ಚಿಕಿತ್ಸೆಗಾಗಿ ಬೈಕ್‌ನಲ್ಲಿ ಕರೆದುಕೊಂಡು ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೋಗುತ್ತಿದ್ದರು.
ಬೆಂಗಳೂರು-ಮೈಸೂರು ಹೆದ್ದಾರಿಯ ಸ್ವರ್ಣಸಂದ್ರ ಬಳಿ ಸಂಚಾರಿ ಪೊಲೀಸರು ಇವರ ಬೈಕ್‌ನ್ನು ಏಕಾಏಕಿ ಅಡ್ಡಗಟ್ಟಿದಾಗ ನಿಯಂತ್ರಣ ತಪ್ಪಿ ಮೂವರು ಬೈಕ್‌ನಿಂದ ಬಿದ್ದಿದ್ದಾರೆ. ಆ ವೇಳೆ ಮಗುವಿನ ತಲೆಗೆ ಗಂಭೀರ ಪೆಟ್ಟಾಗಿ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದೆ. ಕಣ್ಣ ಮುಂದೆಯೇ ಮಗಳು ಸಾವನ್ನಪ್ಪಿರುವುದನ್ನು ಕಂಡು ಪೋಷಕರು ಗೋಳಾಡಿದ್ದಾರೆ.
ಸಾರ್ವಜನಿಕರ ಆಕ್ರೋಶ: ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಸಂಚಾರಿ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಘಟನೆಗೆ ಕಾರಣರಾದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಮುಸ್ಲಿಮರನ್ನು ಹೊರತುಪಡಿಸಿ ಪಾಸ್ಪೋರ್ಟ್ ಇಲ್ಲದೆ 2024ಕ್ಕಿಂತ ಮೊದಲು ಭಾರತಕ್ಕೆ ಬಂದವರಿಗೆ ಉಳಿಯಲು ಅವಕಾಶ
- 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ರಾಜ್ಯಕ್ಕೆ 450 ವೈದ್ಯಕೀಯ ಸೀಟು ಹಂಚಿಕೆ
- ವಿಮಾನದ ಕ್ಯಾಬಿನ್ ಸಿಬ್ಬಂದಿಗಳೊಂದಿಗೆ ಅನುಚಿತ ವರ್ತಿಸಿದ ಪ್ರಯಾಣಿಕನ ಬಂಧನ
- ಧರ್ಮಸ್ಥಳ ಪ್ರಕರಣಕ್ಕೆ ಇಡಿ ಎಂಟ್ರಿ ಬೆನ್ನಲ್ಲೇ ಎನ್ಐಎ ಅಖಾಡಕ್ಕೆ : ಕೆಲವು ಎನ್ಜಿಒಗಳಿಗೆ ಸಂಕಷ್ಟ
- ನಮ್ಮ ಮೆಟ್ರೋ ಯೆಲ್ಲೋ ಲೈನ್ ಟ್ರ್ಯಾಕ್ಗಿಳಿಯಲಿದೆ ನಾಲ್ಕನೇ ರೈಲು